ಮೂತರ್ಿ ಭಗ್ನಗೊಳಿಸಿದವರ ಗಡಿಪಾರಿಗೆ ಒತ್ತಾಯ

ಲೋಕದರ್ಶನ ವರದಿ

ತಾಳಿಕೋಟೆ: ಮೈಸೂರು ಜಿಲ್ಲೆಯ ಹುಳೆಮಾವು ಗ್ರಾಮದಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ಮೂತರ್ಿಯನ್ನು ಕಿಡಗೇಡಿಗಳು ಭಗ್ನಗೊಳಿಸಿದವರನ್ನು ಹಾಗೂ ದೆಹಲಿಯ ಜಂತರ ಮಂತರನಲ್ಲಿ ಸಂವಿದಾನದ ಪ್ರತಿಯನ್ನು ದುಷ್ಕಮರ್ಿಗಳು ಸುಟ್ಟಿರುವದನ್ನು ಖಂಡಿಸಿ ಸೋಮವಾರರಂದು ಮಾದಿಗರ ಮಹಾಸಭಾ ತಾಲೂಕಾ ಹೋರಾಟ ಸಮಿತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನಾ ನೇತೃತ್ವ ವಹಿಸಿದ ಮುಖಂಡ ದೇವಿಂದ್ರ ಹಾದಿಮನಿ ಮಾತನಾಡಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರು ಇಡೀ ದೇಶಕ್ಕೆ ಒಳಿತನ್ನು ಬಯಿಸಿದವರಾಗಿದ್ದಾರೆ ಇಡೀ ದೇಶದಲ್ಲಿ ಹಸಿರು ಕ್ರಾಂತಿಯನ್ನು ಹರಿಸಿದಂತ ವ್ಯಕ್ತಿಯಾಗಿದ್ದಾರೆ ಅಂತಹ ಮಹಾನ್ ವ್ಯಕ್ತಿಯ ಮೂತರ್ಿಯನ್ನು ಕಿಡಿಗೇಡಿಗಳು ವಿರೂಪಗೊಳಿಸುವದರೊಂದಿಗೆ ಜಾತಿ ಜಾತಿಗಳ ನಡುವೆ ವಿಷಯ ಬೀಜವನ್ನು ಬಿತ್ತುವಂತಹ ಕಾರ್ಯವನ್ನು ಮಾಡಿದ್ದಾರೆ ಮತ್ತು ದೆಹಲಿಯ ಜಂತರ ಮಂತರನಲ್ಲಿ ದೇಶದ ಕಣ್ಣಾದಂತಹ ಸಂವಿಧಾನದ ಪ್ರತಿಯನ್ನು ಸುಟ್ಟು ತಮ್ಮ ದರ್ಪವನ್ನು ಮೆರೆದಿದ್ದಾರೆ ಅಂತವರ ರಕ್ಷಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಮುಂದಾಗುತ್ತಿರುವದು ಅತ್ಯಂತ ಖಂಡನೀಯವಾಗಿದೆ ಕೂಡಲೇ ಈ ಕೃತ್ಯದಲ್ಲಿ ಭಾಗಿಯಾದಂತಹ ಕಿಡಿಗೇಡಿಗಳನ್ನು ಬಂದಿಸಿ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಇನ್ನೋರ್ವ ಮುಖಂಡ ಸುಭಾಸ ಗುಂಡಕನಾಳ, ಬಸ್ಸು ಕಟ್ಟಿಮನಿ ಅವರು ಮಾತನಾಡಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮೇಲಿಂದ ಮೇಲೆ ದಲಿತ ಮೇಲೆ ದೌರ್ಜನ್ಯಗಳು ನಡೆಯುತ್ತಾ ಸಾಗಿವೆ ಆದರೆ ಸಕರ್ಾರಗಳು ಮಾತ್ರ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಾ ಅಂತವರನ್ನು ರಕ್ಷಣೆ ಮಾಡಲು ಮುಂದಾಗುತ್ತಿವೆ ಇಂತಹ ಪ್ರಕರ್ಣಗಳ ವಿರುದ್ಧ ಪ್ರತಿಭಟನೆ ನಡೆಸುವದು ಅನಿವಾರ್ಯವಾಗಿದೆ ಕೂಡಲೇ ಹುಳೆಮಾವು ಗ್ರಾಮದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಮೂತರ್ಿ ವಿರೂಪಗೊಳಿಸಿದ ವ್ಯಕ್ತಿಗಳನ್ನು ಬಂದಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಅಲ್ಲದೇ ದೆಹಲಿಯ ಜಂತರ ಮಂತರನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿದ ದೇಶ ದ್ರೋಹಿಗಳಿಗೆ ಗಲ್ಲಿಗೇರಿಸುವದರೊಂದಿಗೆ ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮೊದಲು ವಿಜಯಪೂರ ಸರ್ಕಲ್ದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ಸರ್ಕಲ್, ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ, ಶಿವಾಜಿ ಸರ್ಕಲ್ ಮಾರ್ಗವಾಗಿ ತಹಶಿಲ್ದಾರ ಕಚೇರಿಗೆ ತೆರಳಿ ತಹಶಿಲ್ದಾರ ಎಸ್.ಎಚ್.ಅರಕೇರಿ ಅವರ ಮೂಲಕ ಮುಖ್ಯಮಂತ್ರಿಗೆ ಪ್ರತಿಭಟನಾ ಕಾರರು ಮನವಿ ಸಲ್ಲಿಸಿದರು.

ಪ್ರತಿಭಟನಾ ನೇತೃತ್ವವನ್ನು ಮಾದಿಗ ಮಹಾಸಭಾ ತಾಲೂಕಾ ಹೋರಾಟ ಸಮಿತಿಯ ಮುಖಂಡರುಗಳಾದ ರಾಮಣ್ಣ ಕಟ್ಟಿಮನಿ, ಹಿರಿಗೆಪ್ಪ ಬಳಗಾನೂರ, ಮಹೇಶ ಬಾವೂರ, ಪರಶುರಾಮ ಕೂಚಬಾಳ, ಎಸ್.ಬಿ.ನಡುವಿನಮನಿ, ಸೈದಪ್ಪ ಮಾದರ, ಕಾಲಪ್ಪ ಮಿಣಜಗಿ, ಯಮನಪ್ಪ ಮಾದರ, ಮೊದಲಾದವರು ವಹಿಸಿದ್ದರು.