ಪೌರತ್ವ ಕಾಯ್ದೆಯಿಂದ ಮುಸ್ಲಿಂ ಬಾಂಧವರಿಗೆ ತೊಂದರೆ ಇಲ್ಲ

ಲೋಕದರ್ಶನ ವರದಿ ಯರಗಟ್ಟಿ 08: ಪಾಕಿಸ್ತಾನ, ಅಪಘಾನಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಧಾಮರ್ಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶೋಷಣೆಗೊಳಗಾಗಿ ಭಾರತದಲ್ಲಿ ನಿರಾಶ್ರಿತರಾಗಿ ನೆಲೆನಿಂತ 2014 ಡಿ.31ಕ್ಕೆ ಮೊದಲು ಭಾರತಕ್ಕೆ ಪ್ರವೇಶಿಸಿದ ಹಿಂದೂ, ಬೌದ್ಧ, ಸಿಖ್, ಜೈನ್, ಪಾಸರ್ಿ, ಹಾಗೂ ಕ್ರೈಸ್ತರಿಗೆ ಪೌರತ್ವ ನೀಡುವುದಕ್ಕಾಗಿ ಕೇಂದ್ರ ಸಕರ್ಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ ಇದರಿಂದ ಭಾರತೀಯ ಮುಸ್ಲಿಂ ಭಾಂದವರು ಹೆದರುವ ಅವಶ್ಯಕತೆ ಇಲ್ಲ ಎಂದು ಶಾಸಕ ಆನಂದ ಮಾಮನಿ ಹೇಳಿದರು. ಇಲ್ಲಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಭಾರತೀಯ ಜನತಾ ಪಾಟರ್ಿ ಹಮ್ಮಿಕೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಎಪಿಎಮ್ಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ವೆಂಕಟೇಶ ದೇವರಡ್ಡಿ, ಈರಣ್ಣ ಚಂದರಗಿ, ಸುರೇಶ ಬಂಟನೂರ, ಸದಾನಂದ ಪಾಟೀಲ, ಇಮಾಮಸಾಬ ಮನಿಯಾರ, ಶಿವುಕುಮಾರ ಜಕಾತಿ, ನೀಲಪ್ಪಾ ಬಾಕರ್ಿ, ಅಪ್ಪಣ್ಣ ರವಿ, ನಾಶೀರ ಖಾಜಿ, ಮಹಾಂತೇಶ ಕೊಪ್ಪದ, ವಿನಾಯಕ ಬೆಲ್ಲದ, ಯಕ್ಕೇರೆಪ್ಪ ತಳವಾರ, ಬಾಬು ಕಾಮನ್ನವರ ಮುಂತಾದವರಿದ್ದರು.