ನವದೆಹಲಿ, ಸೆ 22 ಭಾರತದ ರಾಮಕುಮಾರ್ ರಾಮನಾಥನ್ ಅವರು ಇಲ್ಲಿ ನಡೆಯುತ್ತಿರುವ ಮರ್ರೆ ಟ್ರೋಫಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದ ಸೆಮಿಫೈನಲ್ಸ್ ನಲ್ಲಿ ಸೋತು ನಿರಾಸೆ ಅನುಭವಿಸಿದರು.
ಶನಿವಾರ ತಡರಾತ್ರಿ ನಡೆದ 176ನೇ ಶ್ರೇಯಾಂಕಿಂತ ರಾಮನಾಥನ್ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ 7-5, 1-6, 6-4 ಅಂತರದಲ್ಲಿ ಫ್ರಾನ್ಸ್ ನ 16ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ ಸೋಲು ಅನುಭವಿಸಿದ್ದಾರೆ .
ಪಂದ್ಯದ ಮೊದಲ ಸೆಟ್ನಲ್ಲಿ ರಾಮಕುಮಾರ್ ಹಾಗೂ ಅಲೆಕ್ಸಾಂಡರ್ ಮುಲ್ಲರ್ ಅವರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಆದರೆ, ಕೇವಲ ಒಂದೇ ಒಂದು ಅಂಕ ಅಂತರದಲ್ಲಿ ಭಾರತದ ಆಟಗಾರ ಮೊದಲ ಸೆಟ್ ಅನ್ನು ಬಿಟ್ಟುಕೊಟ್ಟರು. ನಂತರ ಎರಡನೇ ಸೆಟ್ನಲ್ಲಿ ಬಲವಾಗಿ ಪುಟಿದೆದ್ದ ರಾಮಕುಮಾರ್ ರಾಮನಾಥನ್ ಕೇವಲ ಒಂದೇ-ಒಂದು ಗೇಮ್ ಬಿಟ್ಟುಕೊಡುವ ಮೂಲಕ 6-1 ಅಂತರದಲ್ಲಿ ಗೆದ್ದರು.
ನಂತರ, ಮೂರನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಎಡವಿದ ಭಾರತದ ಆಟಗಾರ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ 4-6 ಅಂತರದಲ್ಲಿ ಸೋತು ಪಂದ್ಯ ಬಿಟ್ಟುಕೊಟ್ಟರು.
ಪುರುಷರ ಡಬಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ರಾಮಕಮಾರ್ ರಾಮನಾಥನ್ ಹಾಗೂ ಝೆಕ್ ಗಣರಾಜ್ಯದ ಮಾರೆಕ್ ಗೆಂಗೆಲ್ ಜೋಡಿಯು 6-1, 6-3 ಅಂತರದಲ್ಲಿ ನೇರ ಸೆಟ್ಗಳಿಂದ ಅಗ್ರ ಶ್ರೇಯಾಂಕದ ಜ್ಯಾಮಿ ಮರ್ರೆರಿ (ಗ್ರೇಟ್ ಬ್ರಿಟನ್) ಹಾಗೂ ಜಾನ್ ಪ್ಯಾಟ್ರಿಕ್ ಸ್ಮಿತ್ (ಆಸ್ಟ್ರೇಲಿಯಾ) ಜೋಡಿಯ ವಿರುದ್ಧ ಸೋತು ನಿರಾಸೆ ಅನುಭವಿಸಿತು.