ಆಸ್ತಿಗಾಗಿ ಚಿಕ್ಕಪ್ಪನೊಂದಿಗೆ ಸೇರಿ ಪುತ್ರನಿಂದನೇ ಉದ್ಯಮಿ ತಂದೆಯ ಕೊಲೆ: ಪ್ರಕರಣ ಭೇದಿಸಿದ ದಕ್ಷಿಣ ವಿಭಾಗದ ಪೊಲೀಸರು

ಬೆಂಗಳೂರು, ಜೂ.19,ಆಸ್ತಿಗಾಗಿ ಚಿಕ್ಕಪ್ಪನೊಂದಿಗೆ ಸೇರಿ ಪುತ್ರನೇ ತನ್ನ ತಂದೆಯನ್ನು ಕೊಲೆ ಮಾಡಿರುವ ಪ್ರಕರಣವನ್ನು ಭೇದಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಇದೇ ವರ್ಷದ ಫೆಬ್ರವರಿ 14ರಂದು ನಡೆದ ಬಳ್ಳಾರಿಯ ಸ್ಟೀಲ್ ಆಂಡ್‌ ಅಲೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ ಅವರ ಸುಪಾರಿ ಕೊಲೆ ಹಂತಕರನ್ನು ದಕ್ಷಿಣ ವಿಭಾಗದ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಮಾಧವ ಅವರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಮಾಧವ ಕಿರಿಯ ಮಗ ಹರಿಕೃಷ್ಣ ತಲೆಮರೆಸಿಕೊಂಡಿದ್ದಾರೆ.ಗೋವಾದ ಮಡಗಾಂ ನಗರದ ಮೀನು ವ್ಯಾಪಾರಿ  ರಿಯಾಜ್ ಅಬ್ದುಲ್ ಶೇಖ್ (40), ಯಲಹಂಕ ಕೋಗಿಲು ಕ್ರಾಸ್ ನಲ್ಲಿ ಮೊಬೈಲ್ ಸರ್ವೀಸ್ ಕೆಲಸ ಮಾಡುವ ಶಹಬಾಜ್ (23), ಗೋವಾದ ಮಡಗಾಂ ಕಾರೆವಾನ್‌ನ ಕಾರ್ಪೆಂಟರ್ ಕೆಲಸ ಮಾಡುತ್ತಿರುವ  ಶಾರೂಕ್‌ ಮನ್ಸೂರ್ (24),  ಯಶವಂತಪುರದ ಬಿ.ಕೆ.ನಗರ ಆಟೋ ಚಾಲಕ ಆದಿಲ್ ಖಾನ್ (28), ಶಾಮಣ್ಣ ಗಾರ್ಡನ್‌ನಲ್ಲಿ ಕಾರ್ಪೆಂಟರ್ ಕೆಲಸ ಮಾಡುವ ಸಲ್ಮಾನ್ (24) ಬಂಧಿತ ಆರೋಪಿಗಳು.

ಕೊಲೆಯ ಹಿನ್ನೆಲೆ: ಬಳ್ಳಾರಿಯ ನಿವಾಸಿ ಸಿಂಗನಮನ ಮಾಧವ ಅವರು ಖ್ಯಾತ ಉದ್ಯಮಿಯಾಗಿದ್ದು, ಬಳ್ಳಾರಿಯಲ್ಲಿ ಸ್ಟೀಲ್ ಆಂಡ್ ಅಲೈ ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಲಾಳ ಮುಖ್ಯರಸ್ತೆ ರಾಯಲ್ ಫಾಮ್ಸ್ ಬಡಾವಣೆಯಲ್ಲಿ ತಮ್ಮ ಪತ್ನಿ  ಪಾರ್ವತಿ, ಎರಡನೇ ಪುತ್ರ ಮಧುಬಾಬು ಅವರೊಂದಿಗೆ ವಾಸವಾಗಿದ್ದರು. ಮೃತ ಮಾಧವ ಅವರೊಂದಿಗೆ ಅವರ ತಮ್ಮ ಶಿವರಾಮ್ ಪ್ರಸಾದ್ ಹಾಗೂ ಮಾಧವ ಅವರ ಕಿರಿಯ ಮಗ ಹರಿಕೃಷ್ಣ ಆಸ್ತಿಯ ವಿಚಾರದಲ್ಲಿ ಹಲವು ಬಾರಿ ಜಗಳವಾಡಿದ್ದರು. 2020, ಫೆಬ್ರವರಿ 14ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಾಧವ ಅವರು ಗುಬ್ಬಲಾಳ ಮುಖ್ಯರಸ್ತೆಯ ರಾಯಲ್ ಫಾಮ್ಸ್ ಲೇಔಟ್‌ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಕತ್ತನ್ನು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದರು.ಮೃತರ ಕಿರಿಯ ಮಗ ಹರಿಕೃಷ್ಣ  ಹಾಗೂ ಮೃತರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಇತರರು ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ