ಲೋಕದರ್ಶನ ವರದಿ
ಹರಪನಹಳ್ಳಿ 25: ಸ್ಥಳೀಯ ಪುರಸಭೆಯ 2019-20ನೇ ಸಾಲಿನ ಆಯ-ವ್ಯಯವನ್ನು ಸೋಮವಾರ ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್ ಮಂಡಿಸಿದರು. ಆರಂಭಿಕ ನಗದು ಮತ್ತು ಬ್ಯಾಂಕ್ ಶಿಲ್ಕು 60,88,160 ಲಕ್ಷರೂ, ನಿರೀಕ್ಷಿತ ಆದಾಯ 55,18,36,639 ಸೇರಿದಂತೆ ಒಟ್ಟು ಜಮ-55,79,24,799 ಕೋಟಿರೂ ಅದರಲ್ಲಿ ನಿರೀಕ್ಷಿತ ಖರ್ಚು 55,21,73,758 ಕೋಟಿರೂಗಳಾಗಿದ್ದು, ಒಟ್ಟು 57,51,041 ಲಕ್ಷರೂಗಳ ಉಳಿತಾಯ ಬಜೆಟ್ಗೆ ಸಭೆ ಅನುಮೋದನೆ ನೀಡಿತು.
ನಿರೀಕ್ಷಿತ ಆದಾಯಗಳು ವೇತನ ಅನುದಾನ(ಎಸ್ಎಫ್ಸಿ)-3.50ಕೋಟಿ, ಎಸ್ಎಫ್ಸಿ ಮುಕ್ತ ನಿಧಿ-4ಕೋಟಿ, ಎಸ್ಎಫ್ಸಿ ವಿಶೇಷ ಅನುದಾನ-3ಕೋಟಿ, ಎಸ್.ಎಫ್.ಸಿ.ವಿದ್ಯುತ್ ಅನುದಾನ-3ಕೋಟಿ, ನಗರೋತ್ಥಾನ ಅನುದಾನ-5ಕೋಟಿ, ಕೇಂದ್ರ ಸಕರ್ಾರದ (ಸಲ್ಮ್ ಯೊಜನೆ) ಅನುದಾನ 11 ಲಕ್ಷ, ಕೇಂದ್ರ ಸರ್ಕಾರ ಅನುದಾನ(14ನೇ ಹಣಕಾಸು ಯೋಜನೆ)-5.28ಕೋಟಿ, ಸಂಸತ್ ಸದಸ್ಯರ ಅನುದಾನ 50ಲಕ್ಷ, ವಿಧಾನ ಸಭಾ ಸದಸ್ಯರ ಅನುದಾನ 50ಲಕ್ಷ ವಿಧಾನ ಪರಿಷತ್ ಸದಸ್ಯರ ಅನುದಾನ 25ಲಕ್ಷ, ಹೈದ್ರಬಾದ್ ಕನರ್ಾಟಕದ ವಿಶೇಷ ಅನುದಾನ 1ಕೋಟಿ, ಕೇಂದ್ರ ಮತ್ತು ರಾಜ್ಯ ಸಕರ್ಾರದ ಸ್ವಚ್ಚ ಭಾರತ ಅಭಿಯಾನ ಯೋಜನೆ-60ಲಕ್ಷ, ಎಸ್ಎಫ್ಸಿ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಬಿಡುಗಡೆಯಾಗಬಹುದಾದ ಅನುದಾನ-50ಲಕ್ಷ,
ನಿರೀಕ್ಷಿತ ಖಚರ್ು
ಸಿಬ್ಬಂದಿ ವೆಚ್ಚ-3.50ಕೋಟಿ, ವಿದ್ಯುತ್ ಅನುದಾನ ಪಾವತಿ-3ಕೋಟಿ, ಶೇ.24.10 ಯೋಜನೆಯ ವೆಚ್ಚಕ್ಕಾಗಿ-84.35ಲಕ್ಷ ಸರಬರಾಜುದಾರರ, ಗುತ್ತಿಗೆದಾರರ ಠೇವಣಿ ಶುಲ್ಕು-25ಲಕ್ಷ, ಗುತ್ತಿಗೆದಾರ, ಸರಬರಾಜು ತೆರಿಗೆಗಳು, ಆದಾಯ, ವಾಣಿಜ್ಯ ತೆರಿಗೆ, ರಾಜಧನ, ಕಾಮರ್ಿಕ ಕಲ್ಯಾಣ ನಿಧಿ-97.95ಲಕ್ಷ, ಬೀದಿ ದೀಪ ಖರೀದಿ-98ಲಕ್ಷ, ರಸ್ತೆ-ಚರಂಡಿ ಸೇತುವೆ ಕಾಮಗಾರಿ-5ಲಕ್ಷ, ಘನತಾಜ್ಯ ವಸ್ತು ವಿಲೇವಾರಿ ಘಟಕ ಕಾಮಗಾರಿಗಳಿಗಾಗಿ-45ಲಕ್ಷ, ಮೂಲಭೂತ ಸೌಕರ್ಯಕ್ಕಾಗಿ-2ಕೋಟಿ, ಇತರೆ ಅಭಿವೃದ್ದಿ ಕಾಮಗಾರಿಗಾಗಿ-7ಕೋಟಿ, ಅಸಮಾನ್ಯ ಬಂಡವಾಳ ಅಭಿವೃದ್ದಿ ಕಾಮಗಾರಿಗಳಿಗೆ-21.29ಕೋಟಿರೂ.
ಸಭೆಯಲ್ಲಿ ಗಮನ ಸೆಳೆದ ಮಹಿಳಾ ಸದಸ್ಯರ ಮತ್ತು ಪುರುಷ ಸದಸ್ಯರು ಧರಿಸಿದ ಉಡುಪು ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸತ್ಯನಾರಾಯಣ್ ಮತ್ತು ಪು.ಸರ್ವಸದಸ್ಯರು ಹಾಗೂ ಮುಖ್ಯಾಧಿಕಾರಿ ನಾಗರಾಜ್ ನಾಯ್ಕ ಬಿ.ಆರ್. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.