ಮುನಿ ಮಹಾರಾಜ ಕಾಡಿನಲ್ಲಿ ತಪಸ್ಸು

ಕಾಗವಾಡ: ಒಂದೆಡೆ ದಯೆಯನ್ನು ಧರ್ಮವೆನುತಿರುವರು. ಮತ್ತೊಂದೆಡೆ ದಯೆತೋರಿ ದ್ವೇಷ ಅಧರ್ಮ ಹೆಚ್ಚಿಸುತಿರುವರು. ಒಂದೆಡೆ ಧರ್ಮದ ಮಾತನಾಡುತಿರುವರು. ಆದರೆ ಮತ್ತೊಂದೆಡೆ ಅಧರ್ಮದಿಂದ ದ್ವೇಷವನು ಹೆಚ್ಚಿಸುತ್ತಿರುವಾಗ ರಾಷ್ಟ್ರಸಂತ ಚಿನ್ಮಯಸಾಗರ(ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಮಧ್ಯಪ್ರದೇಶ ರಾಜ್ಯದಲ್ಲಿ ಕಾಡಿನಲ್ಲಿ ಚಾತುರ್ಮಾಸ ಆಚರಿಸುತ್ತಿರುವಾಗ ಅನೇಕ ಶಿಕ್ಷಣದ ಗಂಧ ಇಲ್ಲದ ಮತ್ತು ಆದಿವಾಸಿ ಕುಟುಂಬಗಳಿಗೆ ಅನೇಕ ಚಮತ್ಕಾರಗಳಿಂದ ಅವರಲ್ಲಿರುವ ಕೆಲ ಅಂಧಶ್ರದ್ಧೆಗಳು ಮಹಾರಾಜರಿಂದ ಹೊರ ಹಾಕಿದ್ದರಿಂದ ಚಮತ್ಕಾರಿ ಜಂಗಲವಾಲೆ ಬಾಬಾ ಎಂದು ಉತ್ತರ ಭಾರತದಲ್ಲಿ ಖ್ಯಾತಿ ಪಡೆದಿದ್ದಾರೆ.

ಚಿನ್ಮಯಸಾಗರ ಮುನಿ ಮಹಾರಾಜರು 32 ವರ್ಷಗಳ ಮುನಿ ಅವಧಿಯಲ್ಲಿ ಹೆಚ್ಚಿನ ಸಮಯ ಕಾಡಿನಲ್ಲಿ ಕಳೆದಿದ್ದಾರೆ. ಖಂಡಿತ ಮುನಿ ಪರಂಪರೆ ಪ್ರಾರಂಭಿಸಿದ ಆಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ಬಳಿಕ ಜಂಗಲವಾಲೆ ಬಾಬಾ ಇವರು ಕಾಡಿನಲ್ಲಿರುವ ಪ್ರಾಣಿಗಳ ಜತೆಗೆ ಅಲ್ಲೇ ಉಳಿದು ದೇಹ ದಂಡನ ನೀಡುವದೊಂದಿಗೆ ಆದಿವಾಸಿ ಕುಟುಂಬಗಳಿಗೆ ಮುನಿ ಮಹಾರಾಜರು ಆಶಾಕಿರಣಗಳಾಗಿ ಹೊರ ಹೊಮ್ಮಿದರು.

ಜಂಗಲವಾಲೆ ಬಾಬಾ ಮಹಾರಾಜರು ಉತ್ತರ ಪ್ರದೇಶದ ಶಿವಪುರಿ ನಗರದಲ್ಲಿ ಚಾತುರ್ಮಾಸ ಆಚರಿಸುತ್ತಿರುವಾಗ ಈಲಾಹಾಬಾದ್ದಿಂದ ಸ್ವಾಮೀಜಿಯವರ ದರ್ಶನಕ್ಕಾಗಿ ಆಗಮಿಸಿರುವ ಓರ್ವ ಯುವತಿ ಕಳೇದ 6 ವರ್ಷಗಳಿಂದ ಮನೊ ಋಗ್ನವಾಗಿದ್ದಳು. ಎಲ್ಲೆಡೆ ಆಕಿಗೆ ಉಪಚಾರಿಸಿದರು. ಯಾವುದೇ ಪರಿಣಾಮ ಬಿರಲಿಲ್ಲಾ. ಮಹಾರಾಜರ ದರ್ಶನ ಪಡೆದ ಬಳಿಕ ಆಕಿಯ ಮೇದುಳ ಮೇಲೆ ಆಗಿರುವ ಪರಿಣಾಮದಿಂದ ಹೊರ ಬಂದಿದ್ದನ್ನು ಕಂಡು ಅವರ ತಂದೆ-ತಾಯಿ ಮತ್ತು ಮಧ್ಯಪ್ರದೇಶದ ತೆಂದುಖೇಡಾ ದಮೋಹ ಇಲ್ಲಿಯ ಉದ್ಯಮಿ ಚಂದ್ರಕುಮಾರ ಸರಾಫ್ ಇವರ ಪುತ್ರಿಗೆ ಇದೇ ರೀತಿ ಆಗಿರುವ ಕಾಯಿಲೆ ದೂರವಾಗಿದ್ದರಿಂದ ಬಾಬಾ ಅವರ ಚಮತ್ಕಾರ ಬಗ್ಗೆ ಕೊಂಡಾಡಿದರು.

ಮಹಾರಾಷ್ಟ್ರದ ರಾಜ್ಯದ ಅಂಬೆಜೊಗಾಯಿಯಲ್ಲಿ ವಿಹಾರ ಮಾಡುವಾಗ ಧಾರಾಕಾರವಾಗಿ ಮಳೆ ಸುರಿಯಲು ಪ್ರಾರಂಭವಾಯಿತು. ಆಗ ಅವರೊಂದಿಗೆಯಿರುವ ಶ್ರಾವಕರು ಆಶ್ರಯ ಪಡೆಯಲು ಧಾವಿಸಿದರು. ಆದರೆ ಆಶ್ಚರ್ಯವೆಂದರೆ ಮಹಾರಾಜರ ಸುತ್ತಡೆ ಮಳೆ ಹನಿ ಬಾರದೆ ಬೇರೆ ಕಡೆ ಸುರಿಯುವದನ್ನು ನಾವು ಕಂಡಾರೆ ಕಂಡಿದ್ದೇವೆಯೆಂದು ಅಲ್ಲಿಯ ಶ್ರಾವಕರೊಂದಿಗೆ ಶ್ರೀಮತಿ ಸುಮನಲತಾ ಮೋದಿತಿಳಿಸಿದರು.

ಇದೇ ರೀತಿ ಇನ್ನೊಂದು ಆಶ್ಚರ್ಯದ ಸಂಗತಿ ಹಾಗೂ ಈಗಲೂ ಸಾಕ್ಷಿಯಾಗಿರುವ ಅಲ್ಲಿಯ ಸಮಾಜದ ಆಧ್ಯಕ್ಷ ಜೀವನ ಸಂಗವಿ, ಪೊಲೀಸ್ ನೀರಿಕ್ಷಕ ಪವನ ಚಾಂಬಾರಕರ ಇವರ ಅವರ ಕುಟುಂಬ ಸಮೇತ ಸ್ವಾಮೀಜಿಗಳ ದರ್ಶನ ಪಡೆಯಲು ರಾತ್ರಿ ವೇಳೆ ಹೋಗುತ್ತಿರುವಾಗ ಅವರ ವಾಹನ ಚಾಲಕ ವಾಹನ ಚಲಾಯಿಸುವಾಗ ನಿದ್ರೆಯಲ್ಲಿ ಹೋದನು. ಇದನ್ನು ಅವರ ಕುಟುಂಬದವರು ಕಂಡಿದ್ದರು. ಆದರೂ ಆ ವಾಹನವನ್ನು ಬೇರೆಯವರು ಚಲಾಯಿಸಿದಂತೆ ಆಗುವದನ್ನು ಕಂಡಿದ್ದು, ಆ ವಾಹನ ಸುಮಾರು 2 ಕಿ.ಮೀ ಅಂತರದವರೆಗೆ ಚಲಿಸಿದ್ದ ಸಂಗತಿಗಳು ಸ್ವಾಮೀಜಿಯವರ ದರ್ಶನ ಪಡೆಯಲು ಆಗಮಿಸುತ್ತಿರುವ ಅಲ್ಲಿಯ ಶ್ರಾವಕರು ಹೇಳುತ್ತಾ ಚಮತ್ಕಾರಿ ಜಂಗಲವಾಲೆ ಬಾಬಾ ಎಂದು ಘೋಷಣೆ ಕೂಗುತ್ತಿದ್ದಾರೆ.