ಮಾನವಿಯತೆ ಮೇರೆದ ಮುಂಡಗೋಡ ಪೊಲೀಸರು ; ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು
ಮುಂಡಗೋಡ: ಪಟ್ಟಣದ ಅರಣ್ಯ ಇಲಾಖೆಯ ಸಾಲು ಮರದ ತಿಮ್ಮಕ್ಕನ ಉದ್ಯಾನವನದ ಹತ್ತಿರ ಅನಾರೋಗ್ಯದಿಂದ ಬಳಲುತ್ತದ್ದ ಅಪರಿಚಿತ ವೃದ್ದನೊಬ್ಬ ಕಾಲುನಡಿಗೆಯಲ್ಲಿ ಹೋಗುತ್ತಿರುವಾಗ ಮೂಛರ್ೆ ಬಂದು ಬಿದ್ದವನನ್ನು ಪೊಲೀಸ ಇಲಾಖೆಯ ಸಿಬ್ಬಂದಿಗಳು ಆತನಿಗೆ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೇರೆದ ಘಟನೆ ಇಂದು ನಡೆದಿದೆ.
ಇಂದು ಮಧ್ಯಾಹ್ನದ ಸಮಯದಲ್ಲಿ ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿರುವಾಗ ಅರಣ್ಯ ಇಲಾಖೆಯ ಹತ್ತಿರ ಊಟ ವಿಲ್ಲದೆ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದ ಮೂಛರ್ೆ ಬಂದು ಬಿದ್ದಿದ್ದಾನೆ. ಆತನ್ನುಕಂಡ ಶಿಕ್ಷಕರಾದ ದಾಸಪ್ಪಾ ಎನ್ನುವವರು ಆತನನ್ನು ಕಂಡು ಪೊಲೀಸ್ಠಾಣೆಗೆ ಪೋನ ಮಾಡಿದ್ದಾರೆ. ಕೂಡಲೆ ಸಿಪಿಐ ಶಿವಾನಂದ ಚಲವಾಧಿ ಪೊಲೀಸ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಎ.ಎಸ್.ಐ ಆಶೋಕ ರಾಟೋಡ, ಹವಾಲ್ದಾರ ಧರ್ಮರಾಜ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಮಹೇಶ ಹತ್ತಳ್ಳಿ ಕೂಡಲೆ ಅನಾರೋಗ್ಯದಿಂದ ಬಳಲುತ್ತದ್ದ ಅಪರಿಚಿತ ವೃದ್ದನನ್ನು ತಮ್ಮ ವಾಹನದಲ್ಲೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಆತನನ್ನು ಎಲ್ಲಿಯವನೆಂದು ವಿಚಾರಿಸಿದಾಗ ಸಮನಾದ ವಿಳಾಸವನ್ನು ಹೇಳುತ್ತಿಲ್ಲಾ ಎಂದು ತಿಳಿದು ಬಂದಿದೆ. ಹಸಿವಿನಿಂದ ಬಳಲುತ್ತಿರುವುದನ್ನು ತಿಳಿದ ಕೂಡಲೆ ಅವನಿಗೆ ಹೋಟೆಲನಿಂದ ಊಟ ತಂದು ಕೊಟ್ಟು ಮಾನವಿಯತೆಯನ್ನು ಮೆರೆದಿದ್ದಾರೆ. ಈ ಪೊಲೀಸ ಸಿಬ್ಬಂದಿಗಳು ಮಾಡಿದ ಕೆಲಸಕ್ಕೆ ತಾಲೂಕಿನ ಸಾರ್ವಜನಿಕರು ಮೇಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ,