ಲೋಕದರ್ಶನ ವರದಿ
ಮುಧೋಳ 31: ಗುರುವಾರ ಬೆಳ್ಳಂ ಬೆಳಿಗ್ಗೆ ಆರಂಭವಾದ ರಾಜ್ಯ ಹೆದ್ದಾರಿ ರಸ್ತೆಯ ಅಕ್ಕಪಕ್ಕದ ಅತೀಕ್ರಮಣ ತೆರವು ಕಾಯರ್ಾಚರಣೆ ಶುಕ್ರವಾರ ಸಹ ಮುಂದುವರೆದಿದೆ, ಶುಕ್ರವಾರ ಸಂತೆ ದಿನವಾಗಿರುವದರಿಂದ ಸಂಚಾರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಬಸ್ ನಿಲ್ದಾಣ ಸಮಿಪದ ಜಡಗಾಬಾಲಾ ಸರ್ಕಲ್ದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ವರೆಗೆ ಮಾತ್ರ ತೆರವು ಕಾಯರ್ಾಚರಣೆ ಕೈಗೊಳ್ಳಲಾಗಿದೆ.
ಇತ್ತ ಬಸವೇಶ್ವರ ಸರ್ಕಲ್ ನಲ್ಲಿ ಮುಧೋಳ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಅನಿಧರ್ಿಷ್ಟ ಅವಧಿ ಯ ಧರಣಿ ಸತ್ಯಾಗ್ರಹ ಕೂಡಾ ಮುಂದುವರೆದಿದೆ, ವಾಹನಗಳು ಒಂದರಹಿಂದೆ ಒಂದರಂತೆ ನಿರಂತರವಾಗಿ ಸಾಗುತ್ತಿದ್ದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ವಯೋವೃದ್ದರು,ಮಹಿಳೆಯರು ಒಂದು ಕಡೆಯಿಂದ ಇನ್ನೊಂದು ಕಡೆ ರಸ್ತೆದಾಟಲು ಹರಸಾಹಸ ಪಡಬೇಕಾಯಿತು.
ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ ಸರ್ಕಲ್ ಮುಂಭಾಗದಲ್ಲಿ ನಗರ ಭೂಮಾಪ ಇಲಾಖೆ, ನಗರಸಭೆ ಹಾಗೂಕಂದಾಯ ಇಲಾಖೆಯವರು ರಾಜ್ಯ ಹೆದ್ದಾರಿ ರಸ್ತೆ ಸವರ್ೆಕಾರ್ಯ ಕೈಗೊಂಡು ಅತೀಕ್ರಮಣಗೊಂಡಿರುವ ಸ್ಥಳವನ್ನು ಗುರು ತಿಸುವ ಕಾರ್ಯದಲ್ಲಿ ನಿರ ತರಾಗಿದ್ದರು. ಆದರೆ ಈ ಬಗ್ಗೆ ಸುದ್ದಿಗಾರರಿಗೆ ರಸ್ತೆಯ ನಿಧರ್ಿಷ್ಟ ಅಳತೆ ಎಷ್ಟು ಇದೆ ಎಂಬುದನ್ನು ಪ್ರಶ್ನಿಸಿದಾಗ ಇದಕ್ಕೆ ಯಾವುದೇ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ, ಇದರಿಂದ ನಗರದಲ್ಲಿ ನಡೆಯುತ್ತಿರುವ ತೆರವು ಕಾಯರ್ಾಚರಣೆ ಎಷ್ಟು ಅಳತೆಯದ್ದಾಗಿರ ಬಹುದೆಂಬ ಸ್ಪಷ್ಟ ಮಾಹಿತಿ ಇಲ್ಲಿಯವರಿಗೂ ಲಭ್ಯವಾಗುತ್ತಿಲ್ಲ.
ತಹಸೀಲ್ದಾರ ಡಿ.ಜಿ.ಮಹಾತ್,ಮುಧೋಳ ನಗರ ಭೂಮಾಪನ ಇಲಾಖೆಯ ಅಧಿಕಾರಿ ಆರ್.ವೈ.ಬಸರೀಗಿಡದ, ಜಮಖಂಡಿ ಭೂಮಾಪನ ಇಲಾಖೆಯ ಅಧಿಕಾರಿ ಎ.ಜೆ.ಶೇಖ, ಮಹಾಲಿಂಗಪೂರ ಭೂಮಾಪನ ಇಲಾಖೆಯ ಅಧಿಕಾರಿ ಎಂ.ಎಂ.ನ್ಯಾಮಗೌಡ,ನಗರಸಭೆಯ ಪೌರಾಯುಕ್ತರಮೇಶ ಜಾಧವ, ಅಭಿಯಂತರ ಎಂ.ಬಿ.ಹೊಸೂರ ಹಾಗೂ ಸಿಬ್ಬಂದಿ ವರ್ಗದ ವರು ಸವರ್ೆಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರ ಬಾಗಲಕೋಟೆಗೆ ಆಗಮಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಭೇಟಿಯಾಗಿ ಮನವಿ ಸಲ್ಲಿಸಲು ಮುಧೋಳ ನಗರ ಹಿತರಕ್ಷಣಾ ಸಮಿತಿಯ 12 ಜನ ಪ್ರಮುಖರು ತೆರಳಿದ್ದಾರೆ, ಈ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಗುರುವಾರ ಮತ್ತು ಶುಕ್ರವಾರ ಎರಡೂ ದಿನಗಳಿಂದ ನಗರದಲ್ಲಿ ಮುಂಜಾನೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿ ದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಪಡುವಂತಾಗಿದೆ.
ಹೆಸ್ಕಾ ಇಲಾಖೆಯವರು ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವ ವೇಳಾಪಟ್ಟಿ ಕುರಿತು ಯಾವುದೇ ಮಾಹಿತಿ ನೀಡಿರುವದಿಲ್ಲ.
ಶನಿವಾರವೂ ಸಹ ಅತೀಕ್ರಮಣ ತೆರವು ಕಾಯರ್ಾಚರಣೆ ಮುಂದುವರೆಯಲಿಗದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ ಅಲ್ಲದೆ ಹಾಗೂ ಅನಿಧರ್ಿಷ್ಟ ಅವಧಿ ಧರಣಿ ಸತ್ಯಾಗ್ರಹ ಕೂಡಾ ಮುಂದುವರೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.