ಮುಧೋಳ: ನಾಳೆ ಯದುರೇಶ್ವರ ಶಿವ ಮಂದಿರ ಉದ್ಘಾಟನಾ ಕಾರ್ಯಕ್ರಮ

ಲೋಕದರ್ಶನ ವರದಿ

ಮುಧೋಳ 12: ತಾಲ್ಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿನ ಜೆ.ಕೆ.ಸಿಮೆಂಟ್ ಕಂಪೆನಿ ಸುಂದರವಾದ ಕಲಾತ್ಮಕ ಕೆತ್ತನೆಯ ಯದುರೇಶ್ವರ ಶಿವ ಮಂದಿರ ಉದ್ಘಾಟನೆ ಶುಕ್ರವಾರ ನಡೆಯಲಿದೆ.

ಅತ್ಯಂತ ಸುಂದರವಾದ ದೇವಾಲಯ ನಿರ್ಮಾಣ ಮಾಡಲಾಗಿದೆ. ರಾಜಸ್ತಾನದ ಪಿಂಕ ಕಲ್ಲಿನಲ್ಲಿ ಕಟ್ಟಲಾಗಿದೆ. ಮಂದಿರದ ಕಂಬ ಮೇಲಛತ್ತು ಎಲ್ಲಡೆ ಕಲೆ ಕಸುರಿ ಅರಳಿದೆ. ಎಲ್ಲ ಕೆತ್ತನೆಯನ್ನು ಮಸಿನ್ ಮುಖಾಂತರ ಮಾಡಲಾಗಿದೆ. ರಾಜಸ್ತಾನದಲ್ಲಿ ಕೆತ್ತನೆ ಮಾಡಲಾಗಿದೆ. ಈ ಮಂದಿರ ನೋಡಿದರೆ ಪುರಾತನ ಐತಿಹಾಸಕ ಮಂದಿರದಂತೆ ಕಾಣುತ್ತದೆ. ಈ ಭವ್ಯ ಮಂದಿರ ನಿರ್ಮಾಣಕ್ಕೆ  ಒಂದೇ ಒಂದು ಮುಷ್ಠಿ ಸಿಮೆಂಟ್ ಹಾಗೂ ಕಬ್ಬಿಣ ಬಳಿಕೆ ಮಾಡದೇ ನಿರ್ಮಿಸಲಾಗಿದೆ  ಇದು ನೂರಾರು ವರ್ಷ ಬಾಳಿಕೆ ಬರುತ್ತದೆ.

ಜೆ.ಕೆ.ಗ್ರುಪ್ ಮಾಲೀಕರಾದ ಯದುಪತಿ ಸಿಂಘಾನಿಯಾ ನಿರ್ದೇಶಕರಾದ  ಮಾಧವಕೃಷ್ಣ ಸಿಂಘಾನಿಯಾ, ರಾಘವಪತ್ತ ಸಿಂಘಾನಿಯಾ ಅವರು ಹಲವಾರು ಮಂದಿರಗಳನ್ನು ವಿಕ್ಷೀಸಿ ಇದನ್ನು ವಿಶಿಷ್ಠವಾಗಿನಿರ್ಮಿಸಲು  ಸಂಕಲ್ಪಿಸಿದರು. ಮಂದಿರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಇಲ್ಲಿಯ ಘಟಕ ಮುಖ್ಯಸ್ಥ ಆರ್.ಬಿ.ಎಂ.ತ್ರಿಪಾಠಿ   ಮುತುವರ್ಜಿ  ವಹಿಸಿ ಅನುಷ್ಠಾನಗೊಳಿಸಿದ್ದಾರೆ. ಶಿವಲಿಂಗವನ್ನು ನರ್ಮದಾ ನದಿಯಿಂದ ತರಲಾಗಿದೆ. ವಿಶಾಲವಾದ 6 ಎಕರೆ ಜಮೀನದಲ್ಲಿ ಗಾರ್ಡನ್ ನಿರ್ಮಿಸಲಾಗಿದೆ 

ಕಾರಖಾನೆ  ಹಾಗೂ ಪದಮಪತ್ತ ವಸತಿ ಸಮುಚ್ಚದ ಮಧ್ಯೆ ನಿರ್ಮಿಸಲಾಗಿದೆ ರಾಜಸ್ಥಾನದ ಬನ್ಸಿ ಪಹಾರಪುರದ ಪಿಂಕ್ ಕಲ್ಲಿನಲ್ಲಿ ಕೆತ್ತಲಾಗಿದೆ. 11700 ಸ್ಕೇರ್ ಫೀಟ್ ಮಂದಿರದ ಕಟ್ಟಡವನ್ನು ಕೇವಲ 15 ತಿಂಗಳಲ್ಲಿ ಪೂರ್ಣಗೊಂಡಿದೆ. ಅಹ್ಮದಾಬಾದ ನಗರದ ಎಂಜನಿಯರ್ ಸಿ.ಬಿ.ಸೋಮಾಪುರ ಈ ಮಂದಿರದ ವಿನ್ಯಾಸಗೊಳಿಸಿದ್ದಾರೆ. 

ರಾಜಸ್ಥಾನದ ಕುಶಲ ಕರ್ಮಗಳು ಕಾರ್ಯನಿರ್ವಹಿಸಿದ್ದಾರೆ. ಮಂದಿರ ಪ್ರವೇಶಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಇದರಿಂದ ಕಲವೇ ತಿಂಗಳಲ್ಲಿ ಇದು ಪ್ರವಾಸಿ ತಾಣವಾಗುವುದು ಎಂದು ಕಾರ್ಖಾನೆ  ಮುಖ್ಯಸ್ಥ ಆರ್.ಬಿ.ಎಂ.ತ್ರಿಪಾಠಿ ತಿಳಿಸಿದ್ದಾರೆ.