ಮುಧೋಳ 11: ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಅಭಿವೃಧ್ಧಿಗಾಗಿ ಎಲ್ಲಾ ಹಳ್ಳಿಗಳು ನಮ್ಮದೇ ಎಂಬ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಬ್ಯಾಂಕ್ ಮೂಲಕ ವಿವಿಧ ಸಾಲ ಸೌಲಭ್ಯಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಕೆಎಚ್ಎಫ್ಡಿಸಿ. ಬ್ಯಾಂಕಿನ ಕೃಷಿ ಸಾಲದ ಅಧಿಕಾರಿ ರಾಜಶೇಖರ ಮಠದ ಹೇಳಿದರು. ತಾಲೂಕಿನ ಜೀರಗಾಳ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಖಾಸಗಿ ಬ್ಯಾಂಕುಗಳಲ್ಲಿ ದೇಶದ ಮೊದಲನೆಯದಾಗಿ ಆರಂಭ ಆಗಿರುವ ನಮ್ಮ ಬ್ಯಾಂಕು, ಗ್ರಾಮೀಣ ಜನತೆಗೆ ಸುಲಭ ಬ್ಯಾಂಕ್ ಸೇವೆ, ಸೌಲಭ್ಯ ಗಳ ಬಗ್ಗೆ ಅರಿವು ಮೂಡಿಸುವದು, ಹಣಕಾಸಿನ ಜ್ಞಾನ ಮತ್ತು ವಿವಿಧ ಅಧುನಿಕ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವದು ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು. ಗ್ರಾಮೀಣ ಜನತೆಗೆ ಅನುಕೂಲ ಆಗಲು ಉಳಿತಾಯ ಖಾತೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃಧ್ಧಿ ಯೋಜನೆ, ಕೃಷಿ ಸಾಲ, ವಾಹನ, ವ್ಯಾಪಾರಕ್ಕಾಗಿ ಸಾಲ, ಕೃಷಿ, ಚಿನ್ನದ ಮೇಲಿನ ಸಾಲ, ನೆಟ್, ಮೊಬೈಲ್ ಬ್ಯಾಂಕಿಂಗ್ ಇತರೆ ಮಾಹಿತಿ ಕುರಿತಾಗಿ ಬ್ಯಾಂಕಿನ ಶಾಖೆಯ ಮುಖ್ಯ ವ್ಯವಸ್ಥಾಪಕ ಸಚೀನ ಕಾವೇರಿ ವಿವರಿಸಿದರು. ತಾಲೂಕಿನ ಯಡಹಳ್ಳಿ, ರನ್ನ ಬೆಳಗಲಿ ಗ್ರಾಮದಲ್ಲೂ ಎಲ್ಲಾ ಹಳ್ಳಿಗಳು ನಮ್ಮದೇ ಎಂಬ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ವಿವಿಧ ಗ್ರಾಮಗಳಿಗೂ ಇದನ್ನು ವಿಸ್ತರಿಸಿ ಬ್ಯಾಂಕಿನ ವ್ಯವಸ್ಥೆ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಸಚಿನ ತಿಳಿಸಿದರು.
ಗ್ರಾಮದ ಪ್ರಮುಖರಾದ ದುಂಡಪ್ಪ ಲಕ್ಕಂ, ಬಸನಗೌಡ ಪಾಟೀಲ, ಕಲ್ಲಪ್ಪ ಪಾಟೀಲ, ರಮೇಶ ಲಕ್ಕಂ, ರಮೇಶ ಹೊರಗಿನಮನಿ, ಗೋವಿಂದಪ್ಪ ಲಕ್ಕಂ, ಸಿಬ್ಬಂದಿ ಹಣಮಂತ ವಾಲಿಕಾರ, ಮಂಜುನಾಥ ತೇಲಿ ಇತರರು ಇದ್ದರು.