ಲೋಕದರ್ಶನ ವರದಿ
ಮುದ್ದೇಬಿಹಾಳ 15: ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ದನದ ಬಾಜರ್ನಲ್ಲಿ ನಡೆಯುತ್ತಿದ್ದ ತರಕಾರಿ ಸಂತೆಯಲ್ಲಿ ಏಕಾಏಕಿ ಹೆಜ್ಜೆನುಗಳು ದಾಳಿ ಇಟ್ಟ ಪರಿಣಾಮ ಮಕ್ಕಳು, ಮಹಿಳೆಯರು, ವ್ಯಾಪಾರಸ್ಥರು ಸೇರಿ 15-20 ಜನರು ಗಾಯಗೊಂಡ ಘಟನೆ ರವಿವಾರ ನಡೆದಿದೆ. ಈ ಘಟನೆಯಿಂದ ಬೆಚ್ಚಿಬಿದ್ದ ಅನೇಕರು ತಪ್ಪಿಸಿಕೊಳ್ಳಲು ಹೋಗಿ ತಗ್ಗು ದಿನ್ನೆ ಎಡವಿ ಬಿದ್ದರು.ಕೆಲವರು ತಲೆಮೇಲೆ ತಟ್ಟು, ಚೀಲ ಹಾಕಿ ಮುಖ ಮುಚ್ಚಿಕೊಂಡು ಪಾರಾಗಲು ಯತ್ನಿಸಿದರು. ಜೇನುಹುಳು ಕಡಿತಕ್ಕೊಳಗಾದ ತೀವ್ರ ನೋವಿನಿಂದ ಸಂಕಟಪಡುತ್ತಿದ್ದ ಮಕ್ಕಳು, ಮಹಿಳೆಯರನ್ನು ಅಂಬ್ಯುಲೆನ್ಸ್ ಮೂಲಕ ತಾಲೂಕು ಸಕರ್ಾರಿ ಆಸ್ಪತ್ರೆಗೆ ಕರೆತಂದು ತುತರ್ು ಚಿಕಿತ್ಸೆ ಕೊಡಿಸಲಾಯಿತು. ಮಹ್ಮದರಫೀಕ ಬಾಗವಾನ, ಅಲ್ಲಾಭಕ್ಷ ಸಾಲಿಮನಿ, ಜಾಕೀರ ಸಾಲಿಮನಿ, ಜಯಶ್ರೀ ತಳವಾರ, ಬಾನು ಮುಲ್ಲಾ, ಶ್ಯಾಮಲಾಹೆಬ್ಬಾಳ ಮತ್ತಿತರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿರಬೇಕಿದ್ದ ವೈದ್ಯರು ಇಲ್ಲದೆ ಇರುವುದರಿಂದ ಗಾಯಾಳುಗಳಿಗೆ ಚಕಿತ್ಸೆ ನೀಡಲು ಯಾರೂ ಇರಲಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿ ಗಾಯಾಳುಗಳ ಜೊತೆ ಬಂದಿದ್ದವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ತೆರಳಿದ್ದ ಡಾ.ಸಂಗಮೇಶ ಪಟ್ಟಣದ ಅವರನ್ನೇ ಮರಳಿ ಕರೆಸಿಕೊಂಡು ಗಾಯಾಳುಗಳಿಗೆ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲಾಯಿತು. ಸಂಜೆ ಆಸ್ಪತ್ರೆಗೆ ತಹಸೀಲ್ದಾರ್ ಜಿ.ಎಸ್.ಮಳಗಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯದ ಮಾಹಿತಿ ಪಡೆದುಕೊಂಡರು.