ಮುದ್ದೇಬಿಹಾಳ: ನೂತನ ಮಾರುಕಟ್ಟೆಗೆ ಕಾಲಿಟ್ಟ ವ್ಯಾಪಾರಸ್ಥರು

ಲೋಕದರ್ಶನ ವರದಿ

ಮುದ್ದೇಬಿಹಾಳ 20: ಪುರಸಭೆ ಮತ್ತು ಪೊಲೀಸರು ಬಸವೇಶ್ವರ ವೃತ್ತ, ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿನ ಸೈನಿಕ ಮೈದಾನದಲ್ಲಿ ನಡೆಸುತ್ತಿದ್ದ ಬೀದಿ ಬದಿ ತರಕಾರಿ ಮಾರಾಟವನ್ನು ಇಂದಿರಾ ವೃತ್ತದ ಬಳಿ ಇರುವ ಹೊಸ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ. ಇದರಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಪ್ರಮುಖ ರಸ್ತೆ, ಫುಟ್ಪಾತ್ಗಳು ಜನ ಸಂಚಾರಕ್ಕೆ ಮುಕ್ತವಾಗಿವೆ. 

ಇದೀಗ ಹೊಸ ಮಾರುಕಟ್ಟೆಯಲ್ಲಿಯೇ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದಾರೆ. 

ಹೊಸ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ವ್ಯಾಪಾರಸ್ಥರು ಕೇಳಿಕೊಂಡಿದ್ದಕ್ಕೆ ಪ್ರತಿಕ್ರಿಯೆ ದೊರಕಿದ್ದು ಪುರಸಭೆ ಮುಖ್ಯಾಧಿಕಾರಿ ಭಾರತಿ ಮಾಡಗಿ ನೇತೃತ್ವದಲ್ಲಿ ಸಿದ್ಧತೆಗಳು ವೇಗ ಪಡೆದುಕೊಂಡಿದೆ.