ಮುದ್ದೇಬಿಹಾಳ: ಶಾಂತಿಯುತ ಮತದಾನ

ಲೋಕದರ್ಶನ ವರದಿ

ಮುದ್ದೇಬಿಹಾಳ 01:  ಇಲ್ಲಿನ ಪುರಸಭೆಯ 22 ವಾರ್ಡಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿದ್ದು ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಸಂಜೆ 5 ಗಂಟೆ ಹೊತ್ತಿಗೆ ಅಂದಾಜು ಶೇ.62 ಮತದಾನ ಆಗಿರುವ ಮಾಹಿತಿ ಲಭ್ಯವಾಯಿತು. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮತದಾನದ ವ್ಯವಸ್ಥೆ ಪರಿಶೀಲಿಸಲು ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ್, ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ, ಬಸವನ ಬಾಗೇವಾಡಿ ಡಿಎಸ್ಪಿ ಮಹೇಶ್ವರಗೌಡ ಆಗಮಿಸಿ ಕೆಲ ಮತಗಟ್ಟೆಗಳಲ್ಲಿ ಸಂಚರಿಸಿ ಅವಲೋಕನ ನಡೆಸಿದರು.

ಬೆಳಿಗ್ಗೆ 7ಕ್ಕೆ ಮತದಾನ ಪ್ರಾರಂಭಗುಳ್ಳುವುದಕ್ಕೂ ಮುಂಚೆ ಅಣಕು ಮತದಾನ ನಡೆಸಿ ಏಜಂಟರ ಸಮ್ಜುಖ ಮತಯಂತ್ರವನ್ನು ಸೀಲ್ ಮಾಡಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಕೆಲ ವಾಡರ್ುಗಳಲ್ಲಿ ಅಶಕ್ತ, ವಯೋವೃದ್ಧ ಮತದಾರರನ್ನು ಅವರ ಮಕ್ಕಳು, ಸಂಬಂಧಿಕರು ಎತ್ತಿಕೊಂಡು ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಿದ ಘಟನೆಗಳು ಕಂಡುಬಂದವು. 

ಬಹಳಷ್ಟು ವಾರ್ಡಗಳಲ್ಲಿ ಮತದಾರರಲ್ಲಿ ಗೊಂದಲ ಮೂಡಿದ್ದು ಬೆಳಕಿಗೆ ಬಂತು. ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಮತದಾರರ ಹೆಸರುಗಳು ಪುರಸಭೆ ಚುನಾವಣೆಯ ಮತದಾರರ ಪಟ್ಟಿಯಿಂದ ಮಾಯವಾಗಿದ್ದವು. ಈ ಬಗ್ಗೆ ಮತದಾನ ಅಧಿಕಾರಿಗಳೊಂದಿಗೆ ಮತವಂಚಿತ ಮತದಾರರು ಜಟಾಪಟಿ ನಡೆಸುತ್ತಿರುವುದು ಕಂಡುಬಂತು. ವಿಜಯಪುರ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿದಾಗ ಅವರ ಬಳಿ ಸಮಸ್ಯೆ ಹೇಳಿಕೊಂಡರು ಅವರು ಈ ಬಗ್ಗೆ ಏನೂ ಮಾಡಲಾಗೊಲ್ಲ ಎನ್ನುವ ಅಸಹಾಯಕತೆ ವ್ಯಕ್ತಪಡಿಸಿ ಮತದಾರರ ಟೀಕೆಗೆ ಗುರಿಯಾದರು.

17ನೇ ವಾರ್ಡನ ಬಸವರಾಜ ಗೋಲಪ್ಪ ಸಜ್ಜನ ಎನ್ನುವವರು ತಮ್ಮ ಮನೆಯಲ್ಲಿ 8 ಮತಗಳು ಒಂದೇ ಕಡೆ ಇದ್ದು ಇದನ್ನು ಒಡೆದು ಇಬ್ಬರನ್ನು ಒಂದು ವಾರ್ಡಗೆ, ಐವರನ್ನು ಇನ್ನೊಂದು ವಾರ್ಡಗೆ ಹಾಕಲಾಗಿದೆ ಎಂದು ದೂರಿ ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನ ಆಗಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಸಂಬಂಧಿಸಿದ ಬಿಎಲ್ಓ ಅವರನ್ನು ಮತಗಟ್ಟೆಗೇ ಕರೆಸಿ ಪರಿಶೀಲಿಸಿದರೂ ತಕ್ಷಣಕ್ಕೆ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಸಾಧ್ಯವಾಗದೆ ಕೈಚಲ್ಲಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಶೆಟ್ಟೆಣ್ಣವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಎಪಿಎಂಸಿ, ಮಹಿಬೂಬನಗರ, ಜ್ಞಾನಭಾರತಿ, ಬಜಾರನಲ್ಲಿರುವ ಸಕರ್ಾರಿ ಹೆಣ್ಣುಮಕ್ಕಳ ಶಾಲೆಯಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿ ಅವರು ಪೊಲೀಸ್ ಬಂದೋಬಸ್ತ್ ಕುರಿತು ಅಗತ್ಯ ಮಾಹಿತಿ ಪಡೆದುಕೊಂಡು ತಮ್ಮ ಸಿಬ್ಬಂದಿಗೆ ಸಲಹೆ ಸೂಚನೆ ನೀಡಿದರು.

6ನೇ ವಾರ್ಡನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಮತದಾರರೊಬ್ಬರು ತಾವು ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ತಮ್ಮ ಮೋಬೈಲಿನಲ್ಲಿ ಚಿತ್ರೀಕರಿಸಿಕೊಂಡು ಅದನ್ನು ವಾಟ್ಸಾಪ್ಗಳಲ್ಲಿ ಹರಿಬಿಟ್ಟದ್ದು ಸಾಕಷ್ಟು ಚಚರ್ೆಗೆ ಅವಕಾಶ ಮಾಡಿಕೊಟ್ಟಿತ್ತು. ಮತಗಟ್ಟೆ ಅಧಿಕಾರಿಗಳು ಈ ಬಗ್ಗೆ ಮುಂಜಾಗ್ರತೆ ವಹಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. 

ಲಾಠಿ ಹಿಡಿದ ಡಿಸಿ:

ಎಪಿಎಂಸಿ ಕಚೇರಿಯಲ್ಲಿ 3 ಮತ್ತು 4ನೇ ವಾರ್ಡಗಳ ಎರಡು ಮತಗಟ್ಟೆ ಸ್ಥಾಪಿಸಲಾಗಿತ್ತು. ಹೀಗಾಗಿ ಸಹಜವಾಗಿ ಅಲ್ಲಿ ಜನಸಂದಣಿ ಹೆಚ್ಚಾಗಿತ್ತು. ಎಲ್ಲರನ್ನೂ ಎಪಿಎಂಸಿ ಗೇಟ್ ಹೊರಗೆ ನಿಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಬೆರಳೆಣಿಕೆಯಷ್ಟಿದ್ದ ಜನರನ್ನು ಚದುರಿಸಲು ಪೊಲೀಸರು ವಿಫಲರಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ನೇರವಾಗಿ ಎಪಿಎಂಸಿ ಒಳಗೆ ಬಂದು ಕಾರಿನಿಂದ ಇಳಿದ ಕೂಡಲೇ ಪಕ್ಕದಲ್ಲಿದ್ದ ಪೊಲೀಸ್ ಪೇದೆಯ ಕೈನಿಂದ ಲಾಠಿ ಕಸಿದುಕೊಂಡು ಜನರನ್ನು ಚದುರಿಸಲು ಮುಂದಾದರು. ಜಿಲ್ಲಾಧಿಕಾರಿ ಕೈಯಲ್ಲಿ ಲಾಠ ಕಂಡ ಜನ ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆಯಿತು.

ಮಾಧ್ಯಮದವರೊಂದಿಗೆ ಡಿಸಿ ಜಟಾಪಟಿ:

ಮಹೆಬೂಬನಗರದ ಮತಗಟ್ಟೆಗಳಿಗೆ ಡಿಸಿ ಬಂದಿರುವ ಮಾಹಿತಿ ಪಡೆದ ಸ್ಥಳೀಯ ಮಾಧ್ಯಮದವರು ಸ್ಥಳಕ್ಕೆ ತೆರಳಿ ಮತದಾನ ಪ್ರಗತಿ ಕುರಿತು ಮಾಹಿತಿ ನೀಡುವಂತೆ ಕೋರಿದರು. ಇದರಿಂದ ಸಿಡಿಮಿಡಿಗೊಂಡ ಡಿಸಿ ಏನು ಕೊಡಬೇಕು. ಎಲ್ಲ ಸರಿಯಾಗಿ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳತೊಡಗಿದರು. ಈ ಹಂತದಲ್ಲಿ ಡಿಸಿ ಮಾತಿಗೆ ತಡೆ ಹಾಕಿದ ಕೆಲ ಪತ್ರಕರ್ತರು ಮತದಾರರ ಪಟ್ಟಿಯಲ್ಲಿನ ಗೊಂದಲ, ಮನಸೋ ಇಚ್ಛೇ ಮತದಾರರನ್ನು ಒಂದು ವಾರ್ಡನಿಂದ ಮತ್ತೊಂದು ವಾರ್ಡಗೆ ವಗರ್ಾಯಿಸಿದ್ದು ಮುಂತಾದವುಗಳ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಲ್ಲ ಎಂದು ಕೇಳಿದಾಗ ಮತ್ತೇ ಸಿಡಿಮಿಡಿಗೊಂಡ ಅವರು ನೀವೆಲ್ಲ ಇಲ್ಲಿಂದ ಹೊರಗೆ ಹೋಗಿ, ಮತದಾನ ಕೇಂದ್ರದ ಗೆರೆಯ ಆಚೆ ನಿಂತುಕೊಳ್ಳಿ, ಮತಗಟ್ಟೆ ಒಳಗೆ ನೀವು ಬರುವಂತಿಲ್ಲ. 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದು ನಿಮಗೂ ಅನ್ವಯಿಸುತ್ತದೆ. ನೀವೆಲ್ಲಾ ಗುಂಪಾಗಿ ನಿಂತಿದ್ದೀರಿ ಎಂದು ಕಿಚಾಯಿಸಿ ನನ್ನ ಹಿಂದೆ ನೀವೆಲ್ಲ ಏಕೆ ಬತರ್ಿರಿ, ಬೇರೆ ಮತಗಟ್ಟೆಗಳಿಗೆ ಅಲ್ಲಿಗೆ ಹೋಗಿ ಎಂದು ಮನಸ್ಸಿಗೆ ತೋಚಿದಂತೆ ಮಾತನಾಡತೊಡಗಿದರು. ಈ ವೇಳೆ ಡಿಸಿ, ಮಾಧ್ಯಮದವರ ನಡುವೆ ವಾಗ್ವಾದ ನಡೆಯಿತು. ಡಿಸಿ ಜೊತೆ ಇದ್ದ ಸಿಪಿಐ, ತಹಸೀಲ್ದಾರ್, ಚುನಾವಣಾ ವೀಕ್ಷಕರು ಮಧ್ಯಪ್ರವೇಶಿಸಿ ಮಾಧ್ಯಮದವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಡಿಸಿಯ ಈ ನಡವಳಿಕೆಯಿಂದ ಚಕಿತರಾಗಿದ್ದ ಮಾಧ್ಯಮದವರು ಡಿಸಿ ಕಾರು ಸಂಚರಿಸಿದಲ್ಲೆಲ್ಲ ಅವರ ಬೆನ್ನು ಹತ್ತಿ, ಅವರು ಭೇಟಿ ನೀಡಿದ ಪ್ರತಿಯೊಂದು ಮತಗಟ್ಟೆಗೂ ತೆರಳಿ, ಫೋಟೊ ತೆಗೆದು, ವಿಡಿಯೋ ಮಾಡಿಕೊಳ್ಳತೊಡಗಿದರು.  ಕೊನೆಗೆ ಬೇಸರಗೊಂಡ ಡಿಸಿ ಮದ್ಯಾಹ್ನದ ಹೊತ್ತಿಗೆ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗೆ ತೆರಳಿದ ಮೇಲೆ ಮಾಧ್ಯಮದವರು ಅವರ ಬೆನ್ನಿ ಬಿಟ್ಟರು.