ಮುದ್ದೇಬಿಹಾಳ : ಪ್ರಾಥಮಿಕ ಶಾಲಾ ಶಿಕ್ಷಕರ ಪದನಾಮಕರಿಸಲು ಮನವಿ

ಲೋಕದರ್ಶನ ವರದಿ

ಮುದ್ದೇಬಿಹಾಳ 01: ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಇರುವ ಸೇವಾನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಪದನಾಮಕರಿಸಬೇಕೆಂದು ಆಗ್ರಹಿಸಿ ಶನಿವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ  ಎದುರಿಗೆ ತಾಲೂಕಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಸಾಂಕೇತಿಕ ಧರಣಿ ಸತ್ಯಾಗ್ರಹ ಕೈಗೊಂಡು ಶಿಕ್ಷಣಾಧಿಕಾರಿಗಳಿಗೆ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.

1 ರಿಂದ 7ನೇ ತರಗತಿ ವಿದ್ಯಾಥರ್ಿಗಳಿಗೆ ಪಠ್ಯಭೋಧನೆಗಾಗಿ ನೇಮಕಗೊಂಡ ಪ್ರಾಥಮಿಕ ಶಾಲಾ ಸಹ ಶಿಕ್ಷಕರು 2005ರಿಂದ 6 ಮತ್ತು 8ನೇ ತಗರತಿಯನ್ನೂ ಸಹ ಶಿಕ್ಷಕರಾಗಿ ಭೋದಿಸುತ್ತಾ ಬಂದಿರುತ್ತೇವೆ. ರಾಜ್ಯದಲ್ಲಿ 82 ಸಾವಿರಕ್ಕಿಂತಲೂ ಅಧಿಕ ಪದವಿ ಪಡೆದ ಅನುಭವಿ ಸಹ ಶಿಕ್ಷಕರು 4 ವರ್ಷಗಳಿಂದ ಭೋದಿಸುತ್ತಿದ್ದರೂ ಅವರನ್ನು ಮುಂಬಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಹುದ್ದೆಗಳಿಗೆ ಈಗಾಗಲೇ ಎರಡು ಬಾರಿ ನೇಮಕ ಮಾಡಿದರೂ ಈಗ ಮತ್ತೆ 3ನೇ ಬಾರಿಗೆ ನೇರ ನೇಮಕಾತಿ ಅಜರ್ಿಗಳನ್ನು ಕರೆಯಲಾಗುತ್ತಿದೆ. ಇದನ್ನು ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದ ಖಂಡಿಸುತ್ತದೆ. ಸಹ ಶಿಕ್ಷಕರಲ್ಲಿ ಈಗಾಗಲೇ ಸಾಕಷ್ಟು ಅನುಭವವಿದ್ದರೂ ಅವರನ್ನು ಪದವೀಧರ ಶಿಕ್ಷಕರ ವೃಂದಕ್ಕೆ ನೇಮಕ ಮಾಡಿಕೊಳ್ಳದೆ ಮಲತಾಯಿ ದೋರಣೆ ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ಸಹ ಶಿಕ್ಷಕರನ್ನೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಪದನಾಮಕರಿಸಬೇಕು. ಇಲ್ಲವಾದಲ್ಲಿ 01-07-2019ರಿಂದ ಕೇವಲ 1 ರಿಂದ 5ನೇ ತರಗತಿಗಳಿಗೆ ಭೋದನೆ ಮಾಡಿ 6 ಮತ್ತು 8ನೇ ತರಗತಿಯ ಭೋದನೆಯನ್ನು ಬಹಿಷ್ಕರಸಬೇಕಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಾದ ಬಿ.ವ್ಹಿ.ಕೋರಿ, ಸಿ.ಜಿ.ನಾಗರಾಳ, ಪಿ.ಸಿ.ಹದಗಿನಾಳ, ಎಂ.ಎನ್.ಹೊಳಿ, ಎಂ.ಕೆ.ಬಾಗವಾನ, ಪಿ.ಎಂ.ಕೊಪ್ಪದ, ಎಸ್.ಎ.ಗಂಗೋತ್ರಿ, ಬಿ.ಎಚ್.ಕುಳಗೇರಿ, ಜಿ.ಎಚ್.ಗೌರೋಜಿ, ಎಸ್.ಬಿ.ಬಿಜ್ಜೂರ, ಎಚ್.ಎನ್.ಭೋವಿ, ಎಸ್.ಎಂ.ವಗ್ಗರ, ಸಿ.ಬಿ.ಎಚ್.ಭಗವತಿ, ಬಿ.ಬಿ.ಪತ್ತಾರ, ಎಸ್.ಎಂ.ಕಲ್ಲಿಮಠ, ಎಲ್.ಕೆ.ನಧಾಫ, ಎ.ವ್ಹಿ.ಶಿವಯೋಗಿಮಠ, ಎಸ್.ಎಂ.ಮಂಗ್ಯಾಲ, ಐ.ಎ.ಹಿರೇಮಠ, ಶ್ರೀಶೈಲ ಎಸ್.ಕೆ., ಎಚ್.ಬಿ.ಪಾಟೀಲ, ಎಫ್.ಬಿ.ಶಿವಯೋಗಿಮಠ, ಎಂ.ಐ.ಹಾವರಗಿ ಸೇರಿದಂತೆ ಇತರರಿದ್ದರು.