ಮುದ್ದೇಬಿಹಾಳ: ಗಾಳಿ ಮಳೆಗೆ ನಾಶವಾದ ಗ್ರೀನ್ ಹೌಸ್

ಲೋಕದರ್ಶನ ವರದಿ

ಮುದ್ದೇಬಿಹಾಳ 04: ಬೀಸಿದ ಭಾರಿ ಗಾಳಿ, ಮಳೆಗೆ  ಗ್ರೀನ್ಹೌಸ್ (ಪಾಲಿಹೌಸ್) ಒಂದು ಶೇ.40-50ರಷ್ಟು ನಾಶವಾಗಿ ಅಂದಾಜು ರು.9 ಲಕ್ಷ ಹಾನಿ ಸಂಭವಿಸಿದೆ ಘಟನೆ ಪಟ್ಟಣದ ತಂಗಡಗಿ ರಸ್ತೆ ಪಕ್ಕ ಶಿರೋಳ ಗ್ರಾಮವ್ಯಾಪ್ತಿಯಲ್ಲಿ ಬರುವ ಶ್ರೀ ಧರ್ಮವೀರ ಫಾರ್ಮನಲ್ಲಿ ನಡೆದಿದೆ. 

ಯುವ ಕೃಷಿಕ ಪ್ರಶಸ್ತಿ ಪುರಸ್ಕೃತ ಬಾಹುಬಲಿ ದಂಡಾವತಿ ಅವರಿಗೆ ಸೇರಿದ ಈ ಗ್ರೀನ್ಹೌಸ್ ಅನ್ನು ರು.35-40 ಲಕ್ಷ ಖಚರ್ು ಮಾಡಿ ಎರಡು ವರ್ಷಗಳ ಹಿಂದೆ ನಿಮರ್ಿಸಲಾಗಿತ್ತು. ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಸಲು ಇದನ್ನು ನಿರ್ಮಿಸಲಾಗಿತ್ತು 

ಒಟ್ಟು 3 ಎಕರೆ ಜಮೀನು ಪೈಕಿ 1.2 ಎಕರೆ ವಿಸ್ತೀರ್ಣದಲ್ಲಿ ಎರಡು ಗ್ರೀನ್ಹೌಸ್ ನಿಮರ್ಿಸಿ ಒಂದು ಕಡೆ ಕಲ್ಲಂಗಡಿ, ಮತ್ತೊಂದು ಕಡೆ ಟೊಮೆಟೊ ಬೆಳೆಯನ್ನು ಡ್ರಿಪ್ ಪದ್ದತಿಯಲ್ಲಿ ಬೆಳೆಸಲು ವ್ಯವಸ್ಥೆ ಮಾಡಲಾಗಿತ್ತು. ಕಲ್ಲಂಗಡಿ ಬೆಳೆ ಪೂರ್ತಿಯಾಗಿದೆ ಆದರೆ ಟೊಮೆಟೋ ಬೆಳೆ ಇನ್ನೂ ಹೂ ಬಿಡುವ ಹಂತದಲ್ಲಿತ್ತು. ಟೊಮೇಟೆ ಬೆಳೆಯ ಗ್ರೀನ್ಹೌಸ್ ನಾಶಗೊಂಡಿದ್ದರಿಂದ ಹೂಗಳು ಉದುರಿವೆ.  ಒಂದು ಭಾಗದ ಗ್ರೀನ್ಹೌಸ್ನ ಮೇಲ್ಭಾವಣಿಗೆ ಹೊದಿಸಿದ್ದ ಪಾಲಿಥಿನ್ ಪೇಪರ್ ಗಾಳಿಗೆ ಕಿತ್ತಿ ಹಾರಿ ಹೋಗಿದೆ. 

ನೆಟ್ ಅರ್ಧಭಾಗ ನಾಶವಾಗಿದ್ದರೆ ಮತ್ತೊಂದು ಕಡೆ ಶೇ.40 ರಷ್ಟು ನಾಶವಾಗಿದೆ. ಬೆಳೆ ರಕ್ಷಿಸಲು ಗ್ರೀನ್ಹೌಸ್ನ ನಾಲ್ಕೂ ಭಾಗಕ್ಕೆ ಹೊದಿಸಿದ್ದ ನೆಟ್ ಅಲ್ಲಲ್ಲಿ ಹರಿದು ಹೋಗಿ ಕೆಳಗೆ ಬಿದ್ದಿದೆ. ವಿಷಯ ತಿಳಿದು ಕಂದಾಯ ನಿರೀಕ್ಷಕ ಸುಭಾಷ ವಡವಡಗಿ ಅವರ ಸೂಚನೆ ಮೇರೆಗೆ ಶಿರೋಳ ಸಾಜಾದ ಗ್ರಾಮಲೆಕ್ಕಾಧಿಕಾರಿ ಹರ್ಷ ಮುಲ್ಲಾಳ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿ, ಮೇಲಧಿಕಾರಿಗಳಿಗೆ ಹಾನಿಯ ಅಂದಾಜು ವರದಿ ಸಲ್ಲಿಸಿದ್ದಾರೆ.