ನವದೆಹಲಿ, ಏ 17 ಮಹಾವೀರ ಜಯಂತಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
ದೇಶದ ಜನತೆಗೆ ಅದರಲ್ಲೂ ವಿಶೇಷವಾಗಿ ಜೈನ ಸಮುದಾಯಕ್ಕೆ ಶುಭ ಕೋರುತ್ತೇನೆ. ಭಗವಾನ್ ಮಹಾವೀರರ ಶಾಂತಿ ಹಾಗೂ ಅಹಿಂಸಾ ಸಂದೇಶ ಮಹತ್ವದ್ದಾಗಿದೆ. ಅವರ ಜೀವನದಿಂದ ಸ್ಫೂತರ್ಿ ಪಡೆದು ಎಲ್ಲೆಡೆ ಸೋದರ ಬಾಂಧವ್ಯವನ್ನು ಹಂಚಿಕೊಳ್ಳೋಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ. ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಭಗವಾನ್ ಮಹಾವೀರರ ಅಹಿಂಸಾ ಸಂದೇಶ, ಸತ್ಯ, ಸದಾಚಾರ ಮತ್ತು ಪ್ರಾಮಾಣಿಕತೆಯ ಮಾರ್ಗ ಅನುಸರಣಾ ಯೋಗ್ಯ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಹಾವೀರ ಜಯಂತಿಯಂದು ದೇಶದ ಜನತೆಗೆ ಅವರ ಆಶೀವರ್ಾದ ಲಭಿಸಲಿ. ಅವರ ಶಾಂತಿ, ಸೌಹಾರ್ದತೆ, ಸಹೋದರತೆ ಮತ್ತು ಅಹಿಂಸೆಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲಾದವರು ಮಹಾವೀರ ಜಯಂತಿ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದಾರೆ.