ಮೂಡಲಗಿ: ಸಿರಿ ಸಂಸ್ಥೆ ಮಳಿಗೆ ಉದ್ಘಾಟನೆ

ಲೋಕದರ್ಶನ ವರದಿ

ಮೂಡಲಗಿ:  ಗ್ರಾಮಿಣ ಮಹಿಳೆಯರಿಗೆ ಉದ್ಯೋಗಾವಕಾಶದ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ಸಿರಿಸಂಸ್ಥೆಯ ಮೂಲಕ ಮಾಡುವಲ್ಲಿ ಪೂಜ್ಯ ವೀರೇಂದ್ರ ಹೆಗ್ಡೆಯವರು ಯಶಸ್ವಿಯಾಗಿದ್ದಾರೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ ಬಿ.ಸಿ ಟ್ರಸ್ಟನ ಗೋಕಾಕ ವಿಭಾಗದ ಜಿಲ್ಲಾ ನಿದರ್ೇಶಕ  ಕೇಶವ ದೇವಾಂಗ ಹೇಳಿದರು

ಅವರು ವಿದ್ಯಾ ನಗರದಲ್ಲಿ ಮಾಲಾ ಸುತಾರ ಇವರು ನೂತನವಾಗಿ ಪ್ರಾರಂಭಿಸಿದ ಸಿರಿ ಮಳಿಗೆಯನ್ನು  ಉದ್ಘಾಟಿಸಿ ಮಾತನಾಡಿದರು

     ಗ್ರಾಮಿಣ ಮಹಿಳೆಯರು ತಯಾರಿಸಿದ ಉತ್ಪನ್ನಕ್ಕೆ ಸಿರಿ ಸಂಸ್ಥೆಯ ಮೂಲಕ ಮಾರುಕಟ್ಟೆ  ವ್ಯವಸ್ಥೆಯನ್ನು ಒದಗಿಸಿ ಗ್ರಾಮಿಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಸಿರಿ ಮಾರಾಟ ಮಳಿಗೆ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾರಾಟಗಾರರಿಗೆ ಉದ್ಯೋಗ ಸಿಕ್ಕಂತಾಗಿದೆ. ಇದರ ಜೊತೆಗೆ ಗ್ರಾಹಕರಿಗೆ ಕಡಿಮೇ ದರದಲ್ಲಿ ಗುಣಮಟ್ಟದ ಉತ್ಪನ್ನಗಳು ಲಭ್ಯವಾಗುವಂತಾಗಿದೆ ಎಂದರು

ಮಳಿಗೆ ಉದ್ಘಾಟನೆ ವೇಳೆ ಮಳಿಗೆದಾರರಾದ ಮಾಲಾ ಸುತಾರ ತಾಲೂಕಾ ಯೋಜನಾಧಿಕಾರಿ ದೇವರಾಜ ಒಕ್ಕೂಟ ಉಪಾಧ್ಯಕ್ಷ ಸುನಿತಾ ವಲಯ ಸೇವಾ ಪ್ರತಿನಿಧಿಗಳು ಹಾಗೂ ಸ್ಥಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಮಾನಸಿ ಪಾಟೀಲ ಕಾರ್ಯಕ್ರಮಕ್ಕೆ ಸ್ವಾಗತಿಸಿದರೆ ಸಿರಿ ಮೇಲ್ವಿಚಾರಕ ಅಡಿವೆಪ್ಪಾ ಕಾರ್ಯಕ್ರಮ ನಿರ್ವಹಿಸಿದರು ಸೇವಾ ಪ್ರತಿನಿಧಿ ಮಂಜುಳಾ ವಂದಿಸಿದರು.