ಯರಗಟ್ಟಿ 07: ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಪ್ಪತ್ತೆರಡು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾಟರ್ಿ ಜಯಭೇರಿ ಬಾರಿಸಲಿದ್ದು ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ಹಾಗೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್ನ್ನು ಧೂಳಿಪಟ ಮಾಡಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾರತೀಯ ಜನತಾ ಪಾಟರ್ಿ ಮಾ.10 ರಂದು ಸಾಯಂಕಾಲ 4ಕ್ಕೆ ಸ್ಥಳೀಯ ಬಸವೇಶ್ವರ ಪ್ರೌಢ ಶಾಲಾ ಮೈದಾನದಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿರುವ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಸಂಸದ ಸುರೇಶ ಅಂಗಡಿ ಮಾತನಾಡಿ ದೇಶದ ರೈತರಿಗೆ ಕೃಷಿ ಚಟುವಟಿಕೆಗಳ ಮೊದಲು ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆ ಜಾರಿಗೆ ತಂದಿದ್ದು ರೈತರಲ್ಲಿ ಹರ್ಷ ತಂದಿದೆ. ದೇಶದ ಭದ್ರತೆ ಹಿತ ದೃಷ್ಠಿಯಿಂದ ಭಾರತೀಯ ಸೈನ್ಯವನ್ನು ಬಲಪಡಿಸಿರುವುದು ಹಾಗೂ ಸೈನಿಕರಿಗೆ ಹೆಚ್ಚಿನ ಭದ್ರತೆ ನೀಡಿರುವುದು ಭಾರತೀಯರಲ್ಲಿ ಮೋದಿ ದೇಶಭಕ್ತಿಗೆ ಗೌರವ ಭಾವನೆ ಹೆಚ್ಚಾಗಿದ್ದು ಎಲ್ಲರೂ ಮೋದಿ ಮತ್ತೊಮ್ಮೆ ಎನ್ನುತ್ತಿದ್ದಾರೆ. ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸವದತ್ತಿ, ಅರಭಾವಿ, ಗೋಕಾಕ, ಬೈಲಹೊಂಗಲ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ರಾಜ್ಯ ಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹಾಗೂ ರಾಜ್ಯದ ಎಲ್ಲ ಮುಖಂಡರು ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಆನಂದ ಮಾಮನಿ, ಬಿಜೆಪಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗುರುಪಾದ ಕಳ್ಳಿ, ಜಿಲ್ಲಾ ಕಾರ್ಯದಶರ್ಿ ಈರಣ್ಣ ಚಂದರಗಿ, ಎಸ್ಟಿ ಮೋಚರ್ಾ ಜಿಲ್ಲಾಧ್ಯಕ್ಷ ಚಂದ್ರು ಅಳಗೋಡಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ದೇವರಡ್ಡಿ, ವೆಂಕಣ್ಣ ಕೊಪ್ಪದ, ಸದಾನಂದ ಪಾಟೀಲ ಮುಂತಾದವರಿದ್ದರು.