ವ್ಯಾಪಾರ ವಹಿವಾಟು ಪರವಾನಗಿ ನೀಡುವಂತೆ ಶಾಸಕರಲ್ಲಿ ಅಲ್ಪಸಂಖ್ಯಾತರ ಮನವಿ

ಲೋಕದರ್ಶನವರದಿ

ರಾಣೇಬೆನ್ನೂರು05: ನಗರದ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಶಾಸಕ ಅರುಣಕುಮಾರ ಪೂಜಾರ ಅವರಿಗೆ ಭೇಟಿ ನೀಡಿ ನಗರಸಭೆ ಸಿಬ್ಬಂಧಿ ತಮ್ಮ ವ್ಯಾಪಾರ ವಹಿವಾಟಿನ ಗೂಡಂಗಡಿಗಳು ನಡೆಸದಂತೆ ಕಟ್ಟಿನಿಟ್ಟಿನ ಕ್ರಮಕೈಗೊಂಡಿದ್ದು, ನಮಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡಲು ಮನವಿ ಮಾಡಿದರು.   

ಅವರ ಮನವಿಗೆ ಸ್ಪಂಧಿಸಿ ಮಾತನಾಡಿದ ಶಾಸಕರು ಇಡೀ ದೇಶವೇ ಕರೋನಾ ವೈರಸ್ ಭೀತಿಯಲ್ಲಿ ಕಾಲ ತಳ್ಳುತ್ತಾ ಜೀವವನ್ನು ಕೈಯಲ್ಲಿಹಿಡಿದು ಜನರು ಬದುಕುತ್ತಿದ್ದಾರೆ.  ಇಂತಹ ಸಂದರ್ಭದಲ್ಲಿ ಆಯಾ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳದೇ, ಬೇಕಾಬಿಟ್ಟಿಯಾಗಿ ವ್ಯಾಪಾರ, ಮಾಡಲು ಮುಂದಾದರೆ, ನಗರಸಭೆ ಕ್ರಮ ಕೈಗೊಳ್ಳಬೇಕಾಗುತ್ತದೆ.  ಅದರಂತೆ ಕ್ರಮಕೈಗೊಂಡಿದ್ದಾರೆ.  ಸದ್ಯದ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಠಪಡಿಸಿದ ಅವರು ವಶಪಡಿಸಿಕೊಂಡಿರುವ ವಸ್ತುಗಳನ್ನು ಮಾತ್ರ ಮರಳಿಸುವಂತೆ ನಗರಸಭೆಗೆ ಸೂಚಿಸುವುದಾಗಿ ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಸಣ್ಣ-ಪುಟ್ಟ ಗಾಡಿಗಳ ವ್ಯಾಪಾರಸ್ಥರು ಮತ್ತು ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು