ಬೆಳಗಾವಿ : ಕಳೆದ ಕೆಲವು ತಿಂಗಳುಗಳ ಹಿಂದೆ ಜರುಗಿದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಹರಕೆ ಹೊತ್ತಿದ್ದ ಸಚಿವ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಹಾಗೂ 13 ಜನ ಶಾಸಕರೊಂದಿಗೆ ರಾಜಸ್ತಾನದ ಅಜ್ಮೀರನ ಖ್ವಾಜಾ ಗರೀಬನ್ನ ನವಾಜ ದಗರ್ಾ ದರ್ಶನ ಪಡೆದು ಚಾದರ್ ಅಪರ್ಿಸಿ ತಮ್ಮ ಹರಕೆ ತೀರಿಸಿದ್ದಾರೆ.
ಈ ಸಂದರ್ಭಸದಲ್ಲಿ ಸಚಿವ ಜಾರಹೊಳಿ ಅವರ ಜೊತೆಯಲ್ಲಿ ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಸೇರಿದಂತೆ ಹದಿಮೂರು ಜನ ಶಾಸಕರು ಬೆಳಗಾವಿಯ ಕಾಂಗ್ರೆಸ್ ಮುಖಂಡರಾದ ಹಾಶಮ ಭಾವಿಕಟ್ಟಿ, ಸುನೀಲ ಹನಮಣ್ಣವರ, ಉತ್ತಮ ಪಾಟೀಲ, ಕಿರಣ ಪಾಟೀಲ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.