ಲೋಕದರ್ಶನವರದಿ
ರಾಣೇಬೆನ್ನೂರು ಜೂ.27: ತಾಲೂಕಿನಲ್ಲಿ ಸತತ 5 ವರ್ಷಗಳ ಕಾಲ ಬರಗಾಲದ ಛಾಯೆ ಆವರಿಸಿದ್ದು, ಈದೀಗ ಮತ್ತೆ ಮುಂಗಾರು ಮಳೆ ಬಾರದೆ ಇರುವುದರಿಂದ ಜನ-ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ತಮ್ಮ ಗ್ರಾಮದಲ್ಲಿ ಕೆಲಸ ಮಾಡಲು ಉದ್ಯೋಗಖಾತರಿ ಯೋಜನೆಯಲ್ಲಿ ಅವಕಾಶವಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೌರಾಡಳಿತ ಸಚಿವ ಆರ್.ಶಂಕರ್ ಹೇಳಿದರು.
ಬುಧವಾರ ನಗರದ ತಾಪಂ ಕಛೇರಿ ಆವರಣದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಯಡಿ ಉದ್ಯೋಗ ವಾಹಿನಿ ಜಾಗೃತಿರಥ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ನರೇಗಾ ಯೋಜನೆಯ ಮಾಹಿತಿಯನ್ನು ನೀಡಲು ಸರಕಾರವು ವಾಹನವನ್ನು ಜೂ.27 ರಿಂದ 6 ದಿನಗಳ ಕಾಲ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಿಗೆ ಸಂಚರಿಸಲಿದೆ ಎಂದರು.
ಸರಕಾರವು ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ ನಿಮಿತ್ಯ ಈ ಸಂಚಾರದ ವ್ಯವಸ್ಥೆ ಮಾಡಿದೆ.
ಈ ವಾಹನವು ಗ್ರಾಮಗಳ ಭೇಟಿ ಸಮಯದಲ್ಲಿ ಗ್ರಾಮೀಣ ಜನರಿಗೆ ನರೇಗಾ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡುವುದು ಕೂಲಿಕಾರರ, ಕೂಲಿ ಬೇಡಿಕೆ, ಹೊಸ ಉದ್ಯೋಗಚೀಟಿ ಬೇಡಿಕೆ ಮತ್ತು ವೈಯಕ್ತಿಕ ಕಾಮಗಾರಿಗಳ ಬೇಡಿಕೆಯ ಮಾಹಿತಿಯನ್ನು ತಿಳಿಸಲಾಗುವುದು ಎಂದು ಹೆಳಿದರು.
ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಮ್. ಕಾಂಬಳೆ, ತಹಶೀಲ್ದಾರ ಸಿ.ಎಸ್ ಕುಲಕುಣರ್ಿ, ತಾ.ಪಂ ಸಹಾಯಕ ನಿದರ್ೇಶಕ ಅಶೋಕ ನಾರಜ್ಜಿ, ವ್ಯವಸ್ಥಾಪಕ ಬಸವರಾಜ ಶಿಡೇನೂರು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರಿಧರ್, ನಗರ ಸಭೆ ಪೌರಾಯುಕ್ತ ಡಾ.ಎನ್ ಮಹಾಂತೇಶ, ಐಇಸಿ ಸಂಯೋಜಕ ಡಿ ವಿ ಅಂಗೂರು, ಅಕ್ಷರ ದಾಸೋಹದ ಸಹಾಯಕ ನಿದರ್ೇಶಕ ಲಿಂಗರಾಜ ಸುತ್ತುಕೋಟೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು