ಲೋಕದರ್ಶನ ವರದಿ
ಯರಗಟ್ಟಿ : ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡಿರುವ ಮಂಗಳವಾರ ವಾರ ಬಿಟ್ಟಿದ್ದು ಸ್ಥಳೀಯ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವ-ಇಚ್ಛೆಯಿಂದ ಬಂದ್ ಮಾಡಿ ಲಕ್ಷಾನುಗಟ್ಟಲೆ ವ್ಯಾಪಾರ ವಹಿವಾಟು ತೊರೆದು ಭಕ್ತಿಯ ಭಾವ್ಯಕ್ಯತೆ ಮೆರೆದು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.
ಬೆಳಗಾವಿ-ಬಾಗಲಕೋಟ ಹಾಗೂ ಗೋಕಾಕ-ಹುಬ್ಬಳಿ ಹೆದ್ದಾರಿಗೆ ಹೊಂದಿಕೊಂಡಿರುವ ಯರಗಟ್ಟಿ ಪಟ್ಟಣಕ್ಕೆ ಕೆಎಸ್ಆರ್ಟಿಸಿ ಬಸ್ಗಳೇ ಸುಮಾರು ಆರು ನೂರಕ್ಕೂ ಹೆಚ್ಚು ಸಂಚರಿಸುತ್ತವೆ ಮತ್ತು ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಖಾಸಗಿ ವಾಹನಗಳಂತೂ ಲೆಕ್ಕವಿಲ್ಲದಷ್ಟು ಸಂಚರಿಸುತ್ತ ಬೃಹತ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಹೊಟೇಲ್, ಖಾನಾವಳಿ, ಕಿರಾಣಿ, ಸ್ಟೇಶನರಿ, ಧಾಭಾ, ಪಾನಶಾಪ, ಮೋಬೈಲ್ ಶಾಪ್ ಕೋಲ್ಡ್ರಿಂಕ್ಸ್ ಅಂಗಡಿಗಳು ಅಷ್ಟೆ ಅಲ್ಲದೇ ರಸ್ತೆ ಬದಿಯ ಹಣ್ಣಿನ ಅಂಗಡಿಗಳು ಹೀಗೆ ಪ್ರತಿಯೊಬ್ಬ ವ್ಯಾಪಾರಸ್ಥರು ಸಹ ಗ್ರಾಮದೇವತೆಗಳ ಮೇಲಿನ ಅಪಾರ ಭಕ್ತಿಯಿಂದ ಬಂದ್ ಮಾಡಿದ್ದರಿಂದ ಪ್ರಯಾಣಿಕರು ನೀರು ಹಾಗೂ ಉಪಹಾರಕ್ಕಾಗಿ ಪರದಾಡಿದರೂ ಅವರಲ್ಲಿ ಭಕ್ತಿಯವಾಣಿ ಗುಣಗುತ್ತಿತ್ತು.
ಕೆಲವು ಯುವಕರು ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ರೋಗಿಗಳಿಗೆ ಹಣ್ಣು ಹಾಲು ವಿತರಿಸಿದರು. ಮಹಿಳೆಯರು ಗುಂಪುಗುಂಪಾಗಿ ಗ್ರಾಮದೇವತೆಗಳಿಗೆ ಶ್ರದ್ಧಾ ಭಕ್ತಿಯಿಂದ ನೈವೇದ್ಯ ಅಪರ್ಿಸುತ್ತಿರುವ ದೃಶ್ಯ ಕಂಡುಬಂತು.
ಶಾಂತವ್ವ ದೇವರಡ್ಡಿ, ಕಸ್ತೂರಿ ಕಡೆಮನಿ, ಮಂಜುಳಾ ಕರಿಗೊಣ್ಣವರ, ಶಿವಲೀಲಾ ದುಗ್ಗಾಣಿ, ಮಹಾನಂದಾ ಅಲ್ಲನ್ನವರ, ರತ್ನಾ ಹಡಪದ, ಜಾಲಕ್ಕಾ ಅಂಬಲಝರಿ, ಪದ್ಮಾವತಿ ಕಮ್ಮಾರ, ಶೈಲಾ ಹಡಪದ, ಲಕ್ಷ್ಮೀ ಸೊನ್ನದ ಮುಂತಾದವರಿದ್ದರು.