ಹಾಲು ಪೂರೈಸುವನಿಂದಲೇ ಹಾಲಿನ ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಬಹಿರಂಗ

 ಬೆಂಗಳೂರು, .09 (ಹಿ.) - ಉದ್ಯಾನ ನಗರಿಯಲ್ಲಿ ಒಂದಲ್ಲಾ,ಒಂದು ರೀತಿಯಲ್ಲಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ, ಇದೀಗ ಕಳೆದ ಒಂದು ವಾರದಿಂದ ಕಳ್ಳನೊಬ್ಬ ಹಾಲು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ವಿದ್ಯಾರಣ್ಯಪುರದಲ್ಲಿರುವ ಹಾಲಿನ ಅಂಗಡಿಯಿಂದ ಹಾಲುಗಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

                ಪ್ರವೀಣ್ ಎಂಬುವರ ಮಾಲೀಕತ್ವದ ಹಾಲಿನ ಮಳಿಗೆ ಇದಾಗಿದ್ದು, ಇತ್ತೀಚೆಗೆ ಹಾಲಿನ ಬಾಕ್ಸ್ ಕಡಿಮೆ ಪೂರೈಕೆ ಮಾಡಲಾಗುತ್ತಿದೆ ಎಂದು ಸರಬರಾಜು ಮಾಡುತ್ತಿದ್ದವನ ಜೊತೆ ಮಾಲೀಕ ಪ್ರವೀಣ್ ಜಗಳವಾಡುತಿದ್ದರು.

                  ಹಿನ್ನೆಲೆ ಹಾಲು ಸರಬರಾಜು ಮಾಡುತ್ತಿದ್ದವನೇ ಕಳ್ಳತನ ಮಾಡಿದ್ದಾನೆ ಎಂದು ಪ್ರವೀಣ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

                ಇನ್ನು ಸಿಸಿಟಿವಿ ಚೆಕ್ ಮಾಡಿದಾಗ ಹಾಲುಗಳ್ಳನ ಕೃತ್ಯ ಬಯಲಾಗಿದೆ. ಇನ್ನು ವಿದ್ಯಾರಣ್ಯಪುರ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ