ಮಕ್ಕಳ ಏಳಿಗೆಗೆ ಮಾನಸಿಕ ಹಾಗೂ ಭೌತಿಕ ಮಟ್ಟ ಪ್ರಮುಖ ಪಾತ್ರ ವಹಿಸಲಿದೆ: ಆರ್.ಬಿ. ಲಿಗಾಡೆ
ಕಾಗವಾಡ 11 : ಶಾಲಾ ಮಕ್ಕಳ ಸವಾಂರ್ಗೀಣ ಏಳಿಗೆಗೆ ಮಕ್ಕಳ ಭೌತಿಕ ಮಟ್ಟ ಹಾಗೂ ಮಾನಸಿಕ ಮಟ್ಟ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಕಲಿಕೆ ಗುಣಮಟ್ಟ ಹೆಚ್ಚಿಸಲು ಸಾಧ್ಯವಿದೆಂದು ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಬಿ. ಲಿಗಾಡೆ ಹೇಳಿದರು. ಅವರು ಸೋಮವಾರ ದಿ. 10 ರಂದು ತಾಲೂಕಿನ ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಮೂಹ ಮಟ್ಟದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. ಮಕ್ಕಳಲ್ಲಿ ಅಡಗಿರುವ ಜ್ಞಾನವನ್ನು ಇಂತಹ ವೇದಿಕೆ ಮೂಲಕ ಹೊರತಂದು, ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಅನಕೂಲ ವಾಗಲಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಪಿಂಟು ಮುಂಜೆ ಮಾತನಾಡಿ, ಪ್ರತಿ ಮಕ್ಕಳಲ್ಲಿ ವಿಶೇಷ ಜ್ಞಾನಶಕ್ತಿ ಅಡಗಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅವಶ್ಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಹರ್ಷ ತಂದಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಅಧಿಕವಾಗಲು ಸಾಧ್ಯವಿದೆ. ನಮ್ಮ ಶಾಲೆಯ ಮಕ್ಕಳು ಕ್ಲಸ್ಟರ್ ಮಟ್ಟದಿಂದ ಜಿಲ್ಲಾ ಮಟ್ಟದಲ್ಲಿ ಶಾಲೆಯ ಹೆಸರನ್ನು ಕೊಂಡೊಯ್ಯಲಿ ಎಂದು ಹಾರೈಸಿದದರು. ಈ ವೇಳೆ ಬಿಆರ್‌ಪಿ ಬಿ.ಆರ್. ದರೂರ, ಕುಮಾರ ಹರಳೆ, ಸಿದ್ದು ಸೊಂದಕರ, ವಿಧ್ಯಾನಂದ ತೇಲಿ, ಆನಂದ ಕೋಳೆಕರ, ರಮೇಶ ಕಾಂಬಳೆ, ಭರತೇಶ ಬೋರಗಾಂವೆ, ಶಿಕ್ಷಕರಾದ ಎ.ಎಚ್. ಮದಾಳೆ, ಎಂ.ಎಲ್. ಹವಳೆ, ಎಚ್.ಎಸ್. ಹಾಲವಡೆಯರ, ಆರ್.ಆರ್. ಹಳಮನಿ, ಎಸ್.ಎಸ್. ಕುಂಬಾರ, ಎ.ಎಂ. ತೇವರಟ್ಟಿ, ಎಸ್.ಆರ್. ಗುರ್ಕಿ ಸೇರಿದಂತೆ ಶಿಕ್ಷಕಿಯರು ಉಪಸ್ಥಿತರಿದ್ದರು.