ಪುರುಷರು ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು: ಜಯಶ್ರೀ

ಲೋಕದರ್ಶನವರದಿ

ರಾಣೇಬೆನ್ನೂರ 12: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಬಹುಮುಖ ಪ್ರತಿಭೆಯ ಮೂಲಕ ಸಮಾಜಮುಖಿ ಸೇವೆ ಮಾಡುತ್ತಿದ್ದು, ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರೆಯಲು ಪುರುಷರು ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಯಶ್ರೀ ಮರಡೆಪ್ಪನವರ  ಹೇಳಿದರು.

    ಸ್ಥಳೀಯ ಚೋಳಮರಡೇಶ್ವರ ನಗರದಲ್ಲಿ ಮಾತಾ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಶಿಕ್ಷಣದ ಬಗೆಗೂ ಹೆಚ್ಚಿನ ಮಾಹಿತಿ ನೀಡುವ ಜವಾಬ್ದಾರಿಯೂ ತಾಯಂದಿರ ಮೇಲಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

    ಶಾಲಾ ಉಪಾಧ್ಯಕ್ಷ ಕೆ.ಎಫ್. ಆನ್ವೇರಿ, ಶಾರದಾ ಆನ್ವೇರಿ, ಶಿಲ್ಪಾ ಗಡ್ಡದಗೂಳಿ, ವನಜಾಕ್ಷಿ ಕಮ್ಮಾರ,  ವನಜಾಕ್ಷಿ ಮುರಡಪ್ಪನವರ, ರತ್ಮಮ್ಮ ಬನ್ನಿಹಟ್ಟಿ, ಪದ್ಮಿನಿ ಶಿಕ್ಷಕಿ, ಉಷಾ, ಶಾಲಾ ವ್ಯವಸ್ಥಾಪಕ ಚನಬಸಪ್ಪ ಎಸ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಂತರ ತಾಯಂದಿಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು  ನಡೆದವು. ಸಮಾಜ ಸೇವೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು.