ಕೊಪ್ಪಳ: ಜಿಲ್ಲಾ ಖಜಾನೆ ಇಲಾಖೆಯ ಉಪನಿದರ್ೇಶಕರಾಗಿ ಮೆಹಬೂಬ್ಬೀ ಅವರು ಇಂದು (ಅ.05) ಅಧಿಕಾರ ವಹಿಸಿಕೊಂಡರು.
ಮೆಹಬೂಬ್ಬೀ ಅವರು ಈ ಹಿಂದೆ ಯಾದಗಿರಿ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಹಾಗೂ ಪ್ರಭಾರಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಮುಂಬಡ್ತಿ ಪಡೆದು ಕೊಪ್ಪಳ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕರಾಗಿ ಸಕರ್ಾರದಿಂದ ನೇಮಕಗೊಂಡಿದ್ದು, ಶನಿವಾರದಂದು ಕೊಪ್ಪಳ ಜಿಲ್ಲೆಯ ಖಜಾನೆ ಇಲಾಖೆಯ ಉಪನಿರ್ದೇಶಕರ ಹುದ್ದೆಯ ಅಧಿಕಾರ ವಹಿಸಿಕೊಂಡರು.