ಕರ್ನಾಟಕದಲ್ಲಿ ಎಸ್.ಸಿಹಿಎಸ್.ಟಿ ಮೀಸಲಾತಿ ಹೆಚ್ಚಳವನ್ನು ಮುಂದುವರಿಸಿ ನೇಮಕಾತಿ ಮುಂಬಡ್ತಿಯಲ್ಲಿ ನ್ಯಾಯ ಒದಗಿಸುವ ಕುರಿತು ಮನವಿ
Appeal to continue increasing S.C.H.S.T reservation in Karnataka and provide justice in recruitment
ಕೊಪ್ಪಳ 09 : ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ್ಳ ನೌಕರರ ಒಕ್ಕೂಟ (ರಿ) ಜಿಲ್ಲಾ ಘಟಕ ಕೊಪ್ಪಳದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರವು ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಮೀಸಲಾತಿ ಹೆಚ್ಚಳವನ್ನು ಮುಂದುವರೆಸುವಂತೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಅವರ ಮುಖಾಂತರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಎಸ್.ಟಿ ಸಮುದಾಯದ ಮೀಸಲಾತಿ ಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕೆಂದು ನಾಯಕ ಸ್ಟೂಡೆಂಟ್ ಫೆಡರೇಷನ್ ವತಿಯಿಂದ ಸರ್ವೋಚ್ಚ ನ್ಯಾಯಾಲಯ ದ ಮೊರೆ ಹೋಗಲಾಗಿತ್ತು. ಈ ಸಂಬಂಧ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ಮುಂದುವರಿಸಲು ಸೂಚಿಸಿತು. ಅದರಂತೆ ನಾಯಕ ಸ್ಟೂಡೆಂಟ್ ಫೆಡರೇಷನ್ ವತಿಯಿಂದ ಘಕ ಓಠ : 16852/2015 ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು.
ಈ ಸಂಬಂಧ ನ್ಯಾಯಾಲಯವು ರಾಜ್ಯ ಸರ್ಕಾರದಿಂದ ಅಗತ್ಯ ಮಾಹಿತಿಯನ್ನು ಕೇಳಿತ್ತು. ಈ ನಡುವೆ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಸುಮಾರು 257 ದಿನಗಳ ಕಾಲ ಎಸ್.ಸಿ/ಎಸ್.ಟಿ ಮೀಸಲಾತಿ ಹೆಚ್ಚಳಕ್ಕಾಗಿ ಸತ್ಯಾಗ್ರಹ ನಡೆಸಿದ್ದು ರಾಜ್ಯಾದ್ಯಂತ ಈ ವಿಷಯದ ಮಹತ್ವವನ್ನು ಎತ್ತಿಹಿಡಿದ ಘಟನೆ ಆಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ನೇಮಕ ಮಾಡಿತು. ಆಯೋಗವು ಸಮಗ್ರ ಅಧ್ಯಯನ ನಡೆಸಿ ವೈಜ್ಞಾನಿಕ ವರದಿಯನ್ನು ಸಲ್ಲಿಸಿತು. ಆ ವರದಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಎಸ್.ಸಿ ಮೀಸಲಾತಿಯನ್ನು 15ಅ ರಿಂದ 17ಅ ಕ್ಕೆ, ಎಸ್.ಟಿ ಮೀಸಲಾತಿಯನ್ನು 3ಅ ರಿಂದ 7ಅ ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.
ಈ ವೈಜ್ಞಾನಿಕ ವರದಿಯ ಆಧಾರದ ಮೇಲೆ ಕರ್ನಾಟಕ ರಾಜ್ಯ ಸರ್ಕಾರವು ಖಅ-ಖಖಿ-ಓಃಅ ಕಾಯ್ದೆಗೆ ತಿದ್ದುಪಡಿ ಮಾಡಿ 2022ರಲ್ಲಿ ಮೀಸಲಾತಿಯನ್ನು ಹೆಚ್ಚಳ ಮಾಡಿತು. ಇದರ ಪರಿಣಾಮವಾಗಿ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ 56ಅ ಆಗಿದೆ
ಆದರೆ ಮೀಸಲಾತಿ ಪ್ರಮಾಣವು 50ಅ ಮೀರಿರುವುದನ್ನು ಪ್ರಶ್ನಿಸಿ ಕೆಲವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಏಂಖಿ) ಮೊರೆ ಹೋದರು. ಈ ಸಂಬಂಧ ಏಂಖಿ ಸರ್ಕಾರವು ಸೂಕ್ತ ನಿಯಮಗಳನ್ನು ರೂಪಿಸದೆ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕೆಲವು ನೇಮಕಾತಿಗಳನ್ನು ಅಮಾನ್ಯಗೊಳಿಸುವಂತೆ ಆದೇಶ ನೀಡಿತು.
ನಂತರ ರಾಜ್ಯ ಸರ್ಕಾರವು ಹೈಕೋರ್ಟ್ ಮೊರೆ ಹೋಗಿ ಖಅ, ಖಖಿ, ಓಃಅ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿತು. ಆದರೆ ಮೀಸಲಾತಿ ವಿಚಾರ ಅಂತಿಮವಾಗಿ ಬಗೆಹರಿಯುವವರೆಗೆ ನೇಮಕಾತಿಯ ಅಂತಿಮ ಆದೇಶ ಹೊರಡಿಸದಂತೆ ಹೈಕೋರ್ಟ್ ಸೂಚನೆ ನೀಡಿದೆ.
ಇದೀಗ ಸರ್ಕಾರವು 56ಅ ಮೀಸಲಾತಿಯ ಬದಲು 50ಅ ಮೀಸಲಾತಿ ಮಿತಿಯೊಳಗೆ ನೇಮಕಾತಿ ನಡೆಸುವ ಬಗ್ಗೆ ಚಿಂತನೆ ಮಾಡುತ್ತಿರುವುದು ತಿಳಿದುಬರುತ್ತಿದೆ. ಇದು ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳಿಗೆ ಗಂಭೀರ ಅನ್ಯಾಯವಾಗುವ ಸಾಧ್ಯತೆ ಇದೆ.
ಸರ್ವೋಚ್ಚ ನ್ಯಾಯಾಲಯವು “ಇಂದಿರಾ ಸಾಹ್ನಿ ಪ್ರಕರಣ”ದಲ್ಲಿ ವಿಶೇಷ ಸಂದರ್ಭಗಳಲ್ಲಿ 50ಅ ಮೀರಿದ ಮೀಸಲಾತಿಯನ್ನು ನೀಡಬಹುದು ಎಂದು ಸ್ಪಷ್ಟವಾಗಿ ಹೇಳಿದೆ. ಕರ್ನಾಟಕದಲ್ಲಿ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವೈಜ್ಞಾನಿಕ ವರದಿ ಹಾಗೂ ಜನಸಂಖ್ಯಾ ಅಂಕಿ ಅಂಶಗಳ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಆದ್ದರಿಂದ ಇದು ಸಂವಿಧಾನಬದ್ಧವಾದ ಕ್ರಮವಾಗಿದೆ.
ಆದ್ದರಿಂದ ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ವಿನಮ್ರವಾಗಿ ಮನವಿ ಸಲ್ಲಿಸುತ್ತೇವೆ:ನೂತನ ಒಳ ಮೀಸಲಾತಿ (ಪ.ಜಾತಿ) ಅನ್ವಯ ನೇಮಕಾತಿ, ಬಡ್ತಿ ಪ್ರಕ್ರಿಯೆಯಾಗಲಿ.
1) 2022ರಲ್ಲಿ ಎಸ್.ಸಿಹಿಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಕಾರಣವಾದ ವೈಜ್ಞಾನಿಕ ಹಾಗೂ ಸಂವಿಧಾನಬದ್ಧ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ಸಮಗ್ರವಾಗಿ ತಂದು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು.
2) ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಈ ಕಾಯ್ದೆಯನ್ನು ಸಂವಿಧಾನದ 9ನೇ ಅನುಕ್ರಮಣಿಕೆಯಲ್ಲಿ (9ಣ ಖಛಿಜಜಣಟಜ) ಸೇರಿಸುವ ಮೂಲಕ ಕಾನೂನುಬದ್ಧ ರಕ್ಷಣೆ ಒದಗಿಸಬೇಕು.
3) ಹಿಂದುಳಿದ ವರ್ಗಗಳಿಂದ ಅನೇಕ ಸಮುದಾಯಗಳನ್ನು ಎಸ್.ಟಿ ಪಂಗಡಕ್ಕೆ ಸೇರಿಸಿದಾಗ ಅವರ ಮೀಸಲಾತಿ ಪ್ರಮಾಣವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲಾಗಿಲ್ಲ. ಆ ಪ್ರಮಾಣವನ್ನು ಎಸ್.ಟಿ ಮೀಸಲಾತಿಗೆ ವರ್ಗಾವಣೆ ಮಾಡುವ ಮೂಲಕ ನ್ಯಾಯ ಒದಗಿಸಬೇಕು.
ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ಮೀಸಲಾತಿ ಹೆಚ್ಚಳವು ನಾಗಮೋಹನ್ ದಾಸ್ ಆಯೋಗದ ವೈಜ್ಞಾನಿಕ ವರದಿ, ಜನಸಂಖ್ಯಾ ಅಂಕಿಅಂಶಗಳು ಮತ್ತು ಸಂವಿಧಾನದ ಸಾಮಾಜಿಕ ನ್ಯಾಯದ ತತ್ವಗಳ ಆಧಾರದ ಮೇಲೆ ನೀಡಲಾಗಿದೆ. ಆದ್ದರಿಂದ ಸರ್ಕಾರವು ಈ ಮೀಸಲಾತಿಯನ್ನು ಕಡಿಮೆ ಮಾಡದೆ 2022ರ ಕಾಯ್ದೆಯ ಪ್ರಕಾರವೇ ಮುಂದುವರಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಬಲವಾದ ವಿನಂತಿಯಾಗಿದೆ.
ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ದೃಷ್ಟಿಯಿಂದ ಈ ಮನವಿಯನ್ನು ಪರಿಗಣಿಸಿ ನ್ಯಾಯ ಒದಗಿಸುವಂತೆ ಕೋರಿಕೊಳ್ಳುತ್ತೇವೆ
ಎಂದು ಮನವಿ ಸಲ್ಲಿಸಲಾಯಿತು ಸರ್ಕಾರ ಹಳೆ ಮೀಸಲಾತಿ ಅನ್ವಯ ನೇಮಕಾತಿ ಮಾಡಿದರೆ ಪ.ಜಾತಿ/ಪ,ಪಂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ನಮ್ಮ ನ್ಯಾಯಯುತ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಕುರಿತು ಡಾ.ಪ್ರಭುರಾಜ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಂಜುನಾಥ ಮ್ಯಾಗಳಮನಿ, ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಪೂಜಾರ, ಡಾ.ಮಂಜುನಾಥ ಆರೆಂಟನೂರ, ಡಾ.ಗವಿಸಿದ್ಧಪ್ಪ ಮುತ್ತಾಳ, ನಾಗರಾಜನಾಯಕ ಡಿ.ಡೊಳ್ಳಿನ, ಹನುಮಂತಪ್ಪ ಚಲವಾದಿ, ಮಹಾವೀರ, ರಮೇಶ ಪೂಜಾರ, ಬಾಳಪ್ಪ ಕಾಳೆ, ಮಾರುತಿ ಮ್ಯಾಗಳಮನಿ, ಈಶ್ವರ ಕಂಚೇರ, ಪಾಂಡುರಂಗ ಅಲ್ಲೂರ, ಮಾರುತಿ ಮ್ಯಾಗಳಮನಿ, ರಾಮಣ್ಣ ಕಳ್ಳಿಮನಿ, ಅಂದಪ್ಪ ಬಳೂಟಗಿ, ಮೋಹನ ಚಲವಾದಿ, ನಾಗರಾಜ ಹಲಗೇರಿ ಮತ್ತಿತ್ತರರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 