ಸೇವೆಗೆ ಸಂದ ಗೌರವ - ಮಹಾದೇವ

ಸೇವೆಗೆ ಸಂದ ಗೌರವ - ಮಹಾದೇವ   Respect for service - Mahadeva

ಕುಕನೂರ 10 :  ಗೃಹರಕ್ಷಕ ದಳದಲ್ಲಿ  ಕುಕನೂರಿನ ಬಸವರಾಜ ಅಳವಂಡಿ ಮಾಡಿದ ಸೇವಾ ಕಾರ್ಯಕ್ಕೆ ಮುಖ್ಯಮಂತ್ರಿ ಪದಕ  ದೊರೆತಿರುವುದು ಅವರ ಸೇವಾ ಕಾರ್ಯಕ್ಕೆ ಸಿಕ್ಕ ಗೌರವವಾಗಿದೆ ಎಂದು ಪೂಜ್ಯ ಮಹಾದೇವ ಸ್ವಾಮೀಜಿ ಹೇಳಿದರು. ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಯುತರಿಗೆ ಸನ್ಮಾನ ಮಾಡಿ ಮಾತನಾಡುತ್ತಾ ಮನುಷ್ಯನಾದವನು ಉತ್ತಮ ಸೇವೆಯನ್ನು ಮಾಡಿದಾಗ ಅವನಿಗೆ ಸಮಾಜದಿಂದಾಗಲಿ ಸರ್ಕಾರದಿಂದಾಗಲಿ ಗೌರವ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಶ್ರೀಯುತರು ಸಾಕ್ಷಿಯಾಗಿದ್ದಾರೆ ಶ್ರೀಯುತರು ಬಡತನದಿಂದ ಬೆಳೆದು ಇವತ್ತು ಸಮಾಜದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ ಅವರ ತಂದೆಯ ಸೇವಾ ಕಾರ್ಯವು ಇವರಿಗೆ ಪ್ರೇರಣೆಯಾಗಿದೆ, ನಮ್ಮಲ್ಲಿ ಸೇವಾ ಮನೋಭಾವ  ಮುಖ್ಯ ನಾವು ಮಾಡುವ ಸೇವಾಕಾರ್ಯದಿಂದ ನಮ್ಮ ಮನೆತನಕ್ಕೆ ಗೌರವ ಬರುತ್ತದೆ ಎಂದರು.

ನಂತರ ಮಾತನಾಡಿದ ಗೃಹರಕ್ಷಕ ದಳ ಹಿರಿಯ ಅಧಿಕಾರಿಯಾದ ವೀರಣ್ಣ ಬಡಿಗೇರ ಮಾತನಾಡಿ ಗೃಹರಕ್ಷಕ ದಳ ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಗೃಹರಕ್ಷಕರು ಸಾರ್ವಜನಿಕರ ಆಸ್ತಿ, ಪಾಸ್ತಿಗಳ ರಕ್ಷಣೆ, ಸಂಚಾರ ನಿಯಂತ್ರಣ, ಪ್ರವಾಹ ಮತ್ತು ಬೆಂಕಿ ಅನಾಹುತ ಇನ್ನಿತರ ಸಂದರ್ಭದಲ್ಲಿ ಜನರಿಗೆ ಸೂಕ್ತ ರಕ್ಷಣೆ ಒದಗಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ, ಎಮ್ ಎಸ್ ಚಾರಿಟೇಬಲ್ ಟ್ರಸ್ಟ್‌ ಸಂಚಾಲಕ ಈರಣ್ಣ ಶಿರೂರ , ಗೃಹರಕ್ಷಕ ದಳದ ಬಾಳಪ್ಪ ಯತ್ನಟ್ಟಿ, ಶಿವಯ್ಯ ಮಂಡಲಗೇರಿ ಮತ್ತು ಇತರರು ಇದ್ದರು. ಫೋಟೋ ಪೈಲ್ : ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ  ಮುಖ್ಯಮಂತ್ರಿ ಪದಕ ಪಡೆದ ಬಸವರಾಜ ಅಳವಂಡಿಗೆ ಸನ್ಮಾನ ಮಾಡಿದ ಪೂಜ್ಯರು.