ಹನಮಸಾಗರ 11: ಅನಾಪಾನ ಧ್ಯಾನದಿಂದ ನಾವು ಎಲ್ಲವನ್ನು ಪಡೆಯಬಹುದು ಎಂದು ಬೆಂಗಳೂರಿನ ಮಾಸ್ಟರ್ ಲಲಿತಾ ಪವಾರ ಹೇಳಿದರು.
ಗ್ರಾಮದ ಶ್ರೀ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಮಂಡಲ ಸಂಕಲ್ಪ ಧ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನಸಿಕ ನೆಮ್ಮದಿಗೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಮಧುಮೇಹ, ಬಿಪಿಯಿಂದ ಬಳಲುವಂತಹವರು ಈ ಧ್ಯಾನದಿಂದ ಕೆಲವೇ ದಿನಗಳಲ್ಲಿ ಯತಾಸ್ಥಿತಿಗೆ ಬರುತ್ತಾರೆ. ಇದನ್ನು ಎಲ್ಲಿಯಾದರೂ, ಸುಖಾಸನದಿಂದ ಕುಳಿತುಕೊಂಡು ಮಾಡಬಹುದಾಗಿದೆ. ಸಹಜವಾದ ಉಸಿರಾಟವನ್ನು ಗಮನಿಸುತ್ತಾ ಹೊಗಬೇಕು.
ಧ್ಯಾನ ಎಂದರೆ ಉಸಿರಾಟದ ಮೇಲೆ ಗಮನ, ಒಂದು ದಿವಸ ಬಿಡದೆ ಮಾಡಬೇಕು ಇದರಿಂದ ನಮಗೆ ಬ್ರಹ್ಮಾಂಡದ ವಿಶ್ವಶಕ್ತಿ ನಮಗೆ ಸಿಗುತ್ತದೆ. ಇದೇ ಮಾ.16 ರಂದು ಶ್ರೀ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಉಚಿತವಾಗಿ ಧ್ಯಾನ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ. ತಪ್ಪಿಸದೆ ಎಲ್ಲರೂ ಆಗಮಿಸಿ ಸದುಪಯೋಗ ಪಡೆದುಕೊಳ್ಳ ಎಂದರು.
ಇದೇ ವೇಳೆ ಪತ್ರಿಕಟ್ಟಿ ಬಸವೇಶ್ವರ ತರುಣ ಸಂಘ, ನಿಸರ್ಗ ಸಂಗೀತ ವಿದ್ಯಾಲಯ ಸಂಘ, ಡಾ.ಪುಟ್ಟರಾಜ ಗಾನಯೋಗಿ ಭಜನಾ ಸಂಘ, ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಘ, ಅಕ್ಕಮಾಹಾದೇವಿ ಬಳಗ ಸೇರಿದಂತೆ ನಾನಾ ಸಂಘದವರು ಭಾಗಿಯಾಗಿದ್ದರು.