ಬೈಲಹೊಂಗಲ: ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಸ್ಥಗಿತ

ಲೋಕದರ್ಶನ ವರದಿ

ಬೈಲಹೊಂಗಲ 17:  ರಾಷ್ರ್ಯವ್ಯಾಪ್ತಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲಾಗಿತ್ತು. ವಿಷೇಶವಾಗಿ ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಪಟ್ಟಣದ ಮಹಾಂತಶೆಟ್ಟಿ ಅವರು ಮಲಪ್ರಭಾ ಮಲ್ಟಿಸ್ಪೇಶಾಲಿಟಿ, ಹಣಮಂತಗಡ, ನೇಗಿನಹಾಳ ಹಾಗೂ ಎಲ್ಲ ಆಸ್ಪತ್ರೆಗಳು  ರೋಗಿಗಳಿಲ್ಲದೆ ಬಣಗುಟ್ಟಿತ್ತಿದ್ದವು.

ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾತಿ ಪಡೆದ ರೋಗಿಗಳಿಗೆ ನರ್ಸಗಳು ಚಿಕಿತ್ಸೆ ನೀಡುತ್ತಿದ್ದರು. ವೈದ್ಯರು ತುತರ್ು ಚಿಕಿತ್ಸೆ, ಹೇರಿಗೆ ರೋಗಿಗಳಿಗೆ ಚಿಕಿತ್ಸೆ ನೀಡಿದರು. ದಂತ ವೈದ್ಯರು, ಕೆಲ ಮೆಡಿಕಲ್ ಶಾಪ ಮಾಲಿಕರು ತಮ್ಮ ಸೇವೆ ಸ್ಥಗಿತಗೊಳಿಸಿದ್ದರು. 

   ಮುಷ್ಕರದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸೇವೆ ನಿಲ್ಲಿಸಿದ್ದರಿಂದ ಸೋಮವಾರ ರೋಗಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯತ್ತ ಮುಖ ಮಾಡಿದ್ದರಿಂದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಪ್ರತಿ ದಿನದಕ್ಕಿಂತ ದುಪ್ಪಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಪರದಾಡಿದರು.

 ಪತ್ರಿಕೆಯೊಂದಿಗೆ ಮಾತನಾಡಿದ ಆಯ್ಎಂಎ ಅಧ್ಯಕ್ಷ ಡಾ. ಚಿದಂಬರ ಕುಲ್ಕಣರ್ಿ ಪಶ್ಚಿಮ ಬಂಗಾಳದಲ್ಲಿ ಡಾ.ಪರಿಬಾಹಾ ಮುಖಜರ್ಿ ಎಂಬ ವೈದ್ಯರ ಮೇಲೆ ಗುಂಪೊಂದು ಹಲ್ಲೆ ಮಾಡಿದ್ದು, ವೈದ್ಯರು ಜೀನನ್ಮರಣದಲ್ಲಿ ಹೊರಾಡುತ್ತಿದ್ದಾರೆ. ಇದ್ದನು ಖಂಡಿಸಿ ರಾಷ್ತ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ವೈದ್ಯರ ಮುಷ್ಕರಕ್ಕೆ ಸ್ಪಂದಿಸಿ ಪಟ್ಟಣದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸುವ ಮೂಲಕ ಪ್ರತಿಭಟಿಸಲಾಗುತ್ತಿದೆ. ಪಟ್ಟಣದ ವೈದ್ಯರು ಹಲ್ಲೆಯನ್ನು ಖಂಡಿಸಿ ಪ್ರತಿಭಟಿಸಿದ್ದೆವೆ. ಪಶ್ಚಿಮ ಬಂಗಾಳ ಸರಕಾರ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸರಕಾರ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ವೈದ್ಯಕೀಯದಲ್ಲಿ ವೈದ್ಯರ ಸೇವೆ ಕುರಿತಾಗಿ ಹಲ್ಲೆ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲು ಕಾನೂನು ರೂಪಿಸಬೇಕು ಎಂದರಲ್ಲದೆ ಮಂಗಳವಾರದಿಂದ ಎಂದಿನಂತೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಲಭ್ಯವಿದೆ ಎಂದರು. ಪತ್ರಿಕೆಯೊಂದಿಗೆ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯ ಆರ್.ಎಸ್. ಹಿತ್ತಲಮನಿ ಸೋಮವಾರ ಪ್ರತಿ ದಿನಕ್ಕಿಂತ ದುಪ್ಪಟ್ಟು ಅಂದರೆ 700 ಕ್ಕೂ ಹೆಚ್ಚು ಹೊರ ರೋಗಿಗಳಿದೆ ಚಿಕಿತ್ಸೆ ನೀಡಲಾಯಿತು ಎಂದರು.

ಹಿರಿಯ ವೈದ್ಯರಾದ ಡಾ.ಎ.ಎನ್. ಬಾಳಿ, ಜನಗನಾಥ ಹಣಂತಗಡ, ಸುಭಾಷ ನೇಗಿನಹಾಳ, ಎಂ.ಪಿ. ಗದಗ, ಆಯ್ಎಂಎ ಕಾರ್ಯದಶರ್ಿ ಡಾ. ಶರಣಕುಮಾರ ಅಂಗಡಿ, ಖಜಾಂಚಿ ಮಂಜುನಾಥ ಮುದಕನಗೌಡರ, ಅಶೋಕ ದೊಡವಾಡ ಇದ್ದರು.