ಶಿಗ್ಗಾವಿ೧೯: ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ಎಲ್.ಜಿ.ಹಾವನೂರ ಆಯೋಗದ ಅಂಕಿ ಸಂಖ್ಯೆಯ ಪ್ರಕಾರ ಮಾದಿಗ ಜನಾಂಗದವರು 57.2% ರಷ್ಟು ಬಹುದೊಡ್ಡ ಸಮುದಾಯವಿದ್ದು ಈ ಸಮುದಾಯಕ್ಕೆ ಸಂವಿಧಾನಬದ್ಧ ಇರುವ ಸವಲತ್ತುಗಳಿಂದ ವಂಚಿತಗೊಂಡ ಸಮಾಜವಾಗಿದೆ ಎಂದು ಅಖಿಲ ಭಾರತ ಆಧಿಜಾಂಬವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಮಾಳಗಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಮಾನವ ಜನಾಂಗದ ಕಟ್ಟ ಕಡೆಯ ಜನಾಂಗವೆಂದರೆ ಮಾದಿಗರು ಈ ವರ್ಗವು ಎಲ್ಲಾ ರಂಗದಲ್ಲೂ ಹಿಂದುಳಿದ ಸಮಾಜ ಅಂತಾ ಈ ಹಿಂದೆ ಡಿ.ಕೆ.ನಾಯ್ಕರ ಆಯೋಗ ವರದಿ ನೀಡಿದೆ ಅದನ್ನು ಸದನದಲ್ಲಿ ಸಚಿವ ಸಂಪುಟದಲ್ಲಿ ಚರ್ಚ್ ಆಗಲೆ ಇಲ್ಲ ತದನಂತರ ನಮ್ಮ ಸಮಾಜದವರು ಆಂಧ್ರ ಪ್ರದೇಶದ ಮಾದರಿಯಲ್ಲಿ ಜನಸಂಖ್ಯೆಗನುಗುಣವಾಗಿ ಪ್ರತ್ಯೇಕ ಒಳಮೀಸಲಾತಿಯನ್ನು ಕಳೆದ 20 ವರ್ಷಗಳಿಂದ ನಮ್ಮ ಸಮಾಜದವರು ಎಲ್ಲ ಹಂತದಲ್ಲಿ ಹೋರಾಟ ಮಾಡಿರುತ್ತೇವೆ.
ಎಸ್.ಎಮ್.ಕೃಷ್ಣ ಮುಖ್ಯಮಂತ್ರಿಗಳು ಇದ್ದ ಅವಧಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಸ್.ಜೆ.ಸದಾಶಿವ ಅವರ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿದರು. ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಇದ್ದ ಅವದಿಯಲ್ಲಿ ಆಯೋಗವು ಸಂಪೂರ್ಣ ವರದಿ ನೀಡಲು ಆಯೋಗಕ್ಕೆ 14 ಕೋಟಿ ರೂಪಾಯಿ ಅನುಧಾನ ಬಿಡುಗಡೆ ಮಾಡಿದ್ದಾರೆ. ಆಯೋಗವು ಜಗದೀಶ ಶೆಟ್ಟರ ಮುಖ್ಯಮಂತ್ರಿ ಇದ್ದ ಅವದಿಯಲ್ಲಿ ಸರರ್ಕಾರಕ್ಕೆ ವರದಿ ನೀಡಿದ್ದಾರೆ. ನಂತರ ತಾವು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಮತ್ತು ವಿಧಾನ ಸಭೆ ವಿಧಾನ ಪರಿಷತ್ನಲ್ಲಿ ಚರ್ಚ್ಗೆ ಅವಕಾಶ ನೀಡಲೇ ಇಲ್ಲ ಅದಕ್ಕೆ ಮೀಸಲಾತಿಯಲ್ಲಿ ಗೆದ್ದ ಕೆಲವೊಂದು ಸಚಿವರು ಶಾಸಕರು ಬಾರಿ ವಿರೋದ ಮಾಡಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಈ ಅನ್ಯಾಯದ ವಿರುದ್ದ ನಮ್ಮ ಸಮಾಜದವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಆಕ್ರೋಶಗೊಂಡು ಬಿಜೆಪಿಗೆ ಮತ ನೀಡಿದ್ದು ತಾವು ಕೂಡಾ ಇದನ್ನು ಒಪ್ಪಿಕೊಂಡಿರುವಿರಿ.
ತದನಂತರ ಈ ಆಕ್ರೋಶ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಪರಿವರ್ತನೆಯಾಗಿರುತ್ತವೆ. ಮಾದಿಗ ಜನಾಂಗದವರು ಯಾವಾಗಲೂ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುತ್ತ ಬಂದಂತಹ ಸಮಾಜವಾಗಿರುತ್ತದೆ. ತಾವು ಸಮನ್ವಯ ಅಸಮಿತಿ ಅಧ್ಯಕ್ಷರಿದ್ದು ಸಾಮಾಜಿಕ ನ್ಯಾಯದ ಪರವಾಗಿ ದಿಟ್ಟ ನಾಯಕರಾಗಿದ್ದು, ಅಹಿಂದ ವರ್ಗದ ಹಿಚಿಂತಕರು ಇದ್ದು ದೇವರಾಜ ಅರಸರವರ ದಿಟ್ಟತನದಿಂದಲೇ ಎಲ್.ಜಿ.ಹಾವನೂರ ಆಯೋಗ ರಚಿಸಿ ಎಲ್ಲ ಸಮುದಾಯದವರಿಗೆ ಅವಕಾಶ ಕೊಟ್ಟಿದ್ದಾರೆ. ನಾವು ಆದನ್ನು ಯಾವಾಗಲೂ ವಿರೋದ ಮಾಡಿರುವದಿಲ್ಲ.
ಈಗ ನಮ್ಮ ಸಮಾಜವು ಜನಸಂಖ್ಯೆಗನುಗುಣವಾಗಿ ಎಲ್ಲಾ ರಂಗದಲ್ಲಿ ಅಭಿವೃದ್ದಿ ಹೊಂದಲು ಅಸ್ಪುಶ್ಯರಾದ ನಮ್ಮ ಸಮಾಜವು ಅಭಿವೃದ್ಧಿ ಆಗುವದು ಬೇಡವೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸದಾಸಿವ ಆಯೋಗ ಜಾರಿಗೆ ತರಲು ಒತ್ತಾಯಿಸಬೇಕೆಂದು ಮನವಿ ಮಾಡಿದ್ದಾರೆ.