ಲೋಕದರ್ಶನವರದಿ
ಮುಧೋಳ 25: ಬಯಲಾಟಗಳ ರಾಜನೆಂದು ಬಿರುದು ಪಡೆದ ಸುಮಾರು 200 ವರ್ಷಗಳಿಂದ ಜನಾಕರ್ಷಣೆ ಪಡೆದ ಶ್ರೀ ಕೃಷ್ಣ ಪಾರಿಜಾತಕ್ಕೆ ಅಂತರಾಷ್ಟ್ರೀಯ ಮಣ್ಣೆದೊರೆಯಲಿ ಎಂದು ಮುಧೋಳ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಹಾಂತೇಶ ನರಸನಗೌಡರ ಹೇಳಿದರು.
ಕರ್ನಾಟಕ ಬಯಲಾಟ ಅಕಾಡಮಿ ಬಾಗಲಕೋಟೆ ಹಾಗೂ ಡಾ.ಪಂಡಿತ ಪುಟ್ಟರಾಜ ಕವಿಗವಾಯಿಗಳ ಸ್ಮೃತಿಪಾಠ ಸಂಸ್ಥೆ ಮುಧೋಳ ಹಮ್ಮಿಕೊಂಡ ಕೃಷ್ಣ ಪಾರಿಜಾತ ತರಬೇತಿ ಸಮಾರೋಪ ಹಾಗೂ ಪ್ರದರ್ಶನ ಸಮಾರಂಭ ಅಧ್ಯುಕ್ಷತೆ ವಹಿಸಿ ಮಾತನಾಡಿದರು. ವಿಶೇಷ ಸಂಗೀತ ಪರಂಪರೆ ಹಾಗೂ ಆಧ್ಯತ್ಮಿಕ ಸ್ಪರ್ಶದಿಂದ ಬಹು ಬೇಗನೆ ಜನಮಾಸದಲ್ಲಿ ಉಳಿದ ಈ ಕಲೆ ಪರಿಷ್ಕರಿಸುವದು ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಹಿರಿಯ ಕಲಾವಿದೆ ಕಮಲವ್ವ ಜಾನಪ್ಪಗೋಳ ತಬಲಾ ನಡೆಸುವ ಮೂಲಕ ಚಾಲನೆ ನೀಡಿ ಕಲಾ ಪರಂಪರೆ ಮಲುಕು ಹಾಕಿದರು. ತಾಲೂಕಾ ಕ.ಸಾ.ಪ ಅಧ್ಯಕ್ಷ ಸಂಗಮೇಶ ನೀಲಗುಂದ ಶಕ್ಷಣ ಸಂಹೋಜಕ ಪ್ರಾಕಾಶ ಹೋಸಮನಿ ತಾಲೂಕ ಕರ್ನಾಟಕ ಜಾನಪದ ಆನಂದ ಪೂಜಾರಿ ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯ ಸಾಹಿತಿಗಳಾದ ಕೆ.ಎಂ ಪಟ್ಲೂರ್ ,ಎಸ್ ಬಿ ಇಟ್ಟಣ್ಣವರ, ಹಿರಿಯ ಕಲಾವಿದರಾದ ನಾರಾಯಣ ಪತ್ತಾರ,ಮಲ್ಲಪ್ಪ ಹೋಸಕೋಟಿ, ಪಾರವ್ವ ಹೋಸಕೋಟಿ, ದುರ್ಗವ್ವ ಮುಧೋಳ ಮರಗವ್ವ ಮಾದರ, ವಿಠ್ಠಲ್ ಗುರವ್ವ, ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.
ಕನರ್ಾಟಕ ಜಾನಪದ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಸ್ಥಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಹನಮಂತ ಮೇತ್ರಿ ಸ್ವಾಗತಿಸಿದರು.ರಮೇಶ ಅರಕೇರಿ ನಿರೂಪಿಸಿದರು.ತರಬೇತಿಗೂಂಡ ವಿದ್ಯಾಥರ್ಿಗಳಿಂದ ಹೊಸ ಮಾದರಿಯ ಪರಿಜಾತ ಪ್ರದರ್ಶನವು ನೆರೆದ ಪ್ರೇಕ್ಷಕರಿಗೆ ರಂಜಿಸಿತು. ಸದಾಶಿವ ಕುಂಬಾರ ವಂದಿಸಿದರು.