ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 23:ಅನ್ನದಾತರು ಆಥರ್ಿಕ ಹಾಗೂ ತಾಂತ್ರಿಕವಾಗಿ ಸಬಲ ಹಾಗೂ ಸದೃಢರಾದಾಗ ಮಾತ್ರ ದೇಶದ ಪ್ರಗತಿಯಾಗಲು ಸಾಧ್ಯ ಎಂದು ಧರ್ಮಸ್ಥಳದ ಧಮರ್ಾಧಿಕಾರಿಗಳಾದ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ತಾಲೂಕಿನ ಗಂಗಾವತಿ ಭೀಮಪ್ಪನವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಕೃಷಿ ಉತ್ಸವ ಉದ್ಘಾಟಿಸಿ ಮಾತನಾಡಿ ಈಗಾಗಲೇ ನಮ್ಮ ಸಂಸ್ಥೆಯಿಂದ ಕೃಷಿಕರಲ್ಲಿ ಜಾಗೃತಿ ಮೂಡಿಸಿ ತಾಂತ್ರಿಕ ಹಾಗೂ ಸಾಮಾಜಿಕವಾಗಿ ಕೃಷಿ ಚಟುವಟಿಕೆಯಲ್ಲಿನ ಆದಾಯಗಳಿಕೆಯ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುತ್ತಿವೆ ಎಂದು ತಿಳಿಸಿದರು.
ದುಡಿದು ತಿನ್ನುವವನಿಗೆ ಸಹಾಯ ಮಾಡಬಹುದು. ದಾರಿಯಲ್ಲಿ ನಡೆಯುವವನಿಗೆ ಗುರಿ ಮುಟ್ಟಿಸಬಹುದು. ಏನನ್ನು ಪ್ರಯತ್ನ ಸಾಧನೆಗೆ ಕೈಹಾಕದವನಿಗೆ ಶ್ರೀ ಮಂಜುನಾಥ ಸ್ವಾಮಿಯ ಸಹಿತ ಯಾವ ದೈವವೂ ಅನುಗ್ರಹಿಸುವುದಿಲ್ಲ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಜನೋಪಯೋಗಿ ಸೌಲಭ್ಯಗಳನ್ನು ಅತ್ಯಂತ ಯಶಸ್ವಿಯಾಗಿ ಉಪಯೋಗಿಸಿಕೊಂಡು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಆಥರ್ಿಕವಾಗಿ ಸಬಲರಾಗಿದ್ದಕ್ಕಾಗಿ ನಿಮ್ಮನ್ನು ನೋಡಲು ಬಂದಿದ್ದೇನೆಂದು ತಿಳಿಸಿದರು. ಮತ್ತು ಇಂದಿನ ಮಹಿಳೆಯರು ಪ್ರಜ್ಞಾವಂತರಾಗಿದ್ದರೆ ಮಾತ್ರ ಸಂಸಾರ ಎಂಬ ನೌಕೆ ಸರಾಗವಾಗಿ ಸಾಗುತ್ತದೆ ಎಂದರು.
ಕೃಷಿ ಸಚಿವ ಹೆಚ್.ಶಿವಶಂಕರ ರೆಡ್ಡಿ ಮಾತನಾಡಿ ಮುಂಬರುವ ದಿನಗಳಲ್ಲಿ ಕೃಷಿ ನೀತಿಯಲ್ಲಿ ಸಮಗ್ರ ಬದಲಾವಣೆ, ಇಸ್ರೇಲ್ ತಂತ್ರಜ್ಞಾನದಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲು ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಶೂನ್ಯ ಬಂಡವಾಳದಲ್ಲಿ ರೈತರ ಅಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಸಕ್ತಿ ಹೊಂದಿದ್ದಾರೆಂದು ತಿಳಿಸಿದರು. ಈಗಾಗಲೇ ಸಮ್ಮಿಶ್ರ ಸಕರ್ಾರದಲ್ಲಿ 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯನಿವರ್ಾಹಕ ನಿದರ್ೇಶಕರಾದ ಡಾ.ಎಲ್.ಹೆಚ್.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಭೀಮಾನಾಯ್ಕರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿ ಗೀತಾಬಾಯಿ ಭೀಮಾನಾಯ್ಕ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ವಿಜಯಕುಮಾರ್, ತಾ.ಪಂ. ಇ.ಒ ಮಲ್ಲಾನಾಯ್ಕ, ತಾ.ಪಂ.ಅಧ್ಯಕ್ಷೆ ಕೆ.ನಾಗಮ್ಮ, ಉಪಾಧ್ಯಕ್ಷೆ ಸುಶೀಲಾ ಮಂಜುನಾಥ, ಪುರಸಭೆ ಅಧ್ಯಕ್ಷರು ತಳವಾರ ರಾಘವೇಂದ್ರ, ಪ್ರತಾಪಗೌಡ ಮಾಲಿ ಪಾಟೀಲ್, ಜಿ.ಪಂ.ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್, ಮುಖಂಡರಾದ ಜಿ.ಲಕ್ಷ್ಮೀಪತಿ, ಡಿಶ್ ಮಂಜುನಾಥ, ಬಾದಾಮಿ ನಟರಾಜ, ನೆಲ್ಲು ಇಸ್ಮಾಯಿಲ್, ಹೊನ್ನೂರಪ್ಪ ಮತ್ತು ಸಂಸ್ಥೆಯ ಹೈದ್ರಾಬಾದ್-ಕನರ್ಾಟಕ ಪ್ರಾದೇಶಿಕ ನಿದರ್ೇಶಕರಾದ ಗಂಗಾಧರ ರೈ, ಕೆ.ಚಿದಾನಂದ, ಸಂಜೀವ್ ಗೌಡ ಮುಂತಾದವರಿದ್ದರು.