ಬೆಳಗಾವಿ 19: ಕೃಷಿ, ವಿಜ್ಞಾನ, ಆರೋಗ್ಯ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗಣಿತ ಹಾಸುಹೊಕ್ಕಾಗಿದ್ದು, ಗಣಿತವಿಲ್ಲದ ಕ್ಷೇತ್ರವೇ ಇಲ್ಲ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಡಾ. ಟಿ. ವೆಂಕಟೇಶ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಡಾ. ಸ. ಜ. ನಾ. ವಿಜ್ಞಾನ ಕೇಂದ್ರದಲ್ಲಿ ಕನರ್ಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರವಿದ್ಯಾ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಗಣಿತ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗಣಿತ ಶಾಸ್ತ್ರವು ಒಂದು ಮಹಾಸಾಗರವಿದ್ದಂತೆ. ಗಣಿತ ಕ್ಷೇತ್ರದಲ್ಲಿನ ವಿವಿಧ ಸಾಧನೆಗಳಿಂದ ಮನುಕುಲಕ್ಕೆ ಆಗಿರುವ ಉಪಕಾರವನ್ನು ಊಹಿಸಲೂ ಸಾಧ್ಯವಿಲ್ಲ. ವಿಜ್ಞಾನ ಕ್ಷೇತ್ರಕ್ಕೆ, ತಂತ್ರವಿದ್ಯೆಗೆ, ಔಷಧ ಪ್ರಪಂಚಕ್ಕೆ ಹೀಗೆ ಮಾನವನ ಸರ್ವತೋಮುಖ ಬೆಳವಣಿಗೆಗೆ ಗಣಿತ ಸಹಕಾರಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾ.ಶಿ.ಇಲಾಖೆ ಉಪನಿದರ್ೇಶಕ ಎ.ಬಿ. ಪುಂಡಲೀಕ ಮಾತನಾಡಿ ಗಣಿತ ವಿದ್ಯಾಥರ್ಿಗಳಿಗೆ ಕಬ್ಬಿಣದ ಕಡಲೆ ಆಗಬಾರದು. ಶಿಕ್ಷಕರು ಇಂತಹ ಕಾಯರ್ಾಗಾರಗಳಿಂದ ತಮ್ಮ ಜ್ಞಾನ ವೃದ್ಧಿಸಿಕೊಂಡು ಸೃಜನಶೀಲತೆಯಿಂದ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಮತ್ತು ಗಣಿತ ವಿಷಯದ ಕುರಿತು ವಿದ್ಯಾಥರ್ಿಗಳ ಆಸಕ್ತಿ ಕೆರಳಿಸಬೇಕು ಎಂದರು.
ಕಾಯರ್ಾಗಾರದಲ್ಲಿ ಆರ್.ಎಲ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶೀತಲ್ ನಂಜಪ್ಪನವರ, ಗಣಿತ ವಿಷಯ ಪರಿವೀಕ್ಷಕ ಎಮ್.ವಾಯ್.ರಾವುಳ, ಬೆಳಗಾವಿ ಅಸೋಶಿಯೇಷನ್ ಫಾರ್ ಸೈನ್ಸ ಎಜ್ಯುಕೇಶನ್ ಕಾರ್ಯದಶರ್ಿ ಆರ್.ಜಿ. ಹಲಗಲಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ವಿಜಯಕುಮಾರ ಹಲಗಲಿಮಠ ವಂದಿಸಿದರು.