ಕಾರಿನೂರು ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ

Mass wedding at Pandurang temple in Karinur village

ಹೊಸಪೇಟೆ 09: ವಿಜಯನಗರ ಕ್ಷೇತ್ರದ ಕಾರಿನೂರು ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಹಯೋಗದಲ್ಲಿ ನೂತನವಾದ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಈ ಕಾರ್ಯಕ್ರಮದ ಸಾನಿಧ್ಯವನ್ನು ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾದೀಶ್ವರ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹೊಸಪೇಟೆ, ಬಳ್ಳಾರಿ ಹಾಲಕೆರೆ ಹಾಗೂ ಪೂಜಾರಿ ಗವಿಸಿದ್ದೇಶ್ವರ ತಾತ ಬೃಹನ್ ಮಠ ಅರಳಿ ಹಳ್ಳಿ, ಗಂಗಾವತಿ, ಇವರು ವಹಿಸಿದ್ದರು. 

ನಂತರ ಆಶೀರ್ವಚನ ಮಾಡಿದ ಬಸವಲಿಂಗ ಮಹಾಸ್ವಾಮಿಗಳು ಮದುವೆ ಎಂದರೆ ಕೇವಲ ಒಂದು ಗಂಡು ಹೆಣ್ಣಿನ ಸಮ್ಮಿಲನ ಅಷ್ಟೇ ಅಲ್ಲ, ಜೀವನ ರಥದ ಎರಡು ಚಕ್ರಗಳಿದ್ದ ಹಾಗೆ ಆದ್ದರಿಂದ ಪ್ರತಿನಿತ್ಯವೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನವನ್ನು ಸಾಗಿಸಬೇಕು. ಅನಾವಶ್ಯಕ ಕಾರಣಗಳಿಗೆ ಅಥವಾ ಮೂರನೇ ವ್ಯಕ್ತಿಗಳ ಚುಚ್ಚು ಮಾತುಗಳಿಗೆ ಬಲಿಯಾಗದೆ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕು ಇಲ್ಲದಿದ್ದರೆ ಚುಚ್ಚು ಮಾತುಗಳಿಗೆ ಬಲಿಯಾಗಿ ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ಇನ್ನು ಮುಂದುವರೆದು ಡೈವರ್ಸ್ಗಳು ಆದ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ.ಹಾಗೂ ಇತ್ತೀಚಿನ ದಿನಗಳಲ್ಲಿ  ಮದುವೆ ಎಂದರೆ ಅತ್ಯಂತ ವಿಜ್ರಂಭಣೆಯಲ್ಲಿ ಹಣವನ್ನು ದುಂದು ವೆಚ್ಚ ಮಾಡುವುದೇ ಆಗಿರುತ್ತದೆ. ಈ ರೀತಿ ಮಾಡುವುದರಿಂದ ಹೆಣ್ಣಿನ ಮನೆಯವರಿಗೂ ಹಾಗೂ ಗಂಡನ ಮನೆಯವರಿಗೂ ವಿಪರೀತವಾದ ಆರ್ಥಿಕವಾಗಿ ಹೊರೆ ಆಗುವುದು ನಂತರದ ದಿನಗಳಲ್ಲಿ ಆ ಸಾಲವನ್ನು ತೀರಿಸಲಾಗದೆ ಹಲವಾರು ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿರುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ ಒಂದು ರೀತಿಯ ವರದಾನವಾಗಿರುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಈ ಒಂದು ಸಾಮೂಹಿಕ ವಿವಾಹದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಈ ಒಂದು ಕಾರ್ಯಕ್ರಮದಲ್ಲಿ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರು ಹಾಗೂ  ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್‌. ಏನ್ ಮೊಹಮ್ಮದ್ ಇಮಾನ್ ನಿಯಾಜಿ ರವರು, ನಗರಸಭೆ ಅಧ್ಯಕ್ಷರಾದ ರೂಪೇಶ್ ಕುಮಾರ್ ರವರು, 28ನೇ ವಾರ್ಡಿನ ನಗರಸಭಾ ಸದಸ್ಯರಾದ ಎಚ್‌. ಕೆ. ಮಂಜುನಾಥ್, ಗುಜ್ಜಲ್ ಗಣೇಶ್, ಪಿ ವೆಂಕಟೇಶ್,  ಬೋಡ ರಾಮಪ್ಪ, ಹರಿಹರೇಶ್ವರ ಸೇವಾ ಟ್ರಸ್ಟ್‌ ನ ಪದಾಧಿಕಾರಿಗಳಾದ ಪರಮೇಶ್ವರ, ರಂಗಯ್ಯ, ಯರಿಸ್ವಾಮಿ ಜಡಿಯಪ್ಪ ಹಾಗೂ ಕಾರಿಗನೂರು ಗ್ರಾಮದ ಮುಖಂಡರುಗಳು ಸಾರ್ವಜನಿಕರ ಉಪಸ್ಥಿತರಿದ್ದರು.