ಲೋಕದರ್ಶನ ವರದಿ
ಬೈಲಹೊಂಗಲ 05: ಪಟ್ಟಣದಲ್ಲಿ ಮುಸ್ಲಿಂ ಸಮಾಜ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ಬುಧವಾರ ಶ್ರದ್ಧೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಜಾಮೀಯಾ ಮಸ್ಜೀದನಿಂದ ಆರಂಭವಾದ ಶ್ವೇತದಾರಿ ಮುಸ್ಲಿಂ ಸಮಾಜ ಬಾಂಧವರ ಭವ್ಯ ಮೆರವಣಿಗೆ ಬೆಲ್ಲದಕೂಟ, ಗೊಂಬಿಗುಡಿ, ಜವಳಿಕೂಟ, ಬಜಾರ ರಸ್ತೆ, ರಾಯಣ್ಣ ವೃತ್ತ, ಬಸ್ ನಿಲ್ದಾಣ, ಇಂಚಲ ಕ್ರಾಸ್ ಮಾರ್ಗವಾಗಿ ಈದ್ಗಾ ಮೈದಾನಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಮುಸ್ಲಿಂ ಬಾಂದವರು ಅಲ್ಲಾನನ್ನು ಭಕ್ತಿಯಿಂದ ಪ್ರಾಥರ್ಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮೆರವಣಿಗೆ ಸ್ವಾಗತಿಸಿ ಹಬ್ಬದ ಶುಭಾಶಯ ತಿಳಿಸಿದರು. ವರ್ಷ ಪದ್ಧತಿಯಂತೆ ಜವಳಿ ಕೂಟದಲ್ಲಿ ಜೈ ಕನರ್ಾಟಕ ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಸುರೇಶ ಮೆಟಗುಡ್ಡ, ಪುರಸಭೆ ಸದಸ್ಯ ಗುರು ಮೆಟಗುಡ್ಡ ನೇತೃತ್ವದಲ್ಲಿ ಪುರಸಭೆ ಸದಸ್ಯ ಸಾಗರ ಭಾವಿಮನಿ, ವಕೀಲೆ ದಾನಮ್ಮ ಮೆಟಗುಡ್ಡ, ಸಂಘದ ಸದಸ್ಯರುಗಳು ಮುಸ್ಲಿಂ ಬಾಂದವರ ಭವ್ಯ ಮೆರವಣಿಗೆ ಮೇಲೆ ಪುಷ್ಪಮಳೆ ಗೈದರು. ಚಂದ್ರಾಕಾರದ ಟೋಪಿ ಧರಿಸಿದ್ದ ನೂರಾರು ಮುಸ್ಲಿಂ ಬಾಂಧವರು ಸಾಲು ಸಾಲಾಗಿ ಹೊರಟಿದ್ದ ದೃಶ್ಯ ನೋಡುಗರ ಗಮನ ಸೆಳೆಯಿತು. ಮುಸ್ಲಿಂ ಪುಟಾಣಿ ಮಕ್ಕಳು ಅಲ್ಲಾನ ಪ್ರಾರ್ಥನೆ ಮಾಡುವದರ ಮೂಲಕ ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಬೈಲಹೊಂಗಲ ಶೌಟ್ಸ್ ಫೆಸ್ಬುಕ್ ಗೆಳೆಯರ ಬಳಗದ ವತಿಯಿಂದ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಮೌಲಾನಾ ಶೌಕತ್ ಮಾತನಾಡಿ, ರಂಜಾನ್ ಹಬ್ಬ ಅತ್ಯಂತ ಪವಿತ್ರ ಹಬ್ಬವಾಗಿದೆ. ಈ ಹಬ್ಬದಲ್ಲಿ ದಾನ, ಧರ್ಮ ಮಾಡುವುದರ ಜೊತೆಗೆ ದೇಶದಲ್ಲಿ, ನಾಡಿನಲ್ಲಿ ಕಾಲಕ್ಕೆ ತಕ್ಕಂತೆ ಮಳೆ, ಬೆಳೆ, ಗಡಿ ಕಾಯುವ ಯೋಧರಿಗೆ ಶಕ್ತಿ, ಸಾಮಥ್ರ್ಯ, ಸಮಾಜದಲ್ಲಿ ಸುಖಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾಥರ್ಿಸಿರಿ ಎಂದರು. ಮುಪ್ತಿಮಹ್ಮದ ಅಬ್ಬಾಸಲಿ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.
ಮೌಲಾನಾ ಸುಹೇಲ್, ಮುಸ್ಲಿಂ ಸಮಾಜದ ಮುಖಂಡರುಗಳಾದ ಜಿ.ಡಿ.ಬಾಗವಾನ, ಬುಡ್ಡೇಸಾಬ ಶಿರಸಂಗಿ, ವಕೀಲ ಝಡ್.ಎ.ಗೋಕಾಕ, ಡಾ.ಐಜಾಜ್ ಬಾಗೇವಾಡಿ, ಆರ್.ಎ.ಅರಭಾಂವಿ, ಅಕ್ತರ ತಾಳಿಕೋಟಿ, ಬಾಬುಸಾಬ ಸಂಗೊಳ್ಳಿ, ಎಂ.ಆರ್.ಮುಲ್ಲಾ, ಮಹ್ಮದಷಾ ನದಾಫ, ಎ.ಎಂ.ಲೋದಿ, ರಫೀಕ ನದಾಫ, ಮೆಹಬೂಬ ಯಕ್ಕುಂಡಿ, ಆಸೀಫ್ ಗೋವೆ, ಬಾಬುಸಾಬ ಸುತಗಟ್ಟಿ, ಹಸನ್ ಗೊರವನಕೊಳ್ಳ, ಸಮೀವುಲ್ಲಾ ನೇಸರಗಿ, ಆರ್.ಎಫ್.ಮಾಗಿ, ಕೆ.ಐ.ಮುಲ್ಲಾ, ಎಂ.ಎಂ.ನೇಗಿನಹಾಳ, ನಜೀರ ಕಿತ್ತೂರ, ಫಕ್ರುಸಾಬ ದೇವಲಾಪೂರ, ಅಬ್ದುಲ್ವಹಾಬ್ ಗದಗ, ಬಾಬುಸಾಬ ಸಂಗೊಳ್ಳಿ, ನಿಸ್ಸಾರಅಹ್ಮದ ತಿಗಡಿ, ಶರೀಫ ನದಾಫ, ರಿಯಾಜ್ ನದಾಫ, ರಿಯಾಝ್ ಬಡೇಘರ, ಯುನುಸ್ ಬಡೇಘರ ಹಾಗೂ ಅನೇಕರು ಇದ್ದರು. ಪ್ರಾರ್ಥನೆ ಮುಗಿದ ಬಳಿಕ ಹಿಂದೂ, ಮುಸ್ಲಿಂ ಸಮಾಜ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಹೊಸಭಟ್ಟೆ ತೊಟ್ಟು ಸಂಭ್ರಮಿಸಿದರು. 11ಮಸ್ಜೀದ್ ಮುಸ್ಲಿಂ ಬಾಂದವರು, ಹಿರಿಯರು, ಯುವಕರು, ಮಕ್ಕಳು ಪಾಲ್ಗೊಂಡಿದ್ದರು