ಕಾಮಗಾರಿ ಪರೀಶಿಲನೆ ಅಧಿಕಾರಿಗಳ ಜವಾಬ್ದಾರಿ ಮಲ್ಲಾನಾಯ್ಕ್ ಸೂಚನೆ

ಲೋಕದರ್ಶನವರದಿ 

ಹಗರಿಬೊಮ್ಮನಹಳ್ಳಿ 14: ತಾಲೂಕು ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿಮರ್ಿಸುತ್ತಿರುವ ರಸ್ತೆ ಕಾಮಗಾರಿಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಗಳಿಗೆ ನಷ್ಟವಾಗದಂತೆ ಎಚ್ಚರವಹಿಸಿ ನಿರ್ವಹಿಸುವುದರ ಜೊತೆ ಪೈಪ್ಗಳಿಗೆ ಧಕ್ಕೆಯಾದರೆ ಅದಕ್ಕೆ ಕಾಮಗಾರಿ ನಡೆಸುತ್ತಿರುವವರೆ ಜವಬ್ದಾರರಾಗಿರುತ್ತಾರೆ ಎಂದು ಇಒ ಮಲ್ಲಾನಾಯ್ಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಾ.ಪಂ ಮಹತ್ಮಾ ಗಾಂಧಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ

ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ: 

ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಮಟ್ಟದ ಆಹಾರ ಸರಬರಾಜಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಸಿಡಿಪಿಒ ಚನ್ನಪ್ಪ ನವರಿಗೆ ಕೇಳಿದಾಗ ಆಹಾರ ಸರಬರಾಜು ಮಾಡುವಾಗ ಅದರ ಸ್ಯಾಂಪಲ್ ಅನ್ನು ಗುಲ್ಬರ್ಗಕ್ಕೆ ಕಳುಹಿಸಿ ಆಹಾರದ ಗುಣಮಟ್ಟ ಪರಿಶೀಲಿಸಲಾಗುತ್ತಿದೆ ತದನಂತರ ಸರಬರಾಜು ಮಾಡಲಾಗುತ್ತಿದೆ ಇಂತಹ ಯಾವುದೇ ಪ್ರಕರಣಗಳು ಗಮನಕ್ಕೆ ಬಂದಿಲ್ಲವೆಂದು ಉತ್ತರಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಾನಾಯ್ಕ್ ಕಾರ್ಯ ನಿಮಿತ್ತ ಯಾವುದಾದರೂ ಹಳ್ಳಿಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವಾಸ್ತವದ ಬಗ್ಗೆ ನಿಖರ ಮಾಹಿತಿ ನೀಡಿ ಎಂದು ತಿಳಿಸಿದರು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯನ್ನೆ ನೋಡಿ ಮೊಟ್ಟೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸದೇ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಎಂದು ತಾಕೀತು ನೀಡಿದರು.

ಶುಧ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಗಿತಗೊಳಿಸದಂತೆ ಪ್ರಸ್ತಾಪ: 

ತಾಲೂಕಿನಲ್ಲಿ ಹಲವಾರು ಶುಧ್ಧ ನೀರಿನ ಘಟಕಗಳನ್ನು ತಾಂತ್ರಿಕ, ಹಣ ಪಾವತಿ ಸೇರಿದಂತೆ ಇನ್ನಿತರೆ ಕಾರಣಗಳಿಂದ ಶು.ಕು.ಘಟಕಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದಂತೆ ಇಒ ಕೆಇಬಿಯ ಎಇಇ ಅಧಿಕಾರಿಗಳಿಗೆ ತಾಕೀತು ನೀಡಿದರು ಕಲಿಕಾ ಸಮಥ್ರ್ಯದಲ್ಲಿ ಹಿಂದುಳಿದವರಿಗೆ ಹೆಚ್ಚಿನ ಆಧ್ಯತೆ : ಶೈಕ್ಷಣೀಕವಾಗಿ ಪ್ರಮುಖ ಘಟ್ಟವೆನಿಸಿಕೊಂಡಿರುವ ಎಸ್ಎಸ್ಎಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾಥರ್ಿಗಳ ಬಗ್ಗೆ ಇಒ ಪ್ರಶ್ನಿಸಿದರು ಇದಕ್ಕೆ ಬಿಇಒ ಶೇಖರಪ್ಪ ಹೊರಪೇಟೆ ಉತ್ತರಿಸಿ ಕಲಿಕೆಯಲ್ಲಿ ಹಿಂದುಳಿದ ವಿಧ್ಯಾಥರ್ಿಗಳನ್ನು ವಿಷಯವಾರು ವಿಂಗಡನೆ ಮಾಡಿ ಪತ್ತೆ ಹಚ್ಚಿ ಅನುಭವಿ ಶಿಕ್ಷಕರಿಂದ ಈ ವಿಧ್ಯಾಥರ್ಿಗಳಿಗೆ ಬೋಧನಾ ವ್ಯೆವಸ್ಥೆ ಮಾಡಲಾಗುತ್ತಿದೆ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಸ್ಎಸ್ಎಲ್ಸಿ ವಿಧ್ಯಾಥರ್ಿಗಳಿಗೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಅನೇಕ ಶೈಕ್ಷಣಿಕ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನೀರು ನೀಡದವರ ಬಗ್ಗೆ ತಹಶೀಲ್ದಾರ್ಗೆ ಮಾಹಿತಿ ನೀಡಿ: 

ಸದ್ಯದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ನೀರು ಪೋಲಾಗದಂತೆ ಎಚ್ಚರದಿಂದಿರಿ ಎಂದು ಪಿಡಿಒಗಳಿಗೆ ಇಒ ತಾಕೀತು ನೀಡಿದರು, ಗ್ರಾಮಗಳಲ್ಲಿ ಕುಡಿಯುವ ನೀರನ್ನು ಬೋರ್ ವೆಲ್ ಗಳಿಂದ ಶೇಖರಿಸುತ್ತಿದ್ದು ಇನ್ನು ಹೆಚ್ಚಿನ ನೀರಿನ ಅವಶ್ಯಕತೆ ಇದ್ದರೆ ವಿವರಣೆಯನ್ನು ನೀಡಿ ಎಂದು ತಿಳಿಸಿದರು 

ಖಾಸಗಿ ಆಸ್ಪತ್ರೆಗಳಿಗೆ ಗಭರ್ಿಣಿಯರಿಗೆ ರವಾನಿಸದಂತೆ ಎಚ್ಚರಿಕೆ: 

ಗಭರ್ಿಣಿ ಸ್ರ್ತೀಯರಿಗೆ ರಕ್ತ ಪರೀಕ್ಷಾ ಕೇಂದ್ರಗಳನ್ನು ಸ್ವಗ್ರಾಮಗಳಲ್ಲೇ ಸ್ಥಾಪಿಸಬೇಕು ಗಭರ್ಿಣಿಯರಿಗೆ ಪ್ರಯಾಣದ ಭಾರವನ್ನು ತಗ್ಗಿಸುವಂತೆ ಅಧ್ಯಕ್ಷೆ ತಿಳಿಸಿದರು 

ತಾ.ಪಂ.ಉಪಾಧ್ಯಕ್ಷೆ ಕೋಚಾಲಿ ಸುಶೀಲಾ ಮಂಜುನಾಥ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾ.ಪಂ ಪಿಡಿಒಗಳು ತಾ.ಪಂ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.