ವಿಲೀನಗೊಳಿಸಿರುವ ಹೇಳಿಕೆ ನೀಡುರುವುದು ಅಕ್ಷಮ್ಯ ಅಪರಾಧ: ಮಹೇಶಗೌಡ್ರು

ಲೋಕದರ್ಶನ ವರದಿ

ರಾಣೇಬೆನ್ನೂರು: ಈ ಕ್ಷೇತ್ರದ ಕೆಪಿಜೆಪಿ ಶಾಸಕ ಹಾಗೂ ರಾಜ್ಯದ ಮಂತ್ರಿ ಆರ್.ಶಂಕರ್ ಅವರು ಸ್ವಾರ್ಥ ರಾಜಕಾರಣಕ್ಕಾಗಿ ಹಾಗೂ ಹಣಕ್ಕಾಗಿ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಶೀಘ್ರವೇ ಇವರ ಮೇಲೆ ಪಕ್ಷವು ಕಾನೂನಾತ್ಮಕವಾದ ಕ್ರಮ ಕೈಗೊಳ್ಳಲಿದೆ ಎಂದು ಕೆಪಿಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ರಾಷ್ಟ್ರಾಧ್ಯಕ್ಷ ಡಿ.ಮಹೇಶಗೌಡ್ರು ಹೇಳಿದರು.

  ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೆಪಿಜೆಪಿಯ ಆಟೋ ಚಿಹ್ನೆದಡಿ ಚುನಾಯಿತಗೊಂಡಿರುವ ರಾಜ್ಯದ ಏಕೈಕ ಶಾಸಕ ಶಂಕರ್ ಅವರಾಗಿದ್ದಾರೆ. ಆದರೆ ಅವರು ಅಧಿಕಾರಕ್ಕಾಗಿ ಪಕ್ಷದ ಹಿರಿಯರನ್ನಾಗಲಿ, ಮುಖಂಡರನ್ನಾಗಲಿ ಯಾರನ್ನೂ ಕೇಳದೆ ಹಾಗೂ ಅನುಮತಿ ಪಡೆಯದೆ ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿರುವುದು ಕಾನೂನು ಬಾಹಿರವಾಗಿದೆ ಎಂದರು.

  ಆಡಳಿತ ಮೈತ್ರಿ ಸರಕಾರಕ್ಕೆ ಬಾಹ್ಯ ಇಲ್ಲವೇ ಆಂತರಿಕವಾಗಿ ಬೆಂಬಲ ಕೊಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಆದರೆ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಲು ಶಂಕರ್ ಅವರಿಗೆ ಅಧಿಕಾರ, ಅನುಮತಿ ನೀಡಿದವರಾರು? ಈ ರೀತಿಯಾಗಿ ಆ ಪಕ್ಷದ ರಾಷ್ಟ್ರಾಧ್ಯಕ್ಷರಾಗಲಿ ಇಲ್ಲವೇ ಕಾರ್ಯಕಾರಿ ಸಮಿತಿಯಲ್ಲಿ ಏನೂ ತೀಮರ್ಾನವಾಗದೆ ಇಂತಹ ಅಪರಾಧ ಮಾಡಿರುವುದು ಶಂಕರ್ ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.

  ಕೆಪಿಜೆಪಿ ಪಕ್ಷದಿಂದ ಅಧಿಕೃತವಾಗಿ ಭಿ ಫಾರ್ಮ ಪಡೆದು ಶಾಸಕರಾಗಿದ್ದರೂ ಸಹ ಆರ್. ಶಂಕರ್ ಅವರು ಪಕ್ಷಕ್ಕೆ ಮತ್ತು ಮಾಧ್ಯಮಗಳಲ್ಲಿ ಹಾಗೂ ಖಾಸಗಿ ಸಭೆ ಸಮಾರಂಭಗಳಲ್ಲಿ ಪಕ್ಷದ ಹೆಸರು ಹೇಳದೆ ಪಕ್ಷೇತರ ಶಾಸಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೂ ಸಹ ನಮ್ಮ ಗಮನಕ್ಕೆ ಬಂದಿದೆ. ಆರಂಭಕ್ಕೆ ಪಕ್ಷಕ್ಕೆ ಸೇರಿ ರಾಜ್ಯಾಧ್ಯಕ್ಷನಾಗಿ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುವುದಾಗಿ ಹೇಳಿ ಪಕ್ಷದ ಏಳ್ಗೆಗೆ ಆಗ 5 ಲಕ್ಷ ರೂ ಹಣವನ್ನು ಚೆಕ್ ಮೂಲಕ ನೀಡಿದ್ದರು ಎಂದು ಹೇಳಿದರು.

   ಈ ಚೆಕ್ ನೀಡಿದ್ದನ್ನು ಹೊರತು ಪಡಿಸಿದರೆ ನಮಗಾಗಲೆ ಪಕ್ಷಕ್ಕಾಗಲಿ ಶಂಕರ್ ಅವರು ಏನೂ ಮಾಡಿಲ್ಲ. ಹಾಗೂ ನಮ್ಮ ಸಂರ್ಪಕಕ್ಕೂಸಹ ಬರಲಿಲ್ಲ. ಜೊತೆಗೆ ಈ ಕ್ಷೇತ್ರದ ಅಭಿವೃದ್ಧಿಯಾಗಲಿ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂಧಿಸಲಿಲ್ಲ ಎಂಬ ಮಾತುಗಳೂ ಸಹ ಕ್ಷೇತ್ರದಾದ್ಯಂತ ಜನರಿಂದ ದೂರುಗಳು ಕೇಳಿ ಬರುತ್ತಿವೆ ಎಂದಾದ ಮೇಲೆ ನಿಜಕ್ಕೂ ಶಂಕರ್ ಅವರೊಬ್ಬ ಅವಕಾಶವಾದಿ ಎಂದು ದೂರಿದರು.

   ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಸಹ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿಕೊಳ್ಳಲು ಅವರೇಕೆ ಮುಂದಾದರು ಎಂಬುದು ಯಕ್ಷಪ್ರಶ್ನೆ ಯಾಗಿದೆ. ಸ್ವಾರ್ಥ ಹಾಗೂ ಅವಕಾಶವಾದಿಯಾಗಿರುವ ಆರ್.ಶಂಕರ್ ಅವರ ಮೇಲೆ ಕೆಪಿಜೆಪಿ ರಾಷ್ಟ್ರಾಧ್ಯಕ್ಷರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.

  ಇಂತಹ ಸ್ವಾರ್ಥ ರಾಜಕಾರಣಿಯಾಗಿ ಅಧಿಕಾರಕ್ಕಾಗಿ ಒಂದು ಪಕ್ಷವನ್ನು ಇನ್ನೊಂದು ಪಕ್ಷದಲ್ಲಿ ವಿಲೀನಗೊಳಿಸಿರುವುದು ಪಕ್ಷದ ಕಾರ್ಯಕರ್ತರಿಗೆ ಬಹಳಷ್ಟು ನೋವುಂಟು ಮಾಡಿದೆ. ಈ ಬಗ್ಗೆ ಸಚಿವರನ್ನು ಬೇಟಿಯಗಲು ಮಾಡಿದ ಪ್ರಯತ್ನ ವಿಫಲವಾಯಿತು. ನಮ್ಮನ್ನು ನಿರ್ಲಕ್ಷ್ಯ ಭಾವದಿಂದ ಕಾಣುತ್ತಿದ್ದಾರೆ ಎಂದು ಮಹೇಶಗೌಡ್ರ ಆರೋಪಿಸಿದರು. ಎನ್.ಆರ್.ನಾಗರಾಜ, ಇಶರ್ಾದ್ ಅಹ್ಮದ್, ಮಹಮ್ಮದ ಶಾ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.