ಮಾಂಜರಿ 17: ತಂದೆ, ತಾಯಿಗಳು ಶ್ರಮವಹಿಸಿ, ದುಡಿಯುತ್ತಾ ನಿಮ್ಮನ್ನು ಶಾಲೆಗೆ ಕಳುಹಿಸಿರುತ್ತಾರೆ. ಹೀಗಾಗಿ, ಅವರ ಕನಸು ನನಸು ಮಾಡುವಂತೆ ಅಂಕಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಹಾಗೂ ಮಾಜಿ ತಾಲೂಕಾ ಪಂಚಾಯಿತಿಯ ಸದಸ್ಯರಾದ ಸುರೇಶ್ ಪಾಟೀಲ್ ಹೇಳಿದ್ದಾರೆ.
ಅವರು ಇಂದು ಸಮೀಪದ ಅಂಕಲಿ ಗ್ರಾಮದ ಸರ್ಜರಾವ ನಗರದಲ್ಲಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೆಳಕು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಅಂಕಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಬಾಳಪ್ಪ ಉಮರಾನೆ ವಹಿಸಿದ್ದರು. ಅತಿಥಿಯಾಗಿ ಸಂಜಯ್ ಚೌಧೂರಿ ನಾಗೇಶ್ ಧರನಾಯಕ ತುಕಾರಾಂ ಪಾಟೀಲ್ ಬಾಳ ಸಾಹೇಬ್ ತಳವಾರ್ ಹಾಜರಿದ್ದರು.
ಈ ತುಕಾರಾಮ ಪಾಟೀಲ್ ಮಾತನಾಡಿ ತಂದೆ-ತಾಯಂದಿರು ಕಷ್ಟ ಪಟ್ಟು ದುಡಿದು ನಿಮ್ಮನ್ನು ಓದಲು ಶಾಲೆಗೆ ಕಳಿಸಿರುತ್ತಾರೆ. ಅವರಿಗೆ ನಿರಾಸೆ ಮಾಡದಂತೆ ಒಳ್ಳೆಯ ರೀತಿಯಿಂದ ವಿದ್ಯಾಭ್ಯಾಸ ಮಾಡಿ ಅವರ ಕಷ್ಟಕ್ಕೆ ಪ್ರತಿಫಲ ಒದಗಿಸುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಂದೆ-ತಾಯಂದಿರು ಕಷ್ಟ ಪಟ್ಟು ದುಡಿದು ನಿಮ್ಮನ್ನು ಓದಲು ಕಾಲೇಜಿಗೆ ಕಳಿಸಿರುತ್ತಾರೆ. ಅವರಿಗೆ ನಿರಾಸೆ ಮಾಡದಂತೆ ಒಳ್ಳೆಯ ರೀತಿಯಿಂದ ವಿದ್ಯಾಭ್ಯಾಸ ಮಾಡಿ ಅವರ ಕಷ್ಟಕ್ಕೆ ಪ್ರತಿಫಲ ಒದಗಿಸುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಸದಸ್ಯರಾದ ಬಾಳಪ್ಪಾ ಉಮರಾಣಿ ಮಾತನಾಡಿ ಶಾಲಾ ಮಕ್ಕಳಿಗೆ ಸರ್ಕಾರವು ಎಲ್ಲ ಹಂತದ ಮೂಲಭೂತ ಸೌಕರ್ಯಗಳನ್ನು ಕೊಡುಲಾಗುವದು ಕಾರಣ ವಿದ್ಯಾರ್ಥಿಗಳು ತಾವು ನಿರಂತರ ಕಲಿಕೆಯಿಂದ ಶ್ರಮ ಪಟ್ಟಾಗ ಮಾತ್ರ ಡಾ.ಎ.ಪಿ.ಜಿ. ಅಬ್ದುಲಕಲಾಮರಂತೆ ಆಗಿ ಈ ನಾಡಿಗೆ ಹೆಸರು ತರುವ ಮೂಲಕ ಕಲಿತ ಶಾಲೆ ಕಲಿಸಿದ ಗುರುಗಳ ಹಾಗು ಜನ್ಮ ನೀಡಿದ ತಂದೆ-ತಾಯಿಗೆ ಕೀರ್ತಿ ತರಬೇಕೆಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಎ.ಐ.ನದಾಫ. ಎಸ್. ಜಿ.ಮಾಂಗನೂರೆ. ಆರ್. ಪಿ.ದೊಡಮನಿ. ವಿದ್ಯಾ ಕಮತೆ. ಎಸ್ . ಎ.ಖಡ್ಡ. ತಾಲೂಕಾ ಅಧ್ಯಕ್ಷ ಎನ್.ಜಿ.ಪಾಟೀಲ .ಹಾಜರಿದ್ದರು. ಎಸ್. ಕೆ. ವಡಗೋಲೆ ಸ್ವಾಗತಿಸಿದರು. ಶೀತಲ ನವನೆ. ನಿರೂಪಿಸಿದರು. ಎಸ್.ಬಿ.ಖೊತ ವಂದಿಸಿದರು.