ಸಾರ್ವಜನಿಕರಿಗೆ ಆಯುವರ್ೆದ ಬಗ್ಗೆ ಅರಿವು ಮೂಡಿಸಿ: ಅಭಯ ಪಾಟೀಲ

ಬೆಳಗಾವಿ: 05 : ಆಯುವರ್ೇದವು ಪ್ರಾಚೀನ ಪದ್ದತಿಯಾಗಿದ್ದು, ಆಯುವರ್ೇದದ ಬಗ್ಗೆ ಹಾಗೂ ಈ ಪದ್ದತಿಯಲ್ಲಿ ಬರತಕ್ಕತಂಹ ಉಪಚಾರಗಳ ಬಗ್ಗೆ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಲು ಇಲಾಖೆಯು ಹಲವಾರು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರ ಶಾಸಕರಾದ ಅಭಯ ಪಾಟೀಲ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಬೆಳಗಾವಿ ಟಿಳಕವಾಡಿ, ಮಂಡೋಳಿ ರಸ್ತೆ, ಲಸಿಕಾ ಸಂಸ್ಥೆ ಆವರಣದಲ್ಲಿರುವ ಜಿಲ್ಲಾ ಆಯುಷ್ ಅಧಿಕಾರಿಗಳ ಕಾಯರ್ಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, 3ನೇ ರಾಷ್ಟ್ರೀಯ ಆಯುವರ್ೇದ ದಿನಾಚರಣೆ ಹಾಗೂ ಆಯುವರ್ೇದ ಔಷಧಿ ಸಸ್ಯಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. 

ಇನ್ನೊರ್ವ ಅತಿಥಿಗಳಾದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ ಆರ್ ಅವರು ಮಾತನಾಡಿ, ಆಯುವರ್ೇದ ವೈದ್ಯ ಪದ್ಧತಿಯು ಸಾವಿರಾರು ವರ್ಷಗಳ ಹಳೇಯ ಪದ್ದತಿಯಾಗಿದು, ನಮ್ಮಲ್ಲಿರುವ ಔಷಧಿ ಸಸ್ಯಗಳಿಂದಲೇ ಎಲ್ಲಾ ಖಾಯಿಲೆಗಳನ್ನು ವಾಸಿ ಮಾಡುವಂತಹ ಪದ್ದತಿಯಾಗಿರುತ್ತದೆ. ಆದ್ದರಿಂದ ಅಂತಹ ಔಷಧಿ ಸಸ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಇಲಾಖೆಯು ಕ್ರಮವಹಿಸಲು ಹಾಗೂ ಇಲಾಖೆಯಿಂದ ಹೆಚ್ಚಿನ ಐಇಸಿ ಕಾರ್ಯಕ್ರಮಗಳನ್ನು ಮಾಡಲು ಮತ್ತು ಇವತ್ತಿನ ಉಚಿತ ಆರೋಗ್ಯ ಶಿಬಿರದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು. 

ಡಾ|| ಹೇಮಲತಾ ವೈದ್ಯಾಧಿಕಾರಿಗಳು ಸಾರ್ವಜನಿಕ ಅರೋಗ್ಯದಲ್ಲಿ ಆಯುವರ್ೇದದ ಪಾತ್ರದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ|| ಸುರೇಶ ದೊಡವಾಡ, ಡಾ|| ಶ್ರೀಕಾಂತ ಸುಣದೋಳಿ, ಡಾ|| ಗಿರೀಶ್, ಡಾ|| ಸೈಯದ್, ಇವರು ಆಯುವರ್ೇದ ದಿನಾಚರಣೆಯ ಕುರಿತು ಆಯುವರ್ೇದ ಬಗ್ಗೆ ಚಚರ್ೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆಯವರು ಮತ್ತು ಸಾರ್ವಜನಿಕರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಡಾ|| ಗೀರೀಶ್ ಪಶುಪತಿಮಠ, ಡಾ|| ಗೀರೀಶ್ ಹೊಳೆಣ್ಣವರ, ಡಾ|| ಕುಬೇರ ನಾಯಿಕ ಕಾರ್ಯಕ್ರಮವನ್ನು ನಿರೂಪಣೆ, ಸ್ವಾಗತ ಹಾಗೂ ವಂದಿಸಿದರು.