ಲೋಕದರ್ಶನ ವರದಿ
ಯಲಬುಗರ್ಾ 21: ಹುಟ್ಟಿದ ಮನುಷ್ಯ ಮುಂದೊಂದು ದಿನ ಸಾಯಲೇಬೇಕು ಆಗ ನಮ್ಮಲ್ಲಿರುವದನ್ನು ನಾವು ಏನನ್ನು ಹೊಯ್ಯುವದಿಲ್ಲಾ ಆದ್ದರಿಂದ ಮನುಷ್ಯ ದಾನ ಮಾಡುವ ಗುಣಗಳನ್ನ ಬೆಳೆಸಿಕೊಳ್ಳಬೇಕು ಎಂದು ಪಪಂ ಸದಸ್ಯ ರೀಯಾಜ್ ಮೊಹಮ್ಮದ್ ಖಾಜಿ ಹೇಳಿದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಅವರು ಮಾತನಾಡಿದರು.
ಧಾನ ಧರ್ಮದ ಬಗ್ಗೆ ಪ್ರವಾದಿಗಳು ಸಾಕಷ್ಟು ಮಾಹಿತಿಗಳನ್ನ ನಮಗೆ ತಿಳಿಸಿಕೊಟ್ಟಿದ್ದಾರೆ ಅದರಂತೆ ನಾವು ನಡೆಯಬೇಕಿದೆ ದಾನ ಮಾಡುವದರಲ್ಲಿ ಸಿಗುವ ಸುಖ ಮತ್ತೆಲ್ಲೂ ಸಿಗುವದಿಲ್ಲಾ ಯಾಕೆಂದರೆ ಜಗತ್ತಿನಲ್ಲಿ ಎಲ್ಲರು ಎಲ್ಲವನ್ನು ಪಡೆದುಕೊಂಡು ಬಂದಿರುವದಿಲ್ಲಾ ಬಡಜನತೆಗೆ ನಮಗೆ ಸಾದ್ಯವಾದಷ್ಟು ಸಹಾಯ ಮಾಡಬೇಕು ಅಂದಾಗ ನಮ್ಮ ಜೀವನ ಸಾರ್ಥಕತೆ ಕಾಣುತ್ತದೆ ಎಂದರು.
ಪಪಂ ಸದಸ್ಯ ಅಶೋಕ ಅರಕೇರಿ, ಮುಖಂಡರಾದ,ಶ್ಯಾಮೀದಸಾಬ ಆನೆಗುಂದಿ, ಶರೀಪ್ ಕೊತ್ವಾಲ್, ಮತರ್ುಜಸಾಬ ಬೂದಿ, ಸಲೀಂ ನಿಲಗಾರ, ರೇಹಮಾನ್ ರೆವಡಿಹಾಳ, ಮೈಬೂ ಕೊಪ್ಪಳ, ರಾಜಸಾಬ ದಫೆದಾರ, ಜಿಂದಗಿಸಾಬ ಮಣಿಗಾರ, ಇಮಾಮಸಾಬ ಕೊತ್ವಾಲ್ ಸೇರಿದಂತೆ ಇನ್ನೀತರರು ಹಾಜರಿದ್ದರು.