ಲೋಕದರ್ಶನ ವರದಿ
ಗದಗ 01: ನಮ್ಮ ಶಾಲೆಯಲ್ಲಿ ಸನ್ 2018-19ನೇ ಶೈಷಣಿಕ ವರ್ಷದ ಪಾಲಕರ ಸಭೆಯನ್ನು ನಡೆಸಲಾಯಿತು. ಇದರ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಾನ್ಯಶ್ರೀ ವಾಸಣ್ಣ ಕೆ ಕುರಡಗಿಯವರು ವಹಿಸಿ ಎಲ್ಲಾ ಪಾಲಕರಿಗೆ ತಮ್ಮ-ತಮ್ಮ ಮಕ್ಕಳ ಕಲಿಕೆಯ ಪ್ರಕ್ರಿಯೆಯಲ್ಲಿ ಮುತವಜರ್ಿ ವಹಿಸಿ ಇಂದಿನ ಸ್ಪಧರ್ಾತ್ಮಾಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಲು ಪಾಲಕರಿಗೆ ಸಲಹೆ ನೀಡಿದರು. ಜೊತೆಗೆ ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಪ್ರಯತ್ನಿಸಿರಿ ಇಂದಿನ ಮಕ್ಕಳ ನಾಳಿನ ಪ್ರಜೆಗಳು ಆದ್ದರಿಂದ ಪಾಠಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಕಾಪಾಡಲು ಪಾಲಕರು ಮತ್ತು ಶಿಕ್ಷಕರು ಮಕ್ಕಳುನ್ನು ಪ್ರೆರೇಪಿಸಿರಿ ಎಂದು ಹೇಳಿದರು.
ಶಿಕ್ಷಕರು ಪಾಲಕರ ಸಹಯೋಗದೊಂದಿಗೆ ಉತ್ತಮ ಯೋಜನೆಯನ್ನು ತಯಾರಿಸಿ ಎಲ್ಲಾ ಮಕ್ಕಳು ಪಾಸಾಗುವಂತೆ ಹಾಗೂ ಶಾಲೆಗೆ ಮತ್ತು ತಾಯಿಗೆ ಕೀತರ್ಿ ತರುವಂತೆ ಮಾಡಿರಿ ಶಿಕ್ಷರಿಗೆ ಸೂಚಿಸಿದರು ನಂತರ ಗುರುಮಾತೆಯರಾದ ಎಸ್ ವ್ಹಿ ಕುರಡಗಿಯವರು ಪಾಲಕರ ಕರ್ತವ್ಯವನ್ನು ಎಳೆಏಳೆಯಾಗಿ ವಿವರಿಸಿ ಮಕ್ಕಳನ್ನು ದಿನಾಲೂ ತಪ್ಪದೇ ಶಾಲೆಗೆ ಕಳುಹಿಸಿ ಶಾಲೆಯಲ್ಲಿ ಹೇಳಿದ ವಿಷಯಗಳ ಬಗ್ಗೆ ಮನೆಯಲ್ಲಿ ಮಕ್ಕಳೊಂದಿಗೆ ಚಚರ್ಿಸಿ ಹಾಗೂ ಹೆಚ್ಚು ಹೆಚ್ಚು ಓದಲು ಬರೆಯಲು ಅವರಿಗೆ ಮನೆಯಲ್ಲಿ ಅವಕಾಶ ಮಾಡಿಕೊಡಿ ಮಕ್ಕಳು ಇನ್ನೂ ಹೆಚ್ಚು ಬುದ್ದಿವಂತರಾಗಲು ನಾವು ನೀವು ಪ್ರಯತ್ನಿಸೋಣ ಎಂದು ಹೇಳಿದರು.
ಅದೇ ರೀತಿ ಡಿ ಕೆ ಗುಡ್ಲಾನೂರ ಶಿಕ್ಷಕರು ವಿಶೇಷವಾಗಿ ಗಂಡು ಮಕ್ಕಳ ಪಾಲಕರಿಗೆ ಮಕ್ಕಳು ಸಮಯವನ್ನು ಹೆಚ್ಚು ವ್ಯಯ ಮಾಡಿಸದಂತೆ ಮತ್ತು ಇಂದಿನ ಪರೀಕ್ಷಾ ಪದ್ದತಿಯ ಬಗ್ಗೆ ವಿವರಿಸಿದರು ಇನ್ನೋರ್ವ ಶಿಕ್ಷಕರಾದ ಶಿವರಾಜ ಪಾಟೀಲರು ಯಾವುದೇ ಮಕ್ಕಳು ದಡ್ಡರಲ್ಲ ಅವರ ಓದಿನ ಮೇಲೆ ಅದು ಅವಲಂಬಿತವಾಗಿರುತ್ತದೆ. ಆದ್ದರಿಂದ ಮಕ್ಕಳು ಹೆಚ್ಚು ಜಾಣರಾಗಲು ಪ್ರಯತ್ನಿಸೋಣ ಎಂದರು ಕೆ ಎಚ್ ಕಲಾರಿಯವರು ತಮ್ಮ ಮಕ್ಕಳಿಗೆ ಎಲ್ಲಾ ವಿಷಯಗಳನ್ನು ಸಮಾನವಾದಿ ಓದುವಂತೆ ಮತ್ತು ಓದಿದ್ದನ್ನು ಬರೆಯುವಂತೆ ಬರೆದಿದ್ದನ್ನು ಪಾಲರು ಸಮಯಾವಕಾಶವನ್ನು ಮಾಡಿಕೊಂಡು ನೋಡುವಂತೆ ಹೇಳಿದರು.
ಎಸ್ ಎಸ್ ಗುಗ್ಗರಿಯವರು ಕಾರ್ಯಕ್ರಮ ನಡೆಸಿಕೊಟ್ಟು ಕೊನೆಯಲ್ಲಿ ವಂದಿಸಿದರು. ವಾಯ್ ಎಸ್ ಕರೆಮ್ಮನವರ, ಹಾಗೂ ವಾಯ್ ಎಮ್ ಹುಂಬ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು ಸಭೆಯ ನಂತರ ಮಕ್ಕಳ ಕಲಿಕಾ ನೂನ್ಯತೆಗಳನ್ನು ಪಾಲಕರೊಂದಿಗೆ ಚಚರ್ಿಸಿ ಎಲ್ಲಾ ಶಿಕ್ಷಕರು ಪರಿಹಾರ ಕಂಡುಕೊಂಡರು