ಮಾಂಜರಿ 04: ಸಹಕಾರಿ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿರುವ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿಕೊಂಡು ಆಥರ್ಿಕ ಉಣತಿಯನ್ನು ಸಾಧಿಸಬೇಕು ಎಂದು ಚಿಕ್ಕೋಡಿಯ ಸಂಪಾದನ ಮಠದ ಸಂಪಾದನ ಸ್ವಾಮೀಜಿಗಳು ಹೇಳಿದರು.
ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಇಂದು ಜನವಾಡ ಗ್ರಾಮದ ಬಸವ ಕೊ-ಆಪ್ ಕ್ರೆಡಿಟ್ ಸೊಸೈಟಿ 5ನೇ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಈ ಸಮಾರಂಭಕ್ಕೆ ಉದ್ಘಾಟಕರಾಗಿ ಬೆಳಗಾವಿ ಜಿಲ್ಲಾ ಮಧ್ಯವತರ್ಿ ಸಹಕಾರಿ ಬ್ಯಾಂಕಿನ ಮಾಜಿ ನಿದರ್ೇಶಕ ಹಾಗೂ ಕನರ್ಾಟಕ ಸ್ಟೇಟ್ ಅರ್ಬನ್ ಬ್ಯಾಂಕ್ ನಿದರ್ೇಶಕರಾದ ಹಿರಿಯ ನಾಗರಿಕ ಡಿ ಟಿ ಪಾಟೀಲ್ ಬಸವಜ್ಯೋತಿ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ್ ಜೊಲ್ಲೆ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕರಾದ ರಾಮಗೊಂಡ ಪಾಟೀಲ್ ಹಾಜರಿದ್ದರು.
ಬಸವ ಪ್ರಸಾದ್ ಜೊಲೆ ಮಾತನಾಡಿ ಸಹಕಾರಿ ರಂಗದಲ್ಲಿ ಸಂಸ್ಥೆಗಳು ಸ್ಥಾಪನೆ ಮಾಡುವುದು ಸುಲಭವಲ್ಲ ಅವು ಮುಂದುವರಿಸುವ ಕಾರ್ಯ ಮಹತ್ವವಾಗಿದೆ ಸಹಕಾರ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ನಿದರ್ೇಶಕರು ಹಾಗೂ ಕಾಮರ್ಿಕ ವರ್ಗದವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಸಂಸ್ಥೆಯ ಆಥರ್ಿಕ ಉನ್ನತಿಯನ್ನು ಹೊಂದಲು ಸಾಧ್ಯ ಎಂದು ಅವರು ಹೇಳಿದರು.
ಸಹಕಾರಿ ಧುರೀಣ ಜಿಟಿ ಪಾಟೀಲ್ ಮಾತನಾಡಿ ಬೆಳಗಾವಿ ಜಿಲ್ಲೆ ಸಕರ್ಾರಿ ರಂಗದಲ್ಲಿ ರಾಜ್ಯದಲ್ಲಿ ಉನ್ನತ ಸ್ಥಾನ ಹೊಂದಿದೆ ಗಡಿಪ್ರದೇಶದಲ್ಲಿ ಸಹಕಾರಿ ರಂಗದಲ್ಲಿ ಅನೇಕ ಸಂಸ್ಥೆಗಳು ಕಾರ್ಯ ಮಾಡುತ್ತಿದ್ದು ಅವುಗಳು ಸದಸ್ಯರ ಹಿತಕಾಪಾಡುವ ಜೊತೆಗೆ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸುವ ಕಾರ್ಯ ಮಾಡಬೇಕೆಂದು ಅವರು ಹೇಳಿದರು.
ಈ ಕಾರ್ಯಕ್ರಮಕ್ಕೆ ಸಂಸ್ಥೆಯ ನಿದರ್ೇಶಕರಾದ ಬಾಬು ಘಾಟಿಗೆ ಶಿವನಗೌಡ ಪಾಟೀಲ ರಾಮಚಂದ್ರ ಮೋಕಾಶಿ ಸುಭಾಶ ಪಾಟೀಲ್ ಮಹಾಲಿಂಗ ಸೂರ್ಯವಂಶಿ ವಿಠಲ ಸದಲಗೆ ನರಸು ಕೋತ್ ಜೀವನ್ ಮಡಿವಾಳ ನಾರಾಯಣ ಪೂಜಾರಿ ಮಲ್ಲಪ್ಪ ದಂಗೆ ಆನಂದ ಮೇತ್ರಿ ಹಾಗೂ ಕೇರೂರ ಗ್ರಾಮದ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.