ಎನ್ಹೆಚ್‌ಎಂ ಗುತ್ತಿಗೆ ನೌಕರರನ್ನು ಖಾಯಂಗೊಳಿಸಿ: ಶಾಸಕ ರಾಜುಗೌಡ ಸದನದಲ್ಲಿ ಒತ್ತಾಯ

Make NHM contract employees permanent: MLA Rajugowda demands

ದೇವರಹಿಪ್ಪರಗಿ 21: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚಿನ ಗುತ್ತಿಗೆ (ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ) ನೌಕರರು ಕಳೆದ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಮಾನವೀಯ ಮೌಲ್ಯದ ಮೇಲೆ ಖಾಯಂ ಗೊಳಿಸುವಂತೆ  ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಸದನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು. 

ಗುರುವಾರದಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ರಾತ್ರಿ 11 ಗಂಟೆಯ ಸಮಯ ಶೂನ್ಯ ವೇಳೆಯಲ್ಲಿ ಪ್ರಶ್ನೆ ಸಂಖ್ಯೆ-621, ಎನ್ ಹೆಚ್ ಎಂ ಗುತ್ತಿಗೆ ನೌಕರರ ಪರವಾಗಿ ಮಾನವೀಯ ದೃಷ್ಟಿಯಿಂದ ನೌಕರರನ್ನು ಖಾಯಂಗೊಳಿಸಿ, ಇಲ್ಲವೇ ಅವರ ವೇತನ ಹೆಚ್ಚಿಸಿ ಎಂದು ಸರ್ಕಾರಕ್ಕೆ ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು. ಎರಡು ವರ್ಷದ ನಂತರ ಕಲಾಪದಲ್ಲಿ ಮಾತನಾಡಲು ಸಮಯ ಕೊಟ್ಟಿದ್ದಕ್ಕೆ ವಿಧಾನಸಭಾಧ್ಯಕ್ಷರಿಗೆ ಧನ್ಯವಾದಗಳು ತಿಳಿಸಿ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ.ಆರ್‌. ಪಾಟೀಲ ಅವರು ಸಮರ​‍್ಕ ಉತ್ತರ ನೀಡಿಲ್ಲ ರಾಜ್ಯದಲ್ಲಿ ಒಟ್ಟು-3751 ಲ್ಯಾಬ್ ಟೆಕ್ನಿಷಿಯನ್ ಗಳಿದ್ದು, ಅದರಲ್ಲಿ ಒಟ್ಟು-1383 ಜನ ಕೆಲಸ ನಿರ್ವಹಿಸುತ್ತಿದ್ದಾರೆ, 1431 ಹುದ್ದೆ ಖಾಲಿ ಇದ್ದು ಗುತ್ತಿಗೆ ಆಧಾರದ ಮೇಲೆ ಒಟ್ಟು-1381 ಜನ ಕೆಲಸ ಸುಮಾರು 15ರಿಂದ 25 ವರ್ಷದವರೆಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಹಲವಾರು ರಾಜ್ಯಗಳಲ್ಲಿ ಎನ್ ಹೆಚ್‌ಎಂ ನೌಕರರನ್ನು ಖಾಯಂಗೊಳಿಸಲಾಗಿದೆ. ಹಲವಾರು ವರ್ಷಗಳಿಂದ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು ಹಾಗೂ ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ ಬಾರಿ ಬೆಂಗಳೂರಿನಲ್ಲಿ ಖಾಯಂ ಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ನಮ್ಮ ಸರ್ಕಾರ ಬಂದರೆ ನಿಮ್ಮನ್ನು ಖಾಯಂ ಮಾಡುತ್ತೇವೆ ಎಂದು ಭರವಸೆ ನೀಡಿದ್ದೀರಿ. 

ಒಟ್ಟು 26ಸಾ.ಎಲ್ಲ ನೌಕರರು ವೈದ್ಯರ ಆದಿಯಾಗಿ ಹಲವಾರು ತಂತ್ರಜ್ಞರು ಈಗ ಅವರ ವಯಸ್ಸು 50 ಆಗಿದ್ದು, ಸುಮಾರು 15ರಿಂದ 25 ವರ್ಷದವರೆಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ಯಾರಂಟಿಗಳಲ್ಲೊಂದಾದ ನೌಕರರನ್ನು ಮಾನವೀಯ ದೃಷ್ಟಿಯಿಂದ ಖಾಯಂಗೊಳಿಸಲು ಸರ್ಕಾರಕ್ಕೆ ನೌಕರರ ಪರವಾಗಿ ಒತ್ತಾಯಿಸಿದರು. ಗುತ್ತಿಗೆ ನೌಕರರ ಸಮಸ್ಯೆಯನ್ನು ಸದನದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಎಲ್ಲ ಸದಸ್ಯರಿಂದ ಹಾಗೂ ರಾಜ್ಯ ಸಂಘಟನೆಯಿಂದ ಮೆಚ್ಚುಗೆಗೆ ಪಾತ್ರರಾದರು. 

ಹಲವಾರು ವರ್ಷಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ರಾಜ್ಯ ಸರಕಾರ ನಮ್ಮನ್ನು ಖಾಯಂ ಗೊಳಿಸುವಂತೆ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಸದನದಲ್ಲಿ ಸರ್ಕಾರದ ಗಮನ ಸೆಳೆಯುವ ಮೂಲಕ ನೌಕರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿದ್ದಕ್ಕೆ ಹಾಗೂ ಪ್ರತಿಭಟನೆ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಸರ್ಕಾರದ ಮೇಲೆ ಒತ್ತಡ ತರುವ ಭರವಸೆ ನೀಡಿದ್ದರು ಕೊಟ್ಟ ಮಾತಿನಂತೆ ನೋಡಿದ ಶಾಸಕರಿಗೆ ಎಲ್ಲಾ ನೊಂದ ನೌಕರರ ಹಾಗೂ ಸಂಘದ ಪರವಾಗಿ ಧನ್ಯವಾದಗಳು ತಿಳಿಸುತ್ತೇವೆ. ದೇಶದ ಹಲವಾರು ರಾಜ್ಯಗಳಲ್ಲಿ ಎನ್ ಹೆಚ್ ಎಂ ನೌಕರರನ್ನು ಖಾಯಂ ಗೊಳ್ಸಿದ್ದಾರೆ. ಅದೇ ರೀತಿ ಎಲ್ಲಾ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಸುಮಾರು 25 ವರ್ಷದಿಂದ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಜೋತೆ, ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿದ ಕೆಲಸ, ಈಗಲಾದರೂ ರಾಜ್ಯ ಸರ್ಕಾರ ನೌಕರರ ಪರವಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು.  

-ಶಾಂತು ಕುಂಬಾರ. 

ಲ್ಯಾಬ್ ಟೆಕ್ನಿಷಿಯನ್ ಎನ್ ಎಚ್ ಎಮ್ ನೌಕರ ಸಂಘದ ತಾಲೂಕ ಘಟಕದ ಅಧ್ಯಕ್ಷರು ಸಿಂದಗಿ.