ಬೆಳಗಾವಿ 22 :- ಸ್ಥಳೀಯ ಹಿಂಡಲಗಾ ರಸ್ತೆ ಜಯನಗರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ವತಿಯಿಂದ 11ನೇ ಮಹಾಶಿವರಾತ್ರಿ ವಾರ್ಷಿಕೋತ್ಸವ ಕಾರ್ಯಕ್ರಮ ಫೆಬ್ರುವರಿ 26 ಹಾಗೂ 27ರಂದು ನಡೆಯಲಿದೆ.
ದಿನಾಂಕ 26ರಂದು ಬೆಳಗ್ಗೆ 4 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ , ಮಲ್ಲಿಕಾರ್ಜುನ ದೇವರ ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ನಡೆಯುವುದು. ಸಂಜೆ 7 ಗಂಟೆಗೆ ದೇವರಿಗೆ ಮಹಾಮಂಗಳಾರತಿ ಜರುಗುವುದು . 7:30 ರಿಂದ ಶ್ರೀ ಅದೃಶ್ಯ ದೇವ ಭಜನಾ ಮಂಡಳಿ ಕಾದ್ರೊಳ್ಳಿ ಇವರಿಂದ ಶಿವ ಸ್ಮರಣೆ ಭಜನಾ ಕಾರ್ಯಕ್ರಮ ನಡೆಯುವುದು . ಇವರ ಸೇವೆಯನ್ನು ರವೀಂದ್ರ ಪಟ್ಟಣಶೆಟ್ಟಿ, ಬಸವರಾಜ ಜವಳಿ ಇವರು ನಿರ್ವಹಿಸುವರು. ರಾತ್ರಿ 9.30 ಕ್ಕೆ ಜಯನಗರದ ಶ್ರೀ ಸಮೃದ್ಧ ಅಂಗವಿಕಲರ ಸಂಸ್ಥೆಯಿಂದ ರಸಮಂಜರಿ ಕಾರ್ಯಕ್ರಮ ನಡೆಯುವುದು.
ದಿನಾಂಕ 27 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಗಂಧದ ಅಲಂಕಾರ ಪೂಜೆ , 8 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯುವುದು, ಡೊಳ್ಳಿನ ಸೇವೆಯನ್ನು ಬಿ. ವೈ. ಹನ್ನೂರ ನಿರ್ವಹಿಸುವರು. ಮಧ್ಯಾಹ್ನ 12 ರಿಂದ ಮಹಾಪ್ರಸಾದ ಜರುಗುವುದು .
ಈ ರೀತಿ ಎರಡು ದಿನಗಳ ಕಾರ್ಯಕ್ರಮಗಳಿಗೆ ಸರ್ವರೂ ಭಾಗವಹಿಸಿ ಶೋಭೆ ತರಬೇಕೆಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಿ .ಎಂ. ಹೊಸಪೇಟ, ಕಾರ್ಯದರ್ಶಿ ಬಸವರಾಜ ಜವಳಿ ಇವರು ಕೋರಿದ್ದಾರೆ.