ಲೋಕದರ್ಶನವರದಿ
ಮುಧೋಳ೨೧ಮಹಾರಾಣಾ ಪ್ರತಾಪಸಿಂಹ ರಾಜಭೋಗವನ್ನು ಅನುಭವಿಸಲಿಲ್ಲ. ತನ್ನದಲ್ಲ ನೆಲ ಸಂಪತ್ತಿಗೆ ಆಸೆ ಪಡಲಿಲ್ಲ ತನ್ನ ಪರಕ್ರಮದಿಂದ ವೈರಿಗಳಿಗೆ ಸಿಂಹಸ್ವಪ್ನನಾಗಿ ತನ್ನ ವೀರತ್ವದಿಂದ ಇತಿಹಾಸದಲ್ಲಿ ಅಜರಾಮರನಾಗಿದ್ದಾನೆ. ಹಿಂದುಗಳ ಮಹಾಪುರುಷನಾಗಿ ನೆಲೆನಿಂತಿದ್ದಾನೆ ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.
ಅವರು ರಜಪೂತ ಸಮಾಜ ಭಾನುವಾರ ಸಂಜೆ ನಗರದ ಶಿವಸೇನಾ ವೃತ್ತದಲ್ಲಿ ಆಯೋಜಿಸಿದ ಮಹಾರಾಣಾ ಪ್ರತಾಪಸಿಂಹ ರ 479 ಜಯಂತಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿ ಮಹಾರಾಣಾ ಪ್ರತಾಪಸಿಂಹ ಮೊಗಲರು ಸಾಕಷ್ಟು ಕಿರುಕಳ ತೊಂದರೆ ಕೊಟ್ಟು ಶರಣಾಗಲು ಕುತಂತ್ರ ನಡೆಸಿದರೂ ಅವರಿಗೆ ಶರಣಾಗದೆ ನಮ್ಮತನ ಉಳಿಸಿಕೊಂಡವರು.
ರಾಣಿ ಪದ್ಮನಿದೇವಿ ಮಹಿಳಾ ಕುಲದ ಆದರ್ಶಮಾತೆ ಇಂದು ಹಿಂದು ಧರ್ಮ ಬಿಟ್ಟು ಅನ್ಯಧರ್ಮದವರೊಂದಿಗೆ ಚಲ್ಲಾಟವಾಡುವ ಯುವತಿಯರು ಭಾರತೀಯ ಚರಿತ್ರೆ ತಿಳಿದುಕೊಂಡರೆ ಇಂಥ ಕೆಟ್ಟ ಕೆಲಸಕ್ಕೆ ಕೈಹಾಕಲಾರರು. ಪಠ್ಯದಿಂದ ಭಾರತೀಯ ಇತಿಹಾಸ, ಪರಂಪರೆ ಸಂಸ್ಕೃತಿ ಅರಿಯಲು ಸಾಧ್ಯವಿಲ್ಲ ಅದಕ್ಕಾಗಿ ನಾವು ದೇಶಭಕ್ತರ ಚರಿತ್ರೆ ಇತಿಹಾಸ ತಿಳಿಸುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ಹೇಳಿದರು.
ಪತ್ರಕರ್ತ ಉದಯ ಕುಲಕರ್ಣಿ ಮಾತನಾಡಿ ರಾಷ್ಟ್ರಪುರುಷರನ್ನು ಒಂದು ಜಾತಿಗೆ ಸಿಮೀತಮಾಡಬಾರದು ಅವರು ಭಾರತೀಯರ ಆದರ್ಶ ಅಂತವರ ಜಯಂತಿಯನ್ನು ಸಮಸ್ತರು ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಮಾತನಾಡಿ ಮಹಾರಾಣಾ ಪ್ರತಾಪಸಿಂಹ ರ ವೃತ್ತದಲ್ಲಿ ಅವರ ಅಶ್ವಾರೂಢ ಮೂತರ್ಿ ಸ್ಥಾಪನೆಗೆ ಸರ್ವ ಜನಾಂಗದ ಸಮಿತಿ ರಚನೆಯಾಗಬೇಕು. ಇದಕ್ಕೆ ತಾವು ಮೊದಲಿಗನಾಗಿ ವಂತಿಗೆ ನೀಡುವುದಾಗಿ ಹೇಳಿದರು.
ಸಾನಿಧ್ಯವಹಿಸಿದ್ದ ವಿರಕ್ತಮಠ ಗವಿಮಠದ ನಿಜಗುಣಿದೇವರು, ಹೋರಾಟಗಾರರ ಸಿದ್ದು ಚಿಕದಾನಿ ಮಾತನಾಡಿದರು
ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಅಮರಸಿಂಗ್ ರಜಪೂತ, ಬಸವರಾಜ ಮಹಾಲಿಂಗೇಶ್ವರಮಠ, ಅಜಯಸಿಂಗ್ ರಜಪೂತ, ಬೆಂಗಳೂರಿನ ಸಮಜಾದ ಅಧ್ಯಕ್ಷ ಬಾಲಾಜಿಸಿಂಗ ರಜಪೂತ, ನಗರಸಭೆ ಸದಸ್ಯರಾದ ಗುರುಪಾದ ಕುಳಲಿ, ಲೀಲಾಬಾಯಿ ರಜಪೂತ, ನಿವೃತ್ ಉಪನ್ಯಾಸಕ ಜಾಲಮಸಿಂಗ ಪರದೇಶಿ, ಶ್ರೀದೇವಿ ರಜಪೂತ, ಶ್ರೀಶೈಲ ಹೂನ್ನೂರ ಮುಂತಾದವರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಹಾರಾಣಾ ಪ್ರತಾಪಸಿಂಹ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.