ಸಾವಿರ ದಿನದತ್ತ ಮಹಾಲಿಂಗಪುರ ತಾಲೂಕು ಹೋರಾಟ
ಮಹಾಲಿಂಗಪುರ 29: ಮಹಾಲಿಂಗಪುರ ಹೋಬಳಿ ಮಾಡಲು ಶಿಫಾರಸ್ಸಾಗಿದ್ದು, ಮುಧೋಳ ತಾಲೂಕಿನಲ್ಲಿಯೇ ಉಳಿಸಿ ಸದ್ಯದಲ್ಲಿ ಹೋಬಳಿ ಘೋಷಿಸುವ ನಿಟ್ಟಿನಲ್ಲಿ ಮುಧೋಳ ತಾಲೂಕಿನ 4 ಹಳ್ಳಿಗಳ ಠರಾವು ನೀಡಿದ್ದು, ಮುಧೋಳ ಶಾಸಕ ಮತ್ತು ಸಚಿವ ಆರ್.ಬಿ.ತಿಮ್ಮಾಪುರ ಸಹ ಒಪ್ಪಿ ಶಿಫಾರಸ್ಸು ಪತ್ರ ನೀಡಿದ್ದು ಕೆಲವೇ ದಿನಗಳಲ್ಲಿ ಆದೇಶ ಹೊರಬೀಳಲಿದ್ದು ಹೋಬಳಿ ಘೋಷಣೆಯ ನಂತರ ತಾಲೂಕು ಗೋಷಣೆಗೆ ಪ್ರಯತ್ನಿಸೋಣ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಜ.6ಕ್ಕೆ ಸಾವಿರ ದಿನ ಪೂರೈಸಲಿರುವ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ಯಾವುದೇ ಸರ್ಕಾರಗಳಿಂದ ಸಹಕಾರ ಸಿಗದೇ ನಿರಂತರವಾಗಿ ನಡೆಯುತ್ತಿರುವ ಹೋರಾಟ ಸಾವಿರ ದಿನದತ್ತ ಸಾಗಿರುವ ಹಿನ್ನಲೆಯಲ್ಲಿ ಹೊರಾಟದ ಮುಂದಿನ ನಡೆಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಸ್ಥಳೀಯ ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ಕರೆದ ಸಭೆಯಲ್ಲಿ ಮಾತನಾಡಿದ ಅವರು, ತೇರದಾಳ ತಾಲೂಕು ಘೋಷಣೆಯಾಗಿ ಹಲವಾರು ವರ್ಷಗಳೇ ಕಳೆದರೂ ತಾಂತ್ರಿಕ ತೊಂದರೆಯಿಂದ ಅಲ್ಲಿ ಇನ್ನೂ ತಾಲೂಕು ಕಛೇರಿಗಳು, ಅಧಿಕಾರಿಗಳನ್ನು ಸರ್ಕಾರ ನೇಮಿಸಲು ಸಾಧ್ಯವಾಗಿಲ್ಲ, ಅದೇ ರೀತಿ ಮಹಾಲಿಂಗಪುರ ಹೆಸರಿಗೆ ಮಾತ್ರ ತಾಲೂಕು ಘೋಷಣೆಯಾಗದೇ ಇರಲು ಮತ್ತು ಪೂರ್ಣ ಪ್ರಮಾಣದ ಅರ್ಹತೆಗಳೊಂದಿಗೆ ತಾಲೂಕು ರಚನೆಗೆ ಪೂರಕ ಅಂಶಗಳನ್ನು ಜೋಡಿಸಿದ ನಂತರ ತಾಲೂಕು ಘೋಷಣೆ ಆಗಿಯೇ ಆಗುತ್ತದೆ, ಈಗ ಸದ್ಯದಲ್ಲಿ ಮುಧೋಳ ತಾಲೂಕಿನಲ್ಲಿ ಹೋಬಳಿಯಾಗಿ ಘೋಸಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಪುರಭಾ ಸದಸ್ಯ ಶೇಖರ ಅಂಗಡಿ, ಗಂಗಾಧರ ಮೇಟಿ, ಮಹಾದೇವ ಮಾರಾಪುರ, ಬಂದೇನವಾಜ್ ಪಕಾಲಿ, ವೀರೇಶ ಆಸಂಗಿ, ಪತ್ರಕರ್ತರಾದ ಚಂದ್ರಶೇಖರ ಮೋರೆ, ಮೀರಾ ತಟಗಾರ ಮಾತನಾಡಿ,ಜೀವ ಬಿಟ್ಟೇವು ತಾಲೂಕು ಬಿಡೆವು ಎಂಬ ಗಟ್ಟಿ ನಿಲುವಿಗೆ ಬದ್ಧರಾಗಿದ್ದು ಹೋರಾಡಲು ತೀರ್ಮಾನಿಸಲಾಯಿತು.
ಮುಖಂಡರಾದ ನಿಂಗಪ್ಪ ಬಾಳಿಕಾಯಿ, ಅಣ್ಣೇಶಗೌಡ ಉಳ್ಳಾಗಡ್ಡಿ, ಸಲೀಂ ಖರೋಶಿ, ಈಶ್ವರ ಮುರಗೋಡ, ದುಂಡಪ್ಪ ಜಾಧವ, ಮಲ್ಲಪ್ಪ ಮಿರ್ಜಿ, ಪರ್ಪ ಸತ್ತಿಗೇರಿ, ಮಾರುತಿ ಖರೋಶಿ, ಎಸ್.ಸಿ.ಉಳ್ಳಾಗಡ್ಡಿ, ಇಕ್ಬಾಲ ಮದ್ದಿನ, ಮಹಾಲಿಂಗಪ್ಪ ಅವರಾದಿ, ರಫೀಕ್ ಮಾಲದಾರ, ಎಂ.ಕೆ.ಸಂಗನ್ನವರ, ರಾಜೇಂದ್ರ ಮಿರ್ಜಿ, ರವಿ ಜವಳಗಿ, ವಿ.ಆರ್.ಬಿರನಗಡ್ಡಿ, ಈರಣ್ಣ ಹಲಗತ್ತಿ, ಶಿವಾನಂದ ಹುಣಶಾಳ, ಎಂ.ಎಸ್.ಮುಗಳಖೋಡ, ಹನಮಂತ ಜಮಾದಾರ, ದುಂಡಪ್ಪ ನಾಗನೂರ ಇತರರಿದ್ದರು.
ಹೋರಾಟ ಸಮಿತಿಯ ಸಿದ್ದು ಶಿರೋಳ ನಿರೂಪಿಸಿದರು.