ಲೋಕದರ್ಶನ ವರದಿ
ಮುನವಳ್ಳಿ: ನ. 2ರಂದು ಸಮೀಪದ ಮಬನೂರ ಗ್ರಾಮದ ಶ್ರೀ ಮಾಧವಾನಂದ ಆಶ್ರಮದಲ್ಲಿ ಇಂಚಗೇರಿ ಸಾಂಪ್ರದಾಯದ ಶ್ರೀ ಸ.ಸ.ಮಾಧವಾನಂದ ಪ್ರಭೂಜಿಯವರ 104 ನೇ ಜಯಂತ್ಯೋತ್ಸವ, ತೊಟ್ಟಿಲು ಪೂಜೆ, ಸಾಮೂಹಿಕ ವಿವಾಹ ಹಾಗೂ ಶ್ರೀ ಸ.ಸ. ಕರೆಪ್ಪ ಮಹಾರಾಜರ ಅಮೃತಶಿಲಾ ಮೂತರ್ಿ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಆನಂದ ಮಾಮನಿ ಶ್ರೀ ಮಾಧವಾನಂದ ಪ್ರಭೂಜಿಯವರು ಹಾಗೂ ಶ್ರೀ ಸ.ಸ. ಕರೆಪ್ಪ ಮಹಾರಾಜರು ಸಮಾನತೆಯ ತಳಹದಿಯ ಮೇಲೆ ವಿಶ್ವಶಾಂತಿ ಕುರಿತು ಚಿಂತನೆ ನಡೆಸಿದರು. ಪ್ರತಿಯೊಬ್ಬರ ಏಳ್ಗೆಗಾಗಿ ಚಿಂತಿಸಿ ಅವರ ಉನ್ನತಿ ಬಯಸಿದ್ದಾರೆ.
ಕನರ್ಾಟಕವಷ್ಟೇ ಅಲ್ಲ ಭಾರತದ ವಿವಿಧೆಡೆ ತಿಂಗಳ ಪರ್ಯಂತರ ಪಾದಯಾತ್ರೆ ನಡೆಸಿ ಜನತೆಯಲ್ಲಿ ಧಾಮರ್ಿಕ ಮನೋಭಾವ, ಸಮಾನತೆ, ಐಕ್ಯತೆ ಕುರಿತು ಜಾಗೃತಿಯನ್ನುಂಟು ಮಾಡುವುದಲ್ಲದೇ ಭಕ್ತರು ಸನ್ಮಾರ್ಗದಲ್ಲಿ ಜೀವನ ನಡೆಸುವಂತೆ ಮಾಡಿದ್ದಾರೆ. ಶ್ರೀ ಕರೆಪ್ಪ ಮಹಾರಾಜರು ಸಾರ್ವಜನಿಕ ಆಸ್ಪತ್ರೆ, ಪ್ರೌಢಶಾಲೆ, ಆಶ್ರಯ ಮನೆಗಳನ್ನು ಸರಕಾರದಿಂದ ಮಂಜೂರ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದರು. ಮಬನೂರ ಗ್ರಾಮ ಹಾಗೂ ಇಂಚಗೇರಿ ಮಠವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸರಕಾರದಿಂದ ಸೂಕ್ತ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಇಂಚಗೇರಿ ಸಾಂಪ್ರದಾಯದ ಸಂಶೋಧಕ ಡಾ. ಎ.ಸಿ.ವಾಲಿ ಮಹಾರಾಜರು ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆಧ್ಯಾತ್ಮ ತಲುಪಬೇಕು ಎನ್ನುವುದು ಪ್ರಭೂಜಿಯವರ ತತ್ವಸಿದ್ದಾಂತವಾಗಿತ್ತು ಎಂದರು. ಶಶಿಕಾಂತ ಪಡಸಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಮುನವಳ್ಳಿಯ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ, ಇಂಚಗೇರಿಮಠದ ಶ್ರೀ ಪ್ರಭೂಜಿ ಮಹಾರಾಜರು, ತುಕಾರಾಮ ಮಹಾರಾಜರು ವಹಿಸಿದ್ದರು. ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಸುವಣರ್ಾತಾಯಿ ಹೊಸಮಠ ತೊಟ್ಟಿಲು ಪೂಜೆಯನ್ನು ನೆರವೇರಿಸಿದರು.
ಅಧ್ಯಕ್ಷತೆಯನ್ನು ಕರೆಪ್ಪ ಬಾಳಪ್ಪ ಮುರಗೋಡ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಪಂಚನಗೌಡ ದ್ಯಾಮನಗೌಡರ, ಜಿಪಂ ಸದಸ್ಯ ಫಕೀರಪ್ಪ ಹದ್ದನ್ನವರ, ಗ್ರಾಪಂ ಉಪಾಧ್ಯಕ್ಷ ಪುಂಡಲೀಕ ಮೇಟಿ, ಸುಭಾಸ ಪಾಟೀಲ, ಯಲ್ಲಪ್ಪ ನರಿ, ಭೀಮಪ್ಪ ಸಿ.ಮುರಗೋಡ, ಲಕ್ಷ್ಮಣ ಮುರಗೋಡ, ನಿಂಗಪ್ಪ ಮುರಗೋಡ, ಬೀರಪ್ಪ ಮುರಗೋಡ, ಭೀಮಪ್ಪ ಚುಂಚನೂರ, ಮುದಕಪ್ಪ ಮುರಗೋಡ, ಪುಂಡಲೀಕ ಮುರಗೋಡ, ವಿನೋಭಾ ಮುರಗೋಡ ಸೇರಿದಂತೆ ಇಂಚಗೇರಿ ಸಂಪ್ರದಾಯದ ಸದ್ಭಕ್ತರು ಇದ್ದರು. ಪಡೆಪ್ಪ ನರಿ ಸ್ವಾಗತಿಸಿದರು. ಅಶೋಕ ಬಡಿಗೇರ ನಿರೂಪಿಸಿದರು. ಮಹಾದೇವ ಬಿ. ಮುರಗೋಡ ವಂದಿಸಿದರು.
ಕಾರ್ಯಕ್ರಮದ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮಾಧವಾನಂದರ ಹಾಗೂ ಶ್ರೀ ಕರೆಪ್ಪ ಮಹಾರಾಜರ ಮೂತರ್ಿಯ ಭವ್ಯ ಮೆರವಣಿಗೆ ಆರತಿ, ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ವಾಧ್ಯ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು.