ಮುದ್ದೇಬಿಹಾಳ: 2ನೇ ಮಹಾ ಸಮ್ಮಿಲನ ಕಾರ್ಯಕ್ರಮದ ಧ್ವನಿಸುರುಳಿ ಬಿಡುಗಡೆ

ಲೋಕದರ್ಶನ ವರದಿ

ಮುದ್ದೇಬಿಹಾಳ 18: ಪಟ್ಟಣದಲ್ಲಿ ಜುಲೈ ತಿಂಗಳ ಮೊದಲ ವಾರದಲ್ಲಿ ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ನೇತೃತ್ವದಲ್ಲಿ ನಡೆಯಲಿರುವ ರಾಜ್ಯ ಕರಾಟೆ ಶಿಕ್ಷಕರ ಸಂಘದ 2ನೇ ಮಹಾ ಸಮ್ಮಿಲನ ಕಾರ್ಯಕ್ರಮದ ಪ್ರಚಾರಕ್ಕಾಗಿ ಹೊರತಂದಿರುವ ಆಡಿಯೋ ಧ್ವನಿಸುರುಳಿಯನ್ನು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರು ಮಂಗಳವಾರ ಬಿಡುಗಡೆಗೊಳಿಸಿದರು. ಬಿಇಓ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಬಾಲಕಿಯರ ಆತ್ಮರಕ್ಷಣೆಗೋಸ್ಕರ ಕರಾಟೆ ತರಬೇತಿ ನೀಡುತ್ತಿರುವ ಕರಾಟೆ ಶಿಕ್ಷಕರು ಇಲ್ಲಿ ಸಮ್ಮಿಲನಗೊಳ್ಳಲು ತೀರ್ಮಾನಿಸಿರುವುದು  ಸಂತಸದ ವಿಷಯವಾಗಿದ್ದು ಶಿಕ್ಷಣ ಇಲಾಖೆಯಿಂದ ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದರು. 

ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಡಿ.ಬಿ.ವಡವಡಗಿ ಮಾತನಾಡಿ ಈ ಸಮ್ಮಿಲನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಕರಾಟೆ ಶಿಕ್ಷಕರು ಭಾಗವಹಿಸಲಿದ್ದಾರೆ. ಆ ಹಿನ್ನೆಲೆ ಕರಾಟೆ ಶಿಕ್ಷಕರ ಸಾಧನೆ, ಕರಾಟೆ ಮಹತ್ವ ಮತ್ತು ಕರಾಟೆ ಕಲಿಯುವ ಅವಶ್ಯಕತೆಯ ಸಂಕ್ಷಿಪ್ತ ಚಿತ್ರಣ ಕಟ್ಟಿಕೊಡುವ ಪ್ರಯತ್ನವನ್ನು ಧ್ವನಿಸುರುಳಿಯಲ್ಲಿ ಆಡಿಯೋ ಮೂಲಕ ಮಾಡಲಾಗಿದೆ. ಎಂದು ತಿಳಿಸಿದರು. 

ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್.ಕರಡ್ಡಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಶಾರದಳ್ಳಿ, ಸಿಬಿಎಸ್ಇ ಸೆಂಟ್ರಲ್ ಶಾಲೆಯ ಮುಖ್ಯಾಧ್ಯಾಪಕ ಶಂಕರ ನಾಗಾವಿ, ಹಸಿರು ತೋರಣ ಗೆಳೆಯರ ಬಳಗದ ಪದಾಧಿಕಾರಿ ಅಶೋಕ ರೇವಡಿ, ಶಿಕ್ಷಣ ಸಂಯೋಜಕ ಎ.ಎಸ್.ಬಾಗವಾನ, ಸಾಯಿ ಕಂಪ್ಯೂಟರ್ ಎಜುಕೇಷನ್ ಸೊಸೈಟಿ ಮುಖ್ಯಸ್ಥ ಶರಣಬಸು ಚಲವಾದಿ, ಕಿರುತೆರೆ ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ, ಕರ್ನಾಟಕ  ನವ ನಿರ್ಮಾಣ  ಸೇನೆ ತಾಲೂಕು ಅಧ್ಯಕ್ಷ ರಾಜುಗೌಡ ತುಂಬಗಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪದಾಧಿಕಾರಿ ಶಿವಕುಮಾರ ಬಿರಾದಾರ, ಚೇತನ್ ಕೆಂಧೂಳಿ ಮತ್ತಿತರರು ಉಪಸ್ಥಿತರಿದ್ದರು.