ಕಲಬುರಗಿ, ಮಾ 12, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ರಾಜಾಪುರ ಬಳಿ ಗುರುವಾರ ನಡೆದಿದೆ.35 ವರ್ಷದ ಸೋನಾಬಾಯಿ ಪವಾರ್ ಹಾಗೂ ಆಕೆಯ ಮಗಳು ಅಂಜುಬಾಯಿ(16) ಮೃತ ದುರ್ದೈವಿಗಳು.ಗಿರಣಿಯಲ್ಲಿ ಹಿಟ್ಟು ಬೀಸಿಕೊಂಡು ರಸ್ತೆ ದಾಟಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.